ಮಹದೇಶ್ವರ ಬೆಟ್ಟ: ದಟ್ಟಾರಣ್ಯದಲ್ಲಿ ಬೆಳಗಿನ ಜಾವದವರೆಗೂ ಗರ್ಭಿಣಿಯ ಹೊತ್ತು ಆಸ್ಪತ್ರೆಗೆ ಕರೆ ತಂದ ಗ್ರಾಮಸ್ಥರು

male mahadeshwara hills: ಗ್ರಾಮದಲ್ಲಿ ಸಣ್ಣ ಸಮಸ್ಯೆಯಾದ್ರು ದೂರವಾಣಿ ಸಂಪರ್ಕ ಕೂಡ ಸಿಗಲ್ಲ. ಮಹದೇಶ್ವರಬೆಟ್ಟ ಅರಣ್ಯ ಗ್ರಾಮಸ್ಥರ ಅನುಕೂಲಕ್ಕಾಗಿ ಅರಣ್ಯ ಇಲಾಖೆಯು ಜನವನ ಸಾರಿಗೆ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ ಚಾಲಕರು ಮತ್ತು ಅಧಿಕಾರಿಗಳು ಸಕಾಲಕ್ಕೆ ಮೊಬೈಲ್ ದೂರವಾಣಿ ಸಂಪರ್ಕಕ್ಕೆ ಸಿಗುವುದಿಲ್ಲ.

ಮಹದೇಶ್ವರ ಬೆಟ್ಟ: ದಟ್ಟಾರಣ್ಯದಲ್ಲಿ ಬೆಳಗಿನ ಜಾವದವರೆಗೂ ಗರ್ಭಿಣಿಯ ಹೊತ್ತು ಆಸ್ಪತ್ರೆಗೆ ಕರೆ ತಂದ ಗ್ರಾಮಸ್ಥರು
ಮಹದೇಶ್ವರ ಬೆಟ್ಟ: ದಟ್ಟಾರಣ್ಯದಲ್ಲಿ ಬೆಳಗಿನ ಜಾವದವರೆಗೂ ಗರ್ಭಿಣಿಯ ಹೊತ್ತು ಆಸ್ಪತ್ರೆಗೆ ಕರೆ ತಂದ ಗ್ರಾಮಸ್ಥರು
TV9kannada Web Team

| Edited By: sadhu srinath

Jun 30, 2022 | 3:30 PM

ಚಾಮರಾಜನಗರ: ಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶದ (male mahadeshwara hills) ಗ್ರಾಮಸ್ಥರ ಗೋಳು ನಿಲ್ಲುತ್ತಿಲ್ಲ. ಇಲ್ಲಿನ ಗ್ರಾಮಸ್ಥರು ಮಹದೇಶ್ವರ ದಟ್ಟಾರಣ್ಯದಲ್ಲಿ 8 ಕಿಲೊ ಮೀಟರ್ ದೂರ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ಕರೆ ತಂದಿದ್ದಾರೆ. ಡೋಲಿ ಕಟ್ಟಿ (doli) ಗರ್ಭಿಣಿಯನ್ನು (pregnant woman) ದಟ್ಟಾರಣ್ಯದಲ್ಲಿ ಹೊತ್ತು ನಾಲ್ಕು ಗಂಟೆ ಕಾಲ ನಡೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಅರಣ್ಯದ ಕಲ್ಲುಮುಳ್ಳುಗಳ ಹಾದಿಯಲ್ಲಿ ಕಾಡುಮೃಗಗಳ ಭಯದಲ್ಲೇ ಕಗ್ಗತ್ತಲೆಯಲ್ಲೇ ಈ ಕಾಲ್ನಡಿಗೆ ನಡೆದಿದೆ.

ತಮ್ಮ ಗ್ರಾಮದ ಗರ್ಭಿಣಿಗೆ ನೆರವಾಗಲು ಮಹದೇಶ್ವರಬೆಟ್ಟ ಅರಣ್ಯ ವ್ಯಾಪ್ತಿಯ ದೊಡ್ಡಾಣೆ ಗ್ರಾಮಸ್ಥರು ಈ ಹರಸಾಹಸ ಪಟ್ಟಿದ್ದಾರೆ. ಗ್ರಾಮದ ಶಾಂತಲಾ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ದೊಡ್ಡಾಣೆಯಿಂದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿಯನ್ನು ಹೊತ್ತು ತಂದು, ಗ್ರಾಮಸ್ಥರು ಚಿಕಿತ್ಸೆ ಕೊಡಿಸಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ಹೊರಟು ಬೆಳಿಗ್ಗೆ 6 ಗಂಟೆಗೆ ಆಸ್ಪತ್ರೆಗೆ ತಲುಪಿದ್ದಾರೆ.

ಗ್ರಾಮದಲ್ಲಿ ಸಣ್ಣ ಸಮಸ್ಯೆಯಾದ್ರು ದೂರವಾಣಿ ಸಂಪರ್ಕ ಕೂಡ ಸಿಗಲ್ಲ. ಮಹದೇಶ್ವರಬೆಟ್ಟ ಅರಣ್ಯ ಗ್ರಾಮಸ್ಥರ ಅನುಕೂಲಕ್ಕಾಗಿ ಅರಣ್ಯ ಇಲಾಖೆಯು ಜನವನ ಸಾರಿಗೆ ವ್ಯವಸ್ಥೆ ಜಾರಿಗೆ ತಂದಿದೆ. ಗರ್ಭಿಣಿಯರು, ಅನಾರೋಗ್ಯಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರ ತುರ್ತು ಬಳಕೆಗಾಗಿ ಜಾರಿಗೆ ತಂದಿರುವ ಜನವನ ಸಾರಿಗೆ ಸೌಲಭ್ಯ ಇದಾಗಿದೆ. ಆದರೆ ಚಾಲಕರು ಮತ್ತು ಅಧಿಕಾರಿಗಳು ಮೊಬೈಲ್ ದೂರವಾಣಿ ಸಂಪರ್ಕಕ್ಕೆ ಸಿಗದ ಕಾರಣ ಗ್ರಾಮಸ್ಥರು ಡೋಲಿ ಮೊರೆಹೋಗಿ ಪಡಿಪಾಟಲು ಅನುಭವಿಸಿದ್ದಾರೆ. ಕಾಡಿನ ಮಧ್ಯದಲ್ಲಿರುವ ಗ್ರಾಮಗಳಲ್ಲಿ ಇಂತಹ ಸಮಸ್ಯೆಗಳು ನಿರಂತರವಾಗಿವೆ. ಗ್ರಾಮಸ್ಥರ ಮೊರೆ ಯಾರ ಕಿವಿಗೂ ಬೀಳುತ್ತಿಲ್ಲ.

ಇದನ್ನೂ ಓದಿ:

Justice Alok Aradhe: ಕರ್ನಾಟಕ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ನಿವೃತ್ತಿ ಹಿನ್ನೆಲೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕ

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada