Cancer In Pets: ಈ ಲಕ್ಷಣಗಳು ನಿಮ್ಮ ಸಾಕು ಪ್ರಾಣಿಗಳಲ್ಲಿ ಕಂಡುಬಂದರೆ ಎಚ್ಚರವಹಿಸಿ

ಸಾಮಾನ್ಯವಾಗಿ ಸಾಕು ಪ್ರಾಣಿಗಳಲ್ಲಿ ಬ್ರೀಡಿಂಗ್ ಸಮಯದಲ್ಲಿನ ಮಾಲೀಕರ ಬೇಜಾವಬ್ದಾರಿತನ, ಆಹಾರ ಪದ್ದತಿ, ಜೀವನ ಶೈಲಿಗೆ ಸಂಬಂಧಿಸಿದ ಅಂಶಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ.

Cancer In Pets: ಈ ಲಕ್ಷಣಗಳು ನಿಮ್ಮ ಸಾಕು ಪ್ರಾಣಿಗಳಲ್ಲಿ ಕಂಡುಬಂದರೆ ಎಚ್ಚರವಹಿಸಿ
Cancer In PetsImage Credit source: Google
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 12, 2022 | 5:02 PM

ಇಂದು ಸಾಕು ಪ್ರಾಣಿಯೂ ಮನೆಯ ಒಂದು ಸದಸ್ಯರಂತೆಯೇ ಆಗಿಬಿಟ್ಟಿದೆ. ಅಷ್ಟು ಪ್ರೀತಿಯಿಂದ ಸಾಕಿರುವ ಪ್ರಾಣಿಗಳ ಆರೋಗ್ಯದ ಕಡೆ ಗಮನಹರಿಸುವುದು ಅತ್ಯಂತ ಅಗತ್ಯವಾಗಿದೆ.

ಕ್ಯಾನ್ಸರ್ ಕಾಯಿಲೆ ಕೇವಲ ಮನುಷ್ಯರಲ್ಲಿ ಮಾತ್ರ ಸಂಭವಿಸುತ್ತದೆ ಎಂದು ನೀವು ಭಾವಿಸಿದ್ದರೆ, ಅದು ತಪ್ಪು. ಬದಲಾಗಿ ನೀವು ಮುದ್ದಿನಿಂದ ಸಾಕಿರುವ ನಿಮ್ಮ ಸಾಕಿ ಪ್ರಾಣಿಗಳಲ್ಲಿ ಕೂಡ ಈ ರೋಗ ಲಕ್ಷಣ ಕಂಡುಬರಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಸಾಕುಪ್ರಾಣಿಗಳ ಆರೋಗ್ಯದ ಕಡೆ ಕೂಡ ಗಮನ ಹರಿಸಿ.

ಸಾಮಾನ್ಯವಾಗಿ ಸಾಕು ಪ್ರಾಣಿಗಳಲ್ಲಿ ಬ್ರೀಡಿಂಗ್ ಸಮಯದಲ್ಲಿನ ಮಾಲೀಕರ ಬೇಜಾವಬ್ದಾರಿತನ, ಆಹಾರ ಪದ್ದತಿ, ಜೀವನ ಶೈಲಿಗೆ ಸಂಬಂಧಿಸಿದ ಅಂಶಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ.

ಅಮೇರಿಕನ್ ವೆಟರ್ನರಿ ಮೆಡಿಕಲ್ ಅಸೋಸಿಯೇಷನ್ ​​(AVMA) ಪ್ರಕಾರ, 10 ವರ್ಷಕ್ಕಿಂತ ಮೇಲ್ಪಟ್ಟ ಸಾಕುಪ್ರಾಣಿಗಳಲ್ಲಿ ಶೇಕಡಾ 50ರಷ್ಟು ಪ್ರಾಣಿಗಳ ಸಾವಿಗೆ ಕ್ಯಾನ್ಸರ್ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.

ಮನುಷ್ಯನಂತೆಯೇ ಪ್ರಾಣಿಗಳಲ್ಲಿ ಚರ್ಮ, ಸ್ತನ, ತಲೆ ಮತ್ತು ಕುತ್ತಿಗೆ, ಲಿಂಫೋಮಾ, ಲ್ಯುಕೇಮಿಯಾ, ಕಿಬ್ಬೊಟ್ಟೆ ಮತ್ತು ಮೂಳೆಗೆ ಸಂಬಂಧಪಟ್ಟ ಕ್ಯಾನ್ಸರ್ ಗಳು ಕಂಡುಬರುತ್ತದೆ.

ಸಾಕುಪ್ರಾಣಿಗಳಲ್ಲಿನ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಅರ್ಧದಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ಚಿಕಿತ್ಸೆ ನೀಡಬಹುದು. ಆದ್ದರಿಂದ ಈ ಕೆಳಗಿನ ಲಕ್ಷಣಗಳು ನಿಮ್ಮ ಸಾಕು ಪ್ರಾಣಿಗಳಲ್ಲಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ವಿಗ್ಲ್ಸ್‌ನ ವೈದ್ಯಕೀಯ ನಿರ್ದೇಶಕರಾದ ಡಾ ಸಂಜೀವ್ ಮಾಹಿತಿ ನೀಡಿದ್ದಾರೆ.

ಗುಳ್ಳೆ ಮತ್ತು ಊತ: ನಿಮ್ಮ ಸಾಕು ಪ್ರಾಣಿಯ ದೇಹದ ಮೇಲೆ ಯಾವುದೇ ಅಸಹಜ ಊತಗಳು ಅಥವಾ ಗುಳ್ಳೆಗಳು ಉಂಟಾಗಿದೆಯೇ ಎಂದು ದಿನಕ್ಕೆ ಒಂದು ಬಾರಿಯಾದರೂ ಪರೀಕ್ಷಿಸಿ. ಯಾವುದಾದರೂ ಗುಳ್ಳೆ, ಊತಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ಪಶುವೈದ್ಯರನ್ನು ಭೇಟಿ ಮಾಡುವುದು ಅಗತ್ಯವಾಗಿದೆ.

ವಾಸನೆ: ಸಾಕುಪ್ರಾಣಿಗಳು ಯಾವಾಗಲೂ ಆಹ್ಲಾದಕರವಾದ ವಾಸನೆಯನ್ನು ಹೊಂದಿರುವುದಿಲ್ಲ, ಆದರೆ ಸ್ನಾನದ ನಂತರವೂ ದೇಹದಲ್ಲಿ ದೀರ್ಘಕಾಲದ ವಾಸನೆ ಇದ್ದರೆ, ನಿಮ್ಮ ಸಾಕು ಪ್ರಾಣಿ ಆರೋಗ್ಯವಾಗಿಲ್ಲ ಎಂದರ್ಥ.

ತೂಕ ನಷ್ಟ: ನಿಮ್ಮ ಸಾಕುಪ್ರಾಣಿಗಳ ದಿನನಿತ್ಯದ ಹಾಗೂ ಆಹಾರ ಸೇವನೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ತೂಕ ಕಡಿಮೆಯಾಗುತ್ತಿದ್ದರೆ, ಇದು ಕ್ಯಾನ್ಸರ್ ಆರಂಭಿಕ ಚಿಹ್ನೆಯಾಗಿರಬಹುದು. ಆದ್ದರಿಂದ ಪಶು ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಿದೆ.

ಕೆಮ್ಮು ಮತ್ತು ಉಸಿರಾಟದ ತೊಂದರೆ: ದೀರ್ಘಕಾಲದ ಕೆಮ್ಮು, ವಿಶೇಷವಾಗಿ ವಯಸ್ಸಾದ ನಾಯಿಗಳಲ್ಲಿ ಕಂಡುಬಂದರೆ ಎಚ್ಚರ ವಹಿಸುವುದು ಅಗತ್ಯವಾಗಿದೆ.

ಆಂತರಿಕ ರಕ್ತಸ್ರಾವ: ಕೆಲವೊಮ್ಮೆ ಗೆಡ್ಡೆಯ ಒಡೆತವು ಆಂತರಿಕ ರಕ್ತಸ್ರಾವವನ್ನು ಉಂಟುಮಾಡುತ್ತದೆ, ಇದು ನಿಮಗೆ ಹೊರಗಡೆಯಿಂದ ತಿಳಿಯದಿದ್ದರೂ ಸಹ, ನಿಮ್ಮ ಸಾಕು ಪ್ರಾಣಿಯ ದೈನಂದಿನ ಚಟುವಟಿಕೆಗಳಲ್ಲಿನ ಉತ್ಸಾಹ ತೋರದೆ ಇದ್ದಾಗ ಪಶುವೈದ್ಯರನ್ನು ಭೇಟಿ ಮಾಡಿ, ಸರಿಯಾದ ಪರಿಹಾರ ಕಂಡುಕೊಳ್ಳಿ.

ಅತಿಯಾದ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ: ನಿಮ್ಮ ಸಾಕುಪ್ರಾಣಿಗಳು ಅತಿಯಾದ ನೀರನ್ನು ಸೇವಿಸುತ್ತಿದ್ದರೆ ಅಥವಾ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ, ಇದು ದೇಹದೊಳಗೆ ಗಡ್ಡೆಯ ರಚನೆಯ ಸಂಕೇತವಾಗಿರಬಹುದು.

ಊದಿಕೊಂಡ ಭಾಗಗಳು :

ದುಗ್ಧರಸ ಗ್ರಂಥಿಗಳು ದವಡೆ, ಭುಜಗಳು, ಆರ್ಮ್ಪಿಟ್ಗಳು ಮತ್ತು ಕಾಲುಗಳ ಹಿಂದೆ ಇಂತಹ ಪ್ರದೇಶಗಳಲ್ಲಿ ಊತವು ಸಾಮಾನ್ಯವಾಗಿ ನಿಮ್ಮ ಸಾಕುಪ್ರಾಣಿಗಳಲ್ಲಿ ಸಂಭವನೀಯ ಕ್ಯಾನ್ಸರ್ ನ ಪ್ರಾರಂಭಿಕ ಹಂತವಾಗಿದೆ.

ಸ್ರವಿಸುವಿಕೆ:

ದೇಹದ ನೈಸರ್ಗಿಕ ತೆರೆಯುವಿಕೆಯಿಂದ ಯಾವುದೇ ರೀತಿಯ ಸ್ರವಿಸುವಿಕೆಯು ಅಂದರೆ ರಕ್ತ, ಕೀವು, ಇತ್ಯಾದಿ ಆಂತರಿಕ ಆರೋಗ್ಯದ ಕಾಳಜಿಯ ಸಂಕೇತವಾಗಿರಬಹುದು, ಅವುಗಳಲ್ಲಿ ಒಂದು ಗೆಡ್ಡೆಗಳನ್ನು ಒಳಗೊಂಡಿರುತ್ತದೆ.

ಹೆಚ್ಚಿನ ದಣಿವು: ಸಾಮಾನ್ಯವಾಗಿ ಆಟದ ಸಮಯದಿಂದ ದೂರ ಸರಿಯುತ್ತಿದೆಯೇ? ಅಥವಾ ಹೆಚ್ಚಾಗಿ ಮಲಗಿಕೊಂಡೇ ಇರುತ್ತಿದ್ದರೆ, ಇದು ಕ್ಯಾನ್ಸರ್ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿರಬಹುದು.

ಇದನ್ನು ಓದಿ: ಅನಿಯಮಿತ ಅವಧಿಯ ಋತುಸ್ರಾವಕ್ಕೆ ಇಲ್ಲಿದೆ ಆಯುರ್ವೇದ ಗಿಡಮೂಲಿಕೆಗಳು

ಆದ್ದರಿಂದ ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ. ಆದಷ್ಟು ಬೇಗ ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ. ಇದು ಒಂದು ಮೂಕ ಪ್ರಾಣಿಯ ಜೀವವನ್ನು ಉಳಿಸಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 4:07 pm, Sat, 12 November 22

ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!