5 ವರ್ಷಗಳ ಬಳಿಕ ಚಾಮರಾಜನಗರದಲ್ಲಿ ರಾಜಕಳೆ; ಚಾಮರಾಜೇಶ್ವರನ ಸನ್ನಿಧಿಯಲ್ಲಿ ಅದ್ಧೂರಿ ರಥೋತ್ಸವ, 25 ವರ್ಷಗಳ ಬಳಿಕ ಕುಂಭಾಭಿಷೇಕ ಕಣ್ತುಂಬಿಕೊಂಡ ಭಕ್ತರು
ಸಾಮಾನ್ಯವಾಗಿ ಆಷಾಢಮಾಸದಲ್ಲಿ ಶುಭ ಕಾರ್ಯ ನಡೆಯಲ್ಲ. ಆದ್ರೆ, ಇಲ್ಲಿ ಮಾತ್ರ ಬ್ರಹ್ಮರಥೋತ್ಸವ ನಡೆಯುತ್ತೆ. ಹೀಗಾಗಿ, ಈ ಸಲದ ರಥೋತ್ಸವಕ್ಕೆ ಯಾವುದೇ ತೊಡಕು ಆಗಬಾರದೆಂದು, ಶುದ್ದಿ ಕಾರ್ಯ, ಪೂಜಾ ಕೈಂಕರ್ಯಗಳು ನೆರವೇರಿದ್ವು. ಕುಂಭಾಭಿಷೇಕದ ಮೂಲಕ 20 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಚಾಮರಾಜನಗರ: ಅದು ಗಡಿಜಿಲ್ಲೆಯ ಜನರ ಆರಾಧ್ಯ ದೈವ. ಶಾಪ ವಿಮೋಚನೆ, ನವ ದಂಪತಿಗಳು ಆ ದೇವರ ದರ್ಶನ ಪಡೆದರೆ ಸಕಲವೂ ಸನ್ಮಂಗಳವಾಗುತ್ತೆ ಅನ್ನೋ ನಂಬಿಕೆ ಇದೆ. ಆದರೆ ಆ ದೇವರಿಗೆ ಕಳೆದ ಐದು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳು ನಡೆದಿರಲಿಲ್ಲ. ಇದೀಗಾ ದೇವಾಲಯದಲ್ಲಿ ಐದು ವರ್ಷಗಳ ಬಳಿಕ ಧಾರ್ಮಿಕ ಕಾರ್ಯ ನಡೆದಿದೆ.
ತಿಂಗಳಲ್ಲ.. ವಾರವಲ್ಲ.. ಐದು ವರ್ಷದ ಬಳಿಕ ದೇವಾಲಯದಲ್ಲಿ ರಾಜಕಳೆ ಮರುಕಳಿಸಿದೆ. ಚಾಮರಾಜನಗರದ ಆರಾಧ್ಯ ದೈವ ಆಗಿರೋ ಚಾಮರಾಜೇಶ್ವರ ದೇಗುಲದಲ್ಲಿ ಐದು ವರ್ಷದ ಹಿಂದೆ ರಥಕ್ಕೆ ಬೆಂಕಿ ಬಿದ್ದು, ಧಾರ್ಮಿಕ ಕಾರ್ಯಗಳೆಲ್ಲ ರದ್ದಾಗಿದ್ದವು. ಆದ್ರೀಗ, 1.20 ಕೋಟಿ ವೆಚ್ಚದಲ್ಲಿ ಬ್ರಹ್ಮರಥ ಸಿದ್ಧವಾಗಿದೆ. ಹೀಗಾಗಿ, ಮೂರು ದಿನಗಳಿಂದ ದೇಗುಲದಲ್ಲಿ ಪೂಜಾ ಕಾರ್ಯ ನಡೆಯುತ್ತಿದ್ದು, ಕುಂಭಾಭಿಷೇಕ, ಗೋಪುರಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಾಯ್ತು. ಇದನ್ನೂ ಓದಿ: ವಿಜಯಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಂಚಾವತಾರ; ಸರ್ಕಾರಿ ಶುಲ್ಕಕ್ಕಿಂತಲು ಹೆಚ್ಚಿಗೆ ಹಣ ಪಡೆಯುತ್ತಿರುವ ಆರೋಪ
2017ರಲ್ಲಿ ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಹಚ್ಚಿದ್ದರಿಂದ ಅಂದಿನಿಂದ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ರಥಕ್ಕೆ ಬೆಂಕಿ ಬಿದ್ದಿರುವುದು ಅಪಶಕುನವಾದ್ದರಿಂದ ಹೊಸ ರಥ ನಿರ್ಮಾಣವಾಗುವರೆಗು ಜಾತ್ರೆ, ಹಾಗೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯ ನಡೆಸದಂತೆ ತೀರ್ಮಾನ ಮಾಡಲಾಗಿತ್ತು. ನಂತರ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಆಗಮಿಕರ ಪ್ರಯತ್ನದ ಫಲವಾಗಿ 1.20 ಕೋಟಿ ರೂ.ವೆಚ್ಚದಲ್ಲಿ ನೂತನ ಬ್ರಹ್ಮ ರಥ ಸಜ್ಜುಗೊಂಡಿದ್ದು ಚಾಮರಾಜನಗರ ತಲುಪಿದೆ. ಆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕಾರ್ಯಗಳು ನೆರವೇರಿತು. ಇಂದು ದೇವಾಲಯ ಗೋಪುರಕ್ಕೆ ಕಳಸ ಪ್ರತಿಷ್ಠಾಪನೆ ನಡೆಸಿ ಕುಂಭಾಭಿಷೇಕ ಮಾಡಲಾಯಿತು.
ಚಾಮರಾಜನಗರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಸಾಮಾನ್ಯವಾಗಿ ಆಷಾಢಮಾಸದಲ್ಲಿ ಶುಭ ಕಾರ್ಯ ನಡೆಯಲ್ಲ. ಆದ್ರೆ, ಇಲ್ಲಿ ಮಾತ್ರ ಬ್ರಹ್ಮರಥೋತ್ಸವ ನಡೆಯುತ್ತೆ. ಹೀಗಾಗಿ, ಈ ಸಲದ ರಥೋತ್ಸವಕ್ಕೆ ಯಾವುದೇ ತೊಡಕು ಆಗಬಾರದೆಂದು, ಶುದ್ದಿ ಕಾರ್ಯ, ಪೂಜಾ ಕೈಂಕರ್ಯಗಳು ನೆರವೇರಿದ್ವು. ಕುಂಭಾಭಿಷೇಕದ ಮೂಲಕ 20 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಇನ್ನು 25 ವರ್ಷಗಳ ಬಳಿಕ ನಡೆದ ಕುಂಭಾಭಿಷೇಕ ಕಣ್ತುಂಬಿಕೊಂಡು ಭಕ್ತರು ಸಂತಸಗೊಂಡ್ರು. 5 ವರ್ಷಗಳ ಬಳಿಕ ಅದ್ಧೂರಿ ರಥೋತ್ಸವಕ್ಕೆ ಚಾಮರಾಜೇಶ್ವರನ ಸನ್ನಿಧಿ ಸಜ್ಜಾಗಿದೆ. ಜಿಲ್ಲೆಯ ಜನರಲ್ಲಿ ಇದು ಸಂತಸ ತಂದಿದ್ದು, ಮತ್ತೆ ದೇಗುಲದತ್ತ ಹೆಜ್ಜೆ ಹಾಕ್ತಿದ್ದಾರೆ. ಇದನ್ನೂ ಓದಿ: ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ನೂಪುರ್ ಶರ್ಮಾಗೆ ಸಮನ್ಸ್ ಕಳಿಸಲಿದೆ ಮುಂಬೈ ಪೊಲೀಸ್
ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ