ಅನುಶ್ರೀ ಡ್ರಗ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ತರಾಟೆ!

ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದೀಯಾ, ಸಪ್ಲೈ ನಿಲ್ಲಿಸಿದ್ದೀಯಾ? ನೀನು ತಿನ್ನುತ್ತಿಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ? ಎಂದೂ ಡ್ಯಾನ್ಸರ್ ಕಿಶೋರ್​​ ಶೆಟ್ಟಿಯನ್ನು ವಿಚಾರಿಸಿಕೊಂಡಿದ್ದಾರೆ. ಕಿಶೋರ್ ಶೆಟ್ಟಿ ಉದ್ದ ತಲೆಗೂದಲು ಬಿಟ್ಟಿದ್ದನ್ನು ಕಮೀಷನರ್ ಶಶಿಕುಮಾರ್ ಅವರು ಪ್ರಶ್ನಿಸಿದಾಗ ಡ್ಯಾನ್ಸ್ ಗಾಗಿ ಬಿಟ್ಟಿದ್ದೇನೆ ಎಂದು ಉತ್ತರಿಸಿದ್ದಾನೆ.

ಅನುಶ್ರೀ ಡ್ರಗ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ತರಾಟೆ!
ಅನುಶ್ರೀ ಡ್ರಗ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ತರಾಟೆ!
TV9kannada Web Team

| Edited By: sadhu srinath

Jul 06, 2022 | 2:44 PM

ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು (Mangalore Police Commissioner N Shashi Kumar) ನಗರದ ಪೊಲೀಸ್​ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಶೋರ್​​ ಶೆಟ್ಟಿಗೆ (Dancer Kishore Aman Shetty) ಕ್ಲಾಸ್​​ ತೆಗೆದುಕೊಂಡ ಎನ್.ಶಶಿಕುಮಾರ್ ಅವರು ಕಿಶೋರ್ ಶೆಟ್ಟಿಗೆ ಬಟ್ಟೆ ಬಿಚ್ಚಿಸಿ, ಏನಪ್ಪ ಮೈಮೇಲೆ ಇಷ್ಟು ಟ್ಯಾಟೂ ಹಾಕಿಸಿಕೊಂಡಿದ್ಯಾ? ಎಂದು ಕೇಳಿದ್ದಾರೆ. ಅದಕ್ಕೆ ಡ್ಯಾನ್ಸರ್ ಕಿಶೋರ್​​ ಶೆಟ್ಟಿ ತಾಯಿಯ ಟ್ಯಾಟೋ ಅಂತಾ ಉತ್ತರಿಸಿದ್ದಾನೆ. ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ? ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಅದಾದಮೇಲೆ ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದೀಯಾ, ಸಪ್ಲೈ ನಿಲ್ಲಿಸಿದ್ದೀಯಾ? ನೀನು ತಿನ್ನುತ್ತಿಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ? ಎಂದೂ ಡ್ಯಾನ್ಸರ್ ಕಿಶೋರ್​​ ಶೆಟ್ಟಿಯನ್ನು ವಿಚಾರಿಸಿಕೊಂಡಿದ್ದಾರೆ. ಕಿಶೋರ್ ಶೆಟ್ಟಿ ಉದ್ದ ತಲೆಗೂದಲು ಬಿಟ್ಟಿದ್ದನ್ನು ಕಮೀಷನರ್ ಶಶಿಕುಮಾರ್ ಅವರು ಪ್ರಶ್ನಿಸಿದಾಗ ಡ್ಯಾನ್ಸ್ ಗಾಗಿ ಬಿಟ್ಟಿದ್ದೇನೆ ಎಂದು ಉತ್ತರಿಸಿದ್ದಾನೆ. ಕಿಶೋರ್ ಶೆಟ್ಟಿ, ಅನುಶ್ರೀ ಡ್ರಗ್ ಪ್ರಕರಣದ ಆರೋಪಿ. ಇದೇ ವೇಳೆ ಮಂಗಳೂರಿನ ಇತರೆ ರೌಡಿಗಳು, ಡ್ರಗ್ಸ್, ಗಾಂಜಾ ಕಳ್ಳರಿಗೂ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಚಳಿ ಬಿಡಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada