Viral News: ಚಕ್ಕುಲಿ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು
ಮಂಚಿರ್ಯಾಲ್‌ನ ಹಮಾಲಿವಾಡದ ಎನ್ ರಂಗರಾವ್ (65) ದಿನಗೂಲಿ ಕಾರ್ಮಿಕ ಮಂಗಳವಾರ ಸಂಜೆ(ಜ.30) ಚಹಾ ಕುಡಿಯುವ ವೇಳೆ ಚಕ್ಕುಲಿ ತಿಂದಿದ್ದಾರೆ. ಎಲ್ಲರ ಜೊತೆಯಲ್ಲಿ ಮಾತನಾಡುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದ ರಂಗರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಕುಳಿತವರು ಕುಳಿತಿದ್ದಂತೆ, ನಿಂತಿದ್ದವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಈಗಷ್ಟೇ ಖುಷಿಯಿಂದ ಮಾತನಾಡುತ್ತಿದ್ದ ವ್ಯಕ್ತಿ ಕ್ಷಣಾರ್ಧದಲ್ಲೇ ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗಿದೆ. ಇದೀಗಾ ಅಂತದ್ದೇ ಘಟನೆಯೊಂದು ತೆಲಂಗಾಣದ ಮಂಚಿರ್ಯಾಲ್ನಲ್ಲಿ ನಡೆದಿದೆ. ಮೃತ ವ್ಯಕ್ತಿ ಸಂಜೆಯ ಚಹಾದ ಸಮಯದಲ್ಲಿ ಚಕ್ಕುಲಿ ತಿಂದಿದ್ದು, ಅದು ಗಂಟಲಿನಲ್ಲಿ ಸಿಲುಕಿಕೊಂಡಿದೆ, ಪರಿಣಾಮ ಉಸಿರಾಟದ ಸಮಸ್ಯೆಯಿಂದಾಗಿ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಮಂಚಿರ್ಯಾಲ್‌ನ ಹಮಾಲಿವಾಡದ ಎನ್ ರಂಗರಾವ್ (65) ದಿನಗೂಲಿ ಕಾರ್ಮಿಕ ಮಂಗಳವಾರ ಸಂಜೆ(ಜ.30) ಚಹಾ ಕುಡಿಯುವ ವೇಳೆ ಚಕ್ಕುಲಿ ತಿಂದಿದ್ದಾರೆ. ಎಲ್ಲರ ಜೊತೆಯಲ್ಲಿ ಮಾತನಾಡುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದ ರಂಗರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಇದನ್ನೂ ಓದಿ: 1 ಕಪ್ ಬೇಳೆ ಸಾರಿನ ಬೆಲೆ 25 ಸಾವಿರ ರೂ. ಯಾಕಿಷ್ಟು ದುಬಾರಿ?; ವಿಡಿಯೋ ವೈರಲ್
ರಂಗರಾವ್ ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಜೆಯ ವೇಳೆ ಚಹಾದ ಜೊತೆಗೆ ಸೇವಿಸಿದ್ದ ಚಕ್ಕುಲಿ ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿ ರಂಗರಾವ್ ಮೃತಪಟ್ಟಿರುವುದು ತನಿಖೆಯ ವೇಳೆ ತಿಳಿದುಬಂದಿದ್ದು, ಮಂಚಿರ್ಯಾಲ ಸಬ್ ಇನ್ಸ್ ಪೆಕ್ಟರ್ ರಾಜೇಂದರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ