AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Irregular Period: ಅನಿಯಮಿತ ಅವಧಿಯ ಋತುಸ್ರಾವಕ್ಕೆ ಇಲ್ಲಿದೆ ಆಯುರ್ವೇದ ಗಿಡಮೂಲಿಕೆಗಳು

ನಿಮ್ಮ ಅನಿಯಮಿತ ಅವಧಿಯ ಋತುಸ್ರಾವದ ಸಮಸ್ಯೆಗೆ ಮುಂಬೈನ ಪ್ರಾಣ ಹೆಲ್ತ್ ಕೇರ್ ಅಂಡ್ ಅಕಾಡೆಮಿ ಫೋರ್ ಆಯುರ್ವೇದದ,ಆಯುರ್ವೇದ ಮತ್ತು ಕರುಳಿನ ತಜ್ಞರಾದ ಡಾ.ಡಿಂಪಲ್ ಉತ್ತಮ ಸಲಹೆ ನೀಡಿದ್ದಾರೆ.

Irregular Period: ಅನಿಯಮಿತ ಅವಧಿಯ ಋತುಸ್ರಾವಕ್ಕೆ ಇಲ್ಲಿದೆ ಆಯುರ್ವೇದ ಗಿಡಮೂಲಿಕೆಗಳು
Irregular PeriodImage Credit source: myUpchar
TV9 Web
| Edited By: |

Updated on: Nov 12, 2022 | 10:44 AM

Share

ಇಂದಿನ ಬದಲಾದ ಜೀವನಶೈಲಿಯ ಆಧಾರದ ಮೇಲೆ ನಿಮ್ಮ ಋತುಚಕ್ರದ ಮೇಲೆ ಪರಿಣಾಮ ಬೀರುವ ಹಲವು ಕಾರಣಗಳಿವೆ ಎಂಬುದು ತಿಳಿದಿರುವ ವಿಷಯ. ಆದರೆ ಈ ತರಹದ ಬದಲಾವಣೆಗಳು ನಿಮ್ಮ ದೇಹದಲ್ಲಿ ಕಂಡುಬಂದರೆ ನಿರ್ಲಕ್ಷಿಸದಿರಿ. ವ್ಯಾಯಾಮ, ಧೂಮಪಾನ, ಮದ್ಯಪಾನ, ದೂರ ಪ್ರಯಾಣ, ಅಥವಾ ಯಾವುದೇ ರೀತಿಯ ಹಾರ್ಮೋನ್ ಔಷಧಿಗಳನ್ನು ತೆಗೆದುಕೊಳ್ಳುವುದು ಪಿರಿಯಡ್ಸ್ ಬದಲಾವಣೆಗೆ ಪ್ರಮುಖಕಾರಣಗಳಾಗಿವೆ. ರಕ್ತದೊತ್ತಡದ ಔಷಧಿಗಳು, ಕೀಮೋಥೆರಪಿ, ಖಿನ್ನತೆ-ಶಮನಕಾರಿಗಳು ಮುಂತಾದ ನಿಯಮಿತ ಔಷಧಿಗಳೂ ಸಹ ಮಹಿಳೆಯ ಋತುಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ನಿಮ್ಮ ಅನಿಯಮಿತ ಅವಧಿಯ ಋತುಸ್ರಾವದ ಸಮಸ್ಯೆಗೆ ಮುಂಬೈನ ಪ್ರಾಣ ಹೆಲ್ತ್ ಕೇರ್ ಅಂಡ್ ಅಕಾಡೆಮಿ ಫೋರ್ ಆಯುರ್ವೇದದ,ಆಯುರ್ವೇದ ಮತ್ತು ಕರುಳಿನ ತಜ್ಞರಾದ ಡಾ.ಡಿಂಪಲ್ ಉತ್ತಮ ಸಲಹೆ ನೀಡಿದ್ದಾರೆ. ಹಾಗಿದ್ದರೆ ಪಿರಿಯಡ್ಸ್ ರೆಗ್ಯುಲರ್ ಆಗಿ ಆಗಲು ಇಲ್ಲಿರುವ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳಿ.

ಇಂಗು: ಇದು ಸ್ತ್ರೀ ಹಾರ್ಮೋನ್ ಪ್ರೊಜೆಸ್ಟರಾನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ಗರ್ಭಾಶಯಕ್ಕೆ ರಕ್ತದ ಹರಿವನ್ನು ಸುಧಾರಿಸುತ್ತದೆ.ಇದರಿಂದಾಗಿ ನಿಮ್ಮ ಪಿರಿಯಡ್ಸ್ ರೆಗ್ಯುಲರ್ ಆಗುವಂತೆ ಮಾಡುತ್ತದೆ. ಆದ್ದರಿಂದ ಅನಿಯಮಿತ ಅವಧಿಯ ಋತುಸ್ರಾವದ ಸಮಸ್ಯೆಯಿಂದ ಬಳಲುತ್ತಿರುವವರು ಮಜ್ಜಿಗೆಯೊಂದಿಗೆ ಇಂಗು ಬೆರೆಸಿ ಸೇವಿಸಿ ಫಲಿತಾಂಶ ತಿಳಿದುಕೊಳ್ಳಿ.

ಲೈಕೋರೈಸ್: ಅಕ್ಕಿ ತೊಳೆದ ನೀರಿನೊಂದಿಗೆ ಸೇವಿಸಿದಾಗ ಲೈಕೋರೈಸ್ ಋತುಚಕ್ರವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಲೈಕೋರೈಸ್‌ನ ಪ್ರಯೋಜನಗಳನ್ನು ಪಡೆಯುವ ಇನ್ನೊಂದು ವಿಧಾನವೆಂದರೆ ಅದರ ಬೇರುಗಳಿಂದ ಮಾಡಿದ ಚಹಾವನ್ನು ಕುಡಿಯುವುದು.

ದಾಸವಾಳ: ದಾಸವಾಳ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಜೊತೆಗೆ ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಗೆ ಪರಿಣಾಮಕಾರಿಯಾಗಿದೆ. ಅನಿಯಮಿತ ಋತುಸ್ರಾವದ ಸಮಸ್ಯೆಯಿಂದ ಬಳಲುತ್ತಿರುವವರು ದಾಸವಾಳದ ಚಹಾವನ್ನು ಕುಡಿಯುವುದ್ದರಿಂದ ನಿಮ್ಮ ಸಮಸ್ಯೆಗೆ ಒಂದು ಉತ್ತಮ ಪರಿಹಾರವಾಗಿದೆ.

ಹಸಿ ಪಪ್ಪಾಯಿ: ಪ್ರಮುಖವಾಗಿ ಹಸಿ ಪಪ್ಪಾಯಿಯನ್ನು ಋತುಸ್ರಾವದ ಅವಧಿಗಳಲ್ಲಿ ಸೇವಿಸಬಾರದು ಏಕೆಂದರೆ ಅದು ಹೆಚ್ಚಿನ ಉಷ್ಣಾಂಶವನ್ನು ಉಂಟುಮಾಡುತ್ತದೆ. ಆದ್ದರಿಂದ ನಿಮ್ಮ ಅವಧಿ ಪ್ರಾರಂಭವಾಗುವ ಮೊದಲು ನೀವು ಈ ಮನೆಮದ್ದನ್ನು ಬಳಸಬಹುದು. ಗರ್ಭಿಣಿಯರು ಹಸಿ ಪಪ್ಪಾಯಿಯನ್ನು ಸೇವಿಸಬಾರದು. ಏಕೆಂದರೆ ಇದು ಗರ್ಭಾಶಯದ ಸ್ನಾಯುಗಳ ಸಂಕೋಚನವನ್ನು ಉಂಟುಮಾಡುತ್ತದೆ, ಇದು ಗರ್ಭಪಾತಕ್ಕೆ ಕಾರಣವಾಗಬಹುದು.

ಇದನ್ನು ಓದಿ: ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ನಿಮ್ಮ ಚರ್ಮದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು, ಎಚ್ಚರದಿಂದಿರಿ

ಹಸಿ ಪಪ್ಪಾಯಿಯು ಕಬ್ಬಿಣ, ಕ್ಯಾರೋಟಿನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಎ & ಸಿ ಗಳಂತಹ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ತುಂಬಾ ಆರೋಗ್ಯಕರವಾಗಿದೆ. ನೀವು ಇದನ್ನು ಸಲಾಡ್‌ನಲ್ಲಿ ತಿನ್ನಬಹುದು ಅಥವಾ ರುಚಿಕರವಾದ ಸ್ಮೂಥಿ ಅಥವಾ ಜ್ಯೂಸ್ ಮಾಡಿ ಕುಡಿಯಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್