ಚಳಿಗಾಲ ಬಂತೆಂದರೆ ಸಾಕು, ಇದರ ಜೊತೆಗೆ ಶೀತ, ಕೆಮ್ಮು, ಜ್ವರ ಎಲ್ಲವೂ ಪ್ರಾರಂಭವಾಗುತ್ತದೆ. ಮುಂಬೈನ ಪ್ರಾಣ ಹೆಲ್ತ್ ಕೇರ್ ಅಂಡ್ ಅಕಾಡೆಮಿ ಫೋರ್ ಆಯುರ್ವೇದದ,ಆಯುರ್ವೇದ ಮತ್ತು ಕರುಳಿನ ತಜ್ಞರಾದ ಡಾ.ಡಿಂಪಲ್ ರವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುರ್ವೇದದ ಪರಿಹಾರಗಳ ಕುರಿತು ಸಲಹೆ ನೀಡಿದ್ದಾರೆ.
ಶ್ವಾಸಕೋಶಗಳು ಉಸಿರಾಟಕ್ಕೆ ಅತ್ಯಗತ್ಯ ಏಕೆಂದರೆ ಅವು ದೇಹದ ಎಲ್ಲಾ ಅಂಗಗಳಿಗೆ ಆಮ್ಲಜನಕ-ಸಮೃದ್ಧ ರಕ್ತವನ್ನು ತಲುಪಿಸುತ್ತವೆ ಮತ್ತು ಜೀವಕೋಶಗಳಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುತ್ತವೆ.
ಆದ್ದರಿಂದ ಈ ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಕಡೆ ಗಮನಹರಿಸಿ. ಕಟ್ಟಿದ ಮೂಗಿನಿಂದಾಗಿ ನಿಮಗೆ ಉಸಿರಾಟದಲ್ಲಿ ಸಾಕಷ್ಟು ಕಿರಿಕಿರಿಯ ಅನುಭವವಾಗುತ್ತಿದ್ದರೆ, ತಜ್ಞರು ನೀಡಿರುವ ಸಲಹೆಯನ್ನು ಪಾಲಿಸಿ.
ಅರಿಶಿನ: ಇದು ನಿಮ್ಮ ಉಸಿರಾಟದ ಹಾದಿಯಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರಿಶಿನದಲ್ಲಿರುವ ಸಕ್ರಿಯ ಸಂಯುಕ್ತ ಕರ್ಕ್ಯುಮಿನ್ ಶ್ವಾಸಕೋಶವನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಉಸಿರಾಟದಲ್ಲಿನ ಮಾಲಿನ್ಯಕಾರಕವನ್ನು ಹೊರಹಾಕುತ್ತದೆ.
ಶುಂಠಿ: ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಸಾಮಾನ್ಯ ಕೆಮ್ಮು ಮತ್ತು ಶೀತವನ್ನು ನಿವಾರಿಸುತ್ತದೆ. ಇದು ಉಸಿರಾಟದ ಪ್ರದೇಶದಿಂದ ವಿಷವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಕಾಲೋಚಿತ ಜ್ವರ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ.
ಎಳ್ಳಿನ ಎಣ್ಣೆ: ಎಳ್ಳಿನ ಎಣ್ಣೆ ಶ್ವಾಸಕೋಶವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಪ್ರತಿ ಮೂಗಿನ ಹೊಳ್ಳೆಯಲ್ಲಿ ಎರಡು ಹನಿ ಎಣ್ಣೆಯನ್ನು ದೀರ್ಘ ಉಸಿರಿನೊಂದಿಗೆ ತೆಗೆದುಕೊಳ್ಳಿ. ಈ ಪ್ರಕ್ರಿಯೆಯು ಮೂಗಿನ ಮಾರ್ಗವನ್ನು ಸ್ವಚ್ಛಗೊಳಿಸುತ್ತದೆ. ಆಯುರ್ವೇದದಲ್ಲಿ, ಈ ಪ್ರಕ್ರಿಯೆಯನ್ನು ನಾಸ್ಯ ಎಂದು ಕರೆಯಲಾಗುತ್ತದೆ.
ಇದನ್ನು ಓದಿ: ಅನಿಯಮಿತ ಅವಧಿಯ ಋತುಸ್ರಾವಕ್ಕೆ ಇಲ್ಲಿದೆ ಆಯುರ್ವೇದ ಗಿಡಮೂಲಿಕೆಗಳು
ಪ್ರಾಣಾಯಾಮ: ಭಸ್ತ್ರಿಕಾ ಮತ್ತು ಕಪಾಲ್ ಭಾರತಿ ನಿಮ್ಮ ದೇಹಕ್ಕೆ ಒಳ್ಳೆಯದು. ಈ ಪ್ರಾಣಾಯಾಮಗಳು ಶ್ವಾಸಕೋಶವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ರೋಗಿಗಳು ಇದನ್ನು ನಿಧಾನಗತಿಯಲ್ಲಿ ಮಾಡಬೇಕು ಎಂದು ಸಲಹೆ ನೀಡುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: