World Diabetes Day 2022: ಈ ವಾರಾಂತ್ಯದ ರಜಾದಿನಗಳಲ್ಲಿ ಮಧುಮೇಹದ ಚಿಂತೆ ಬಿಟ್ಟು ನಿಮ್ಮವರೊಂದಿಗೆ ಪ್ರಯಾಣ ಬೆಳೆಸಿ

1922 ರಲ್ಲಿ ಇನ್ಸುಲಿನ್ ಅನ್ನು ಕಂಡುಹಿಡಿದ ಸರ್ ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ.

World Diabetes Day 2022: ಈ ವಾರಾಂತ್ಯದ ರಜಾದಿನಗಳಲ್ಲಿ ಮಧುಮೇಹದ ಚಿಂತೆ ಬಿಟ್ಟು ನಿಮ್ಮವರೊಂದಿಗೆ ಪ್ರಯಾಣ ಬೆಳೆಸಿ
World Diabetes Day 2022Image Credit source: Cute Calendar
Follow us
| Updated By: ಅಕ್ಷತಾ ವರ್ಕಾಡಿ

Updated on:Nov 12, 2022 | 3:36 PM

ಪ್ರತಿ ದಿನ ಹೊರಗೆ ತಿನ್ನುವುದು ಮತ್ತು ನಿಮ್ಮ ದೇಹದ ಸಕ್ಕರೆ ಮಟ್ಟವನ್ನು ಗಮನಿಸದೇ ಇರುವುದು ಇದು ವಾರಾಂತ್ಯದ ರಜಾದಿನಗಳಲ್ಲಿ ನಿಮಗೆ ತೊಂದರೆನ್ನುಂಟು ಮಾಡಬಹುದು. ಆದ್ದರಿಂದ ಈ ವಾರಾಂತ್ಯದಲ್ಲಿ ನಿಮ್ಮ ಪ್ರಯಾಣವನ್ನು ಆನಂದಿಸಲು ಸಹಾಯ ಮಾಡುವ ಈ ಸಲಹೆಗಳನ್ನು ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ರೂಢಿಸಿಕೊಳ್ಳಿ.

1922 ರಲ್ಲಿ ಇನ್ಸುಲಿನ್ ಅನ್ನು ಕಂಡುಹಿಡಿದ ಸರ್ ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ನಾಳೆಯ ಆರೋಗ್ಯಕರ ಜೀವನಕ್ಕಾಗಿ ಇಂದಿನ ಆಹಾರ ಕ್ರಮದ ಬಗ್ಗೆ ಎಚ್ಚರ ವಹಿಸಿ. ಜೊತೆಗೆ ಮಧುಮೇಹ ರೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ಹಿಂದೂಸ್ಥಾನ್ ಟೈಮ್ ಸಂದರ್ಶನದಲ್ಲಿ ಅಬಾಟ್‌ನಲ್ಲಿನ ವೈದ್ಯಕೀಯ ತಜ್ಞರಾದ ಡಾ.ಗಣೇಶ್ ಕಾಧೆರವರು ನಿಮ್ಮ ಮಧುಮೇಹವನ್ನು ನಿರ್ವಹಿಸುವಾಗ ನಿಮ್ಮ ಪ್ರಯಾಣವನ್ನು ಆನಂದಿಸಲು ಸಹಾಯ ಮಾಡುವ ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ. ಇದರಿಂದ ನೀವು ಕಡಿಮೆ ಚಿಂತೆಯಿಂದ ಪ್ರಯಾಣವನ್ನು ಆನಂದಿಸಬಹುದಾಗಿದೆ.

1. ನಿರ್ದಿಷ್ಟ ಪ್ರದೇಶದ ಆಹಾರದ ಕುರಿತು ತಿಳಿದುಕೊಳ್ಳುವುದು ಉತ್ತಮ: ನಿಮ್ಮ ಪ್ರವಾಸದ ಮೊದಲು, ನೀವು ಹೋಗುವ ಪ್ರದೇಶದಲ್ಲಿ ಲಭ್ಯವಿರುವ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸಂಶೋಧಿಸಿ, ವಿಶೇಷವಾಗಿ ನೀವು ಅಲ್ಲಿನ ಆಹಾರದ ಬಗ್ಗೆ ತಿಳಿದಿಲ್ಲದಿದ್ದರೆ. ನೀವು ಭೇಟಿ ನೀಡುತ್ತಿರುವ ಪ್ರದೇಶದಲ್ಲಿ ಯಾವ ರೀತಿಯ ಆಹಾರಗಳನ್ನು ಆಯ್ಕೆ ಮಾಡಬೇಕೆಂಬುದರ ಕುರಿತು ಸಲಹೆಗಾಗಿ ನಿಮ್ಮ ಮಧುಮೇಹ ತಜ್ಞರನ್ನು ಸಂಪರ್ಕಿಸಿ.

2. ಆಹಾರ ಸೇವನೆಯ ಸಮಯವನ್ನು ನಿಗದಿಪಡಿಸಿ: ಒಂದೊಂದು ದೇಶಗಳಲ್ಲಿ ಒಂದೊಂದು ಸಮಯದಲ್ಲಿ ಆಹಾರ ಸೇವನೆ ಸಮಯ ನಿಗದಿಯಾಗಿರುತ್ತದೆ.ಉದಾಹರಣೆಗೆ, ದಕ್ಷಿಣ ಭಾರತದಲ್ಲಿ, ರಾತ್ರಿಯ 7:30 ರ ಸುಮಾರಿಗೆ ಊಟದ ಸಮಯವು ಸಾಕಷ್ಟು ಮುಂಚೆಯೇ ಇರುತ್ತದೆ ಆದರೆ ಸ್ಪೇನ್‌ನಲ್ಲಿ ಜನರು ರಾತ್ರಿಯ ಊಟವನ್ನು ತಡವಾಗಿ, ಸುಮಾರು 9 ಅಥವಾ 10 ಗಂಟೆಗೆ ತಿನ್ನುತ್ತಾರೆ. ನೀವು ಮಧುಮೇಹದಿಂದ ಪ್ರಯಾಣಿಸುತ್ತಿದ್ದರೆ ಅದು ತೊಂದರೆಯನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಆಹಾರ ಸೇವನೆಯ ಸಮಯ ನಿಗದಿಪಡಿಸಿಕೊಳ್ಳಿ. ಸಕ್ಕರೆ ರಹಿತ ಸ್ಮಾರ್ಟ್ ಪ್ಯಾಕಿಂಗ್ ಆಹಾರವನ್ನು ನಿಮ್ಮ ಜೊತೆಗಿಟ್ಟುಕೊಳ್ಳಿ.

3. ಪ್ರಯಾಣದ ಮುಂಚೆಯೇ ಸರಿಯಾದ ಆಹಾರ ಕ್ರಮ ರೂಢಿಸಿಕೊಳ್ಳಿ: ನೀವು ಪ್ರಯಾಣಿಸುವ ಕೆಲವು ವಾರಗಳ ಮುಂಚೆಯೇ ಉತ್ತಮ ಆಹಾರ ಕ್ರಮವನ್ನು ರೂಢಿಸಿ. ಇಲ್ಲದಿದ್ದರೆ ದೂರ ಪ್ರಯಾಣದ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಹೆಚ್ಚಿದೆ.

4. ನೀವು ತಿನ್ನುವ ಆಹಾರದ ಬಗ್ಗೆ ವಿಚಾರಿಸುವುದು ಅಗತ್ಯ: ನೀವು ಪ್ರಯಾಣಿಸಿದ ಪ್ರದೇಶಗಳಲ್ಲಿ ವಿಭಿನ್ನ ರೀತಿಯ ಆಹಾರ ಪದ್ದತಿಗಳಿರುತ್ತದೆ. ಆದ್ದರಿಂದ ನಿಮಗೆ ತಿಳಿಯದೇ ಇರುವ ಆಹಾರಗಳನ್ನು ಸೇವಿಸುವ ಮುನ್ನ ಆದಷ್ಟು ಆಹಾರದ ಬಗ್ಗೆ ವಿಚಾರಿಸಿ ತಿನ್ನಿ. ಯಾಕೆಂದರೆ ನೀವು ತಿನ್ನುವ ಆಹಾರ ಪದಾರ್ಥಗಳಲ್ಲಿ ಎಷ್ಟು ಸಕ್ಕರೆ ಅಂಶವನ್ನು ಸೇರಿಸಲಾಗಿದೆ ಎಂಬುದು ತಿಳಿದಿರುವುದಿಲ್ಲ. ಇದು ನಿಮ್ಮ ಆರೋಗ್ಯ ಮೇಲೆ ಪರಿಣಾಮ ಬೀರಬಹುದು.

ಇದನ್ನು ಓದಿ: ನೀವು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಆಯುರ್ವೇದದ ಪರಿಹಾರಗಳು

5. ಆಹಾರ ಕ್ರಮ ರೂಢಿಸಿಕೊಳ್ಳಿ: ಮೊದಲು, ನಿಮ್ಮ ತಟ್ಟೆಯ ಅರ್ಧ ಭಾಗ ತರಕಾರಿಗಳೊಂದಿಗೆ ತುಂಬಿಸಿ, ಅಂದರೆ ನಿಮ್ಮ ಎಷ್ಟೇ ದೂರ ಪ್ರಯಾಣಿಸಿದರೂ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಡೀಪ್-ಫ್ರೈಡ್ ಮಾಡಿರುವ ಆಹಾರಗಳಿಂದ ದೂರವಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 1:40 pm, Sat, 12 November 22

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್