ನವಜಾತ ಶಿಶುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ತಾಯಿ; ಮಗು ಸಾಕುವ ಶಕ್ತಿ ಇಲ್ಲ ಎಂದು ಪೊಲೀಸರ ಮುಂದೆ ಅಳಲು
ಮಗುವನ್ನು ಬಟ್ಟೆಯಿಂದ ಸುತ್ತಿ ಬಸ್ ನಿಲ್ದಾಣ ಸಮೀಪ ಕಸದ ರಾಶಿ ಬಳಿ ಇಟ್ಟು ಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸುತ್ತಿದ್ದಾಗ ಸ್ಥಳಕ್ಕೆ ಮಗುವಿನ ತಾಯಿ ಬಂದಿದ್ದಾರೆ. ಮಗು ತನ್ನದೆಂದು ಪೊಲೀಸರ ಮುಂದೆ ಹೇಳಿದ್ದಾರೆ.
ಚಾಮರಾಜನಗರ: ತನ್ನ ನವಜಾತ ಶಿಶುವನ್ನು(Newborn Baby) ಪೋಷಣೆ ಮಾಡಲು ಆಗದಿರುವುದಕ್ಕೆ ತಾಯಿ ಮಗುವನ್ನು ಬಿಟ್ಟುಹೋದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಮತ್ತೀಪುರ ಗ್ರಾಮದಲ್ಲಿ ನಡೆದಿದೆ. ಮತ್ತೀಪುರ ಬಸ್ ನಿಲ್ದಾಣದಲ್ಲಿ ತಾಯಿ ತನ್ನ ಹೆತ್ತ ಮಗುವನ್ನೇ ಬಿಟ್ಟು ಹೋಗಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿದ್ದಾಗ ತಾಯಿ ಪ್ರತ್ಯಕ್ಷರಾಗಿದ್ದಾರೆ. ಮಗು ತನ್ನದೆಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಮಗುವನ್ನು ಬಟ್ಟೆಯಿಂದ ಸುತ್ತಿ ಬಸ್ ನಿಲ್ದಾಣ ಸಮೀಪ ಕಸದ ರಾಶಿ ಬಳಿ ಇಟ್ಟು ಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸುತ್ತಿದ್ದಾಗ ಸ್ಥಳಕ್ಕೆ ಮಗುವಿನ ತಾಯಿ ಬಂದಿದ್ದಾರೆ. ಮಗು ತನ್ನದೆಂದು ಪೊಲೀಸರ ಮುಂದೆ ಹೇಳಿದ್ದಾರೆ. ಮದುವೆಯಾಗಿದೆ, ಆದ್ರೆ ಗಂಡ ಬಿಟ್ಟು ಹೋಗಿದ್ದಾನೆ. ಮಗು ಸಾಕುವ ಶಕ್ತಿ ಇಲ್ಲ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಪೊಲೀಸರು ಮಹಿಳೆಗೆ ಬುದ್ಧಿ ಮಾತು ಹೇಳಿದ್ದು ಈಗ ಮಗುವನ್ನು ತೆಗೆದುಕೊಂಡು ಹೋಗು ಎಂದಿದ್ದಾರೆ. ಮಗುವನ್ನು ತಾಯಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾನದಿ
ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಜಿಲ್ಲಾಧಿಕಾರಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ್ದವನ ವಿರುದ್ಧ FIR, ಅಪರಿಚಿತನಿಗಾಗಿ ಹುಡುಕಾಟ ಚಾಮರಾಜನಗರ: ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಜಿಲ್ಲಾಧಿಕಾರಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ್ದ ನಕಲಿ ಅಧಿಕಾರಿ ವಿರುದ್ಧ FIR ದಾಖಲಾಗಿದೆ. ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ತನಗೆ ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ, ದೇವರ ದರ್ಶನ, ದೊಡ್ಡಸಂಪಿಗೆ ಮರದ ವೀಕ್ಷಣೆಗೆ ವ್ಯವಸ್ಥೆ, ಜಂಗಲ್ ಸಫಾರಿಗೆ ವ್ಯವಸ್ಥೆ ಮಾಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಈ ಬಗ್ಗೆ ಅನುಮಾನ ಬಂದ ಕೂಡಲೆ ದೂರ ನೀಡಲಾಗಿದ್ದು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿಯಲ್ಲಿ ವಾಸ್ತವ್ಯ, ಜಂಗಲ್ ಸಫಾರಿ, ದೇವರ ದರ್ಶನ ದೊಡ್ಡಸಂಪಿಗೆ ಮರದ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ರಾವ್ ಎಂಬ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದರು. ಈ ವೇಳೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನಿಖರ ಹುದ್ದೆ ಕೇಳಿದ್ದಾರೆ. ಆಗ ರಾವ್ ಹೆಸರಿನ ವಂಚಿತ ವ್ಯಕ್ತಿ, ಹೆಸರು ಹಾಗೂ ಹುದ್ದೆ ಬಹಿರಂಗಪಡಿಸಬಾರದೆಂದು ತಿಳಿಸಿದ್ದಾರೆ. ಇದನ್ನು ಕೇಳಿ ಅನುಮಾನಗೊಂಡ ಜಿಲ್ಲಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಧಾನಮಂತ್ರಿ ಕಚೇರಿ ಹೆಸರು ದುರುಪಯೋಗ ಆರೋಪ ಹಿನ್ನೆಲೆ ವಂಚಿಸಲು ಯತ್ನಿಸಿರುವ ಅಪರಿಚಿತ ವ್ಯಕ್ತಿ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಅಪರಿಚಿತ ವ್ಯಕ್ತಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮೈಸೂರು ಮೂಲದ ವ್ಯಕ್ತಿ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.