Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ವರ್ಷಗಳ ನಂತರ ಚಾಮರಾಜೇಶ್ವರ ರಥೋತ್ಸವ; ಯದುವೀರ್ ಒಡೆಯರ್ ಚಾಲನೆ

ಆಷಾಡ ಮಾಸದ ಕನ್ಯಾ ಲಗ್ನದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್ ಇಂದು ಚಾಲನೆ ನೀಡಿದರು.

ಐದು ವರ್ಷಗಳ ನಂತರ ಚಾಮರಾಜೇಶ್ವರ ರಥೋತ್ಸವ; ಯದುವೀರ್ ಒಡೆಯರ್ ಚಾಲನೆ
ಚಾಮರಾಜೇಶ್ವರ ರಥೋತ್ಸವ. ಸಂಗ್ರಹ ಚಿತ್ರ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2022 | 1:10 PM

ಚಾಮರಾಜನಗರ: ಐದು ವರ್ಷಗಳ ನಂತರ ಚಾಮರಾಜೇಶ್ವರ ರಥೋತ್ಸವ (Chamarajeshwara Rathotsava)  ನಡೆಯುತ್ತಿದ್ದು, ರಥೋತ್ಸವಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್ ಚಾಲನೆ ನೀಡಿದರು. ಆಷಾಡ ಮಾಸದ ಕನ್ಯಾ ಲಗ್ನದಲ್ಲಿ ರಥೋತ್ಸವ ಆರಂಭವಾಗಿದೆ. ಕಿಡಿಗೇಡಿ ರಥಕ್ಕೆ ಬೆಂಕಿ ಹಚ್ಚಿದ್ದರಿಂದ ರಥ ಸುಟ್ಟುಹೋಗಿದ್ದು, ಕಳೆದ ಐದು ವರ್ಷಳಿಂದ ರಥೋತ್ಸವ ನಿಂತುಹೋಗಿತ್ತು. ಇದೀಗ ನೂತನವಾಗಿ ರಥ ನಿರ್ಮಾಣವಾಗಿದೆ. ಇನ್ನೂ ಈ ರಥೋತ್ಸವದಲ್ಲಿ ನವದಂಪತಿಗಳ ಭಾಗಿಯಾಗುವುದು ವಿಶೇಷ. ರಥಕ್ಕೆ ಹಣ್ಣು, ಜವನ ಎಸೆದರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ನಂಬಿಕೆ ಇದೆ. ಪ್ರತಿ ವರ್ಷ ಆಷಾಡ ಮಾಸದಲ್ಲಿ ರಥೋತ್ಸವ ನಡೆಯುತ್ತದೆ. ತಿಂಗಳಲ್ಲ, ವಾರವಲ್ಲ ಐದು ವರ್ಷದ ಬಳಿಕ ದೇವಾಲಯದಲ್ಲಿ ರಾಜಕಳೆ ಮರುಕಳಿಸಿದೆ. ಚಾಮರಾಜನಗರದ ಆರಾಧ್ಯ ದೈವ ಆಗಿರೋ ಚಾಮರಾಜೇಶ್ವರ ದೇಗುಲದಲ್ಲಿ ಐದು ವರ್ಷದ ಹಿಂದೆ ರಥಕ್ಕೆ ಬೆಂಕಿ ಬಿದ್ದು, ಧಾರ್ಮಿಕ ಕಾರ್ಯಗಳೆಲ್ಲ ರದ್ದಾಗಿದ್ದವು. ಸದ್ಯ 1.20 ಕೋಟಿ ವೆಚ್ಚದಲ್ಲಿ ಬ್ರಹ್ಮರಥ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: 5 ವರ್ಷಗಳ ಬಳಿಕ ಚಾಮರಾಜನಗರದಲ್ಲಿ ರಾಜಕಳೆ; ಚಾಮರಾಜೇಶ್ವರನ ಸನ್ನಿಧಿಯಲ್ಲಿ ಅದ್ಧೂರಿ ರಥೋತ್ಸವ, 25 ವರ್ಷಗಳ ಬಳಿಕ ಕುಂಭಾಭಿಷೇಕ ಕಣ್ತುಂಬಿಕೊಂಡ ಭಕ್ತರು

ಘಟನೆ ಏನು? 

2017ರಲ್ಲಿ ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಹಚ್ಚಿದ್ದರಿಂದ ಅಂದಿನಿಂದ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ರಥಕ್ಕೆ ಬೆಂಕಿ ಬಿದ್ದಿರುವುದು ಅಪಶಕುನವಾದ್ದರಿಂದ ಹೊಸ ರಥ ನಿರ್ಮಾಣವಾಗುವರೆಗು ಜಾತ್ರೆ, ಹಾಗೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯ ನಡೆಸದಂತೆ ತೀರ್ಮಾನ ಮಾಡಲಾಗಿತ್ತು. ನಂತರ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಆಗಮಿಕರ ಪ್ರಯತ್ನದ ಫಲವಾಗಿ 1.20 ಕೋಟಿ ರೂ.ವೆಚ್ಚದಲ್ಲಿ ನೂತನ ಬ್ರಹ್ಮ ರಥ ಸಜ್ಜುಗೊಂಡಿದೆ.

ಇದನ್ನೂ ಓದಿ; ಮಹದೇಶ್ವರ ಬೆಟ್ಟ: ದಟ್ಟಾರಣ್ಯದಲ್ಲಿ ಬೆಳಗಿನ ಜಾವದವರೆಗೂ ಗರ್ಭಿಣಿಯ ಹೊತ್ತು ಆಸ್ಪತ್ರೆಗೆ ಕರೆ ತಂದ ಗ್ರಾಮಸ್ಥರು

ಆಷಾಢಮಾಸದಲ್ಲಿ ರಥೋತ್ಸವ:

ಸಾಮಾನ್ಯವಾಗಿ ಆಷಾಢಮಾಸದಲ್ಲಿ ಶುಭ ಕಾರ್ಯ ನಡೆಯಲ್ಲ. ಆದರೆ ಇಲ್ಲಿ ಮಾತ್ರ ಬ್ರಹ್ಮರಥೋತ್ಸವ ನಡೆಯುತ್ತೆ. ಹೀಗಾಗಿ, ಈ ಸಲದ ರಥೋತ್ಸವಕ್ಕೆ ಯಾವುದೇ ತೊಡಕು ಆಗಬಾರದೆಂದು, ಶುದ್ದಿ ಕಾರ್ಯ, ಪೂಜಾ ಕೈಂಕರ್ಯಗಳು ನೆರವೇರಿಸಲಾಗಿದೆ. ಕುಂಭಾಭಿಷೇಕದ ಮೂಲಕ 20 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಇನ್ನೂ 25 ವರ್ಷಗಳ ಬಳಿಕ ನಡೆದ ಕುಂಭಾಭಿಷೇಕ ಕಣ್ತುಂಬಿಕೊಂಡು ಭಕ್ತರು ಸಂತಸಗೊಂಡ್ರು. 5 ವರ್ಷಗಳ ಬಳಿಕ ಅದ್ಧೂರಿ ರಥೋತ್ಸವಕ್ಕೆ ಚಾಮರಾಜೇಶ್ವರನ ಸನ್ನಿಧಿ ಸಜ್ಜಾಗಿದೆ. ಜಿಲ್ಲೆಯ ಜನರಲ್ಲಿ ಇದು ಸಂತಸ ತಂದಿದ್ದು, ಮತ್ತೆ ದೇಗುಲದತ್ತ ಹೆಜ್ಜೆ ಹಾಕಿದರು.

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ