ಹುಲಿ ಸೆರೆ ಸಿಗುವ ಮುನ್ನ ಹಸು ತಿನ್ನುವ ಭಯಾನಕ ದೃಶ್ಯ ಸೆರೆ! ವಿಡಿಯೋ ವೈರಲ್
ಬಂಡೀಪುರ ಹುಲಿ ರಕ್ಷಿತಾರಣ್ಯದ ಗೋಪಾಲಪುರದಲ್ಲಿ ಹುಲಿ ಇಬ್ಬರ ಮೇಲೆ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿತ್ತು. ಅಭಿಮನ್ಯು ಆನೆ ಸಹಾಯದಿಂದ ಅರಣ್ಯಾಧಿಕಾರಿಗಳು ಹುಲಿ ಸೆರೆ ಹಿಡಿದಿದ್ದರು.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರದಲ್ಲಿ ಹುಲಿ (Tiger) ಸೆರೆ ಸಿಗುವ ಮುನ್ನ ಹಸು ತಿನ್ನುವ ದೃಶ್ಯ ಮೊಬೈಲ್ನಲ್ಲಿ (Mobile) ಸೆರೆಯಾಗಿದೆ. ಬಂಡೀಪುರ ಹುಲಿ ರಕ್ಷಿತಾರಣ್ಯದ ಗೋಪಾಲಪುರದಲ್ಲಿ ಹುಲಿ ಇಬ್ಬರ ಮೇಲೆ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿತ್ತು. ಅಭಿಮನ್ಯು ಆನೆ ಸಹಾಯದಿಂದ ಅರಣ್ಯಾಧಿಕಾರಿಗಳು ಹುಲಿ ಸೆರೆ ಹಿಡಿದಿದ್ದರು. ಹುಲಿಯನ್ನು ಸೆರೆ ಹಿಡಿಯುವ ಮುನ್ನ ತಾನು ಕೊಂದಿದ್ದ ಹಸುವನ್ನು ತಿನ್ನುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಭೀರ ಗಾಯಗೊಂಡಿದ್ದರಿಂದ ಭೇಟೆಯಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಹುಲಿ ಇತ್ತು. ಈ ಕಾರಣಕ್ಕೆ ಕಾಡಂಚಿನ ಗ್ರಾಮಕ್ಕೆ ಬಂದಿತ್ತು. ಹುಲಿಗೆ ಸುಮಾರು 8 ವರ್ಷವಾಗಿದೆ. ಸದ್ಯ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ

