ಹದಿಹರೆಯದ ಹೆಣ್ಣು‌ಮಕ್ಕಳ ಸ್ವಚ್ಛ, ಸುರಕ್ಷಿತ ಋತುಚಕ್ರ ನಿರ್ವಹಣೆ: ಮೈತ್ರಿ ಮುಟ್ಟಿನ ಕಪ್ ಶುಚಿ ಯೋಜನೆಗೆ ಚಾಲನೆ

ಹದಿ ಹರೆಯದ ಹೆಣ್ಣು‌ಮಕ್ಕಳ ಸ್ವಚ್ಛ, ಸುರಕ್ಷಿತ ಋತುಚಕ್ರ ನಿರ್ವಹಣೆಗೆ ಸರ್ಕಾರ "ಮೈತ್ರಿ ಮುಟ್ಟಿನ ಕಪ್" ಶುಚಿ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸರ್ಕಾರ ಚಾಲನೆ ನೀಡಿದೆ.

ಹದಿಹರೆಯದ ಹೆಣ್ಣು‌ಮಕ್ಕಳ ಸ್ವಚ್ಛ, ಸುರಕ್ಷಿತ ಋತುಚಕ್ರ ನಿರ್ವಹಣೆ:  ಮೈತ್ರಿ ಮುಟ್ಟಿನ ಕಪ್ ಶುಚಿ ಯೋಜನೆಗೆ ಚಾಲನೆ
ಸಾಂಧರ್ಬಿಕ ಚಿತ್ರ
Image Credit source: Hindustan Times
TV9kannada Web Team

| Edited By: Vivek Biradar

Jul 06, 2022 | 11:05 PM

ಚಾಮರಾಜನಗರ: ಹದಿ ಹರೆಯದ ಹೆಣ್ಣು‌ಮಕ್ಕಳ (Woman) ಸ್ವಚ್ಛ, ಸುರಕ್ಷಿತ ಋತುಚಕ್ರ (Menstrual cycle) ನಿರ್ವಹಣೆಗೆ  “ಮೈತ್ರಿ ಮುಟ್ಟಿನ ಕಪ್” (Menstrual Cup) ಶುಚಿ ಯೋಜನೆಯನ್ನು ಸರ್ಕಾರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ (Biligiri Rangan Hills)  ಚಾಲನೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು 2022-23 ನೇ ಸಾಲಿನ ಬಜೆಟ್​​ನಲ್ಲಿ ಮೈತ್ರಿ ಮುಟ್ಟಿನ ಕಪ್ ಯೋಜನೆಯನ್ನು ಘೋಷಿಸಿದ್ದರು. ಮುಟ್ಟಿನ ನೈರ್ಮಲ್ಯ ನಿರ್ವಹಣೆಗೆ  ಮುಟ್ಟಿನ‌ ಕಪ್​​ನ್ನು  ಪರಿಚಯಿಸುತ್ತಿರು‌ವ ಕರ್ನಾಟಕ ಮೊದಲ ರಾಜ್ಯವಾಗಿದೆ.

ಇದನ್ನು ಓದಿ: ಅನುಶ್ರೀ ಡ್ರಗ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ತರಾಟೆ!

ಈ ಯೋಜನೆಯನ್ನು ಸದ್ಯ ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಮಾಡಲಾಗಿದೆ. ಎರಡೂ ಜಿಲ್ಲೆಗಳ ಫಲಿತಾಂಶ ಆಧರಿಸಿ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ 16 ರಿಂದ 18 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.   ಶುಚಿ ಮುಟ್ಟಿನ ನೈರ್ಮಲ್ಯ ಕಾರ್ಯಕ್ರಮಕ್ಕೆ ಅನುಗುಣವಾಗಿ ಮುಟ್ಟಿನ ಕಪ್ ಯೋಜನೆ ಜಾರಿ ಮಾಡಲಾಗುವುದು.

ಇದನ್ನು ಓದಿ: ಎಲ್ಲ ಸಿಬ್ಬಂದಿಯನ್ನು ಖರ್ಚಿಲ್ಲದೆ ಎರಡು ವಾರಗಳ ಕಾಲ ಬಾಲಿ ಪ್ರವಾಸಕ್ಕೆ ಒಯ್ದ ಈ ಕಂಪೆನಿ ಬಗ್ಗೆಯೇ ಎಲ್ಲೆಲ್ಲೂ ಸುದ್ದಿ

ಸರ್ಕಾರ ಪ್ರಸ್ತುತ ನೀಡುತ್ತಿರುವ ಸ್ಯಾನಿಟರಿ ಪ್ಯಾಡ್ ಬದಲಾಗಿ ಮುಟ್ಟಿನ ಕಪ್ ನೀಡಲಾಗುವುದು. ಪರಿಸರ ಸ್ನೇಹಿ ಹಾಗು ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್ ಇದಾಗಿದೆ. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸುಧಾಕರ್, ವಸತಿ ಸಚಿವ ವಿ.ಸೋಮಣ್ಣ, ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ, ಚಿತ್ರ ನಟಿ ಅಮೃತಾ ಅಯ್ಯಂಗಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಯೋಜನೆ ಕುರಿತು ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್  ಮುಟ್ಟಿನ ಕಪ್ ಗಳನ್ನು ವಿದೇದಲ್ಲಿ ಈಗಾಗಲೇ ಉಪಯೋಗಿಸುತ್ತಿದ್ದಾರೆ. ವಿದ್ಯಾವಂತರು ಮಾತ್ರ ಇದನ್ನ ಬಳಕೆ ಮಾಡುತ್ತಿದ್ದಾರೆ. ಇದರಿಂದ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ.  ಈ ಕಪ್ ನ್ನು 8 ವರ್ಷದ ವರೆಗೆ ಬಳಸಬಹುದಾಗಿದೆ. ಇದು ಪರಿಸರ ಸ್ನೇಹಿಯಾಗಿದೆ. ಸ್ಯಾನಿಟರಿ‌ ಪ್ಯಾಡ್ ಗಳು ಪರಿಸರಕ್ಕೆ ತೊಂದರೆಯಾಗುತಿತ್ತು ಎಂದು ತಿಳಿಸಿದರು.

ಮುಟ್ಟಿನ ಕಪ್​​ಗಳು ಪರಿಸರ ಸ್ನೇಹಿಯಾಗಿರುವುದರಿಂದ ಉಪಯುಕ್ತವಾಗಿದೆ. ಬುಡಕಟ್ಟು ಜನರಿಗೆ ಮೊದಲು ಅರಿವು‌ಮೂಡಿಸುವ ಕೆಲಸ ಮಾಡುತ್ತೇವೆ‌. ಹೀಗಾಗಿ ಬಿಳಿಗಿರಿ ರಂಗನ ಬೆಟ್ಟದಲ್ಲಿ ಚಾಲನೆ ನೀಡಲಾಗಿದೆ. ಆಶಾ ಕಾರ್ಯಕರ್ತರನ್ನ ನೇಮಕಮಾಡಿ ಬುಡಕಟ್ಟು ಜನರಿಗೆ ಅರಿವು‌ ಮೂಡಿಸುತ್ತೇವೆ‌. ಮಹಿಳೆ ಮಕ್ಕಳಿಗೆ ಅರಿವು ಮೂಡಿಸಿ ತರಬೇತಿ ಕೊಡುತ್ತೇವೆ. ಈ ಯೋಜನೆಗೆ ಚಾಲನೆ ಕೊಟ್ಟಿರುವುದು ದೇಶದಲ್ಲೆ ಕರ್ನಾಟಕ ಮೊದಲ ರಾಜ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇಂದಿನ ಆಧುನಿಕ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್‌ ಇರುವುದರಿಂದ, ಅದು ಮಣ್ಣಿನಲ್ಲಿ ಕರಗಲು 600-800 ವರ್ಷಗಳು ಬೇಕಾಗುತ್ತವೆ. ಆದರೆ ಈ ಮುಟ್ಟಿನ ಕಪ್‌ಗಳು ಪರಿಸರ ಸ್ನೇಹಿಯಾಗಿವೆ. ಒಂದು ಕಪ್‌ ಅನ್ನು 6 ರಿಂದ 10 ವರ್ಷಗಳ ಕಾಲ ಬಳಸಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ಹೆಣ್ಣುಮಕ್ಕಳಿಗೆ ಇದನ್ನು ಉಚಿತವಾಗಿ ನೀಡಲು ಚಿಂತಿಸಿದೆ. ಸದ್ಯಕ್ಕೆ ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.

ಸದ್ಯ ಚಾಮರಾಜನಗರ ದಕ್ಷಿಣ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಈ ಯೋಜನೆಗೆ ರಾಯಭಾರಿಯಾಗಿ ನಟಿ ಅಮೃತ ಅಯ್ಯಂಗಾರ್ ಹಾಗೂ ಕ್ರಿಕೆಟ್ ಆಟಗಾರ್ತಿ ವೇದಕೃಷ್ಣಮೂರ್ತಿ ನೇಮಕವಾಗಿದ್ದಾರೆ.

ನರ್ಸ್‌ ನೇಮಕಾತಿ ಆದಿವಾಸಿ ಸೋಲಿಗ ಸಮುದಾಯದವರಲ್ಲಿ ನರ್ಸಿಂಗ್‌ ವ್ಯಾಸಂಗ ಮಾಡಿದವರಿಗೆ, ವಿಶೇಷ ನೇಮಕಾತಿ ಅಥವಾ ಮೀಸಲಾತಿ ಮೂಲಕ ನರ್ಸ್‌ಗಳನ್ನಾಗಿ ನೇಮಿಸಲು ಕ್ರಮ ವಹಿಸಲಾಗುವುದು. ಹಾಗೆಯೇ ಆಶಾ ಕಾರ್ಯರ್ತೆಯರನ್ನು ನೇಮಕ ಮಾಡುವಾಗಲೂ ಈ ಸಮುದಾಯವನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಹೊಸ ಆಸ್ಪತ್ರೆ ಯಳಂದೂರು ತಾಲೂಕಿಗೆ ಹೊಸ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಜಿಲ್ಲೆಯ ಎರಡು ಕ್ಷೇತ್ರಗಳ ಆಸ್ಪತ್ರೆಗಳಿಗೆ ಡಯಾಲಿಲಿಸ್‌ ಯಂತ್ರಗಳನ್ನು ಕೂಡ ನೀಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada