ಹುಲಿ ಬಂದಾಗ ನರಿಗಳು ಓಡಿ ಹೋಗುತ್ತವೆ: ಕೆಸಿಆರ್ ವಿರುದ್ಧ ತೆಲಂಗಾಣ ಬಿಜೆಪಿ ಮುಖ್ಯಸ್ಥರ ಟೀಕಾಪ್ರಹಾರ
ಹುಲಿ ಬಂದಾಗ ನರಿಗಳು ಓಡಿಹೋಗುತ್ತವೆ. ಈಗ ಹುಲಿ ಬಂದಾಗ ಅವರು (ಕೆಸಿಆರ್) ಓಡಿಹೋಗುತ್ತಿದ್ದಾರೆ, ಅವರು ಯಾಕೆ ಹೀಗೆ ಮಾಡುತ್ತಿದ್ದಾರೆಂದು ನಮಗೆ ತಿಳಿದಿಲ್ಲವೇ?
ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಶನಿವಾರ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ (TRS) ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ. ಕೆ. ಚಂದ್ರಶೇಖರ ರಾವ್ ಅವರು ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಬರಮಾಡಿಕೊಳ್ಳಲಿಲ್ಲ ಇದಕ್ಕೆ ಕಿಡಿ ಕಾರಿದ ಕುಮಾರ್, ಟಿಆರ್‌ಎಸ್ ಅನ್ನು ನರಿಗಳಿಗೆ ಹೋಲಿಸಿದ್ದಾರೆ. “ಹುಲಿ ಬಂದಾಗ ನರಿಗಳು ಓಡಿಹೋಗುತ್ತವೆ. ಈಗ ಹುಲಿ ಬಂದಾಗ ಅವರು (ಕೆಸಿಆರ್) ಓಡಿಹೋಗುತ್ತಿದ್ದಾರೆ, ಅವರು ಯಾಕೆ ಹೀಗೆ ಮಾಡುತ್ತಿದ್ದಾರೆಂದು ನಮಗೆ ತಿಳಿದಿಲ್ಲವೇ? ಮುಂದಿನ ದಿನಗಳಲ್ಲಿ ಇಲ್ಲಿ ಕೇಸರಿ ಮತ್ತು ಕಮಲದ ಧ್ವಜಗಳು ರಾರಾಜಿಸಲಿವೆ’ ಎಂದು ಕರೀಂನಗರದ ಲೋಕಸಭಾ ಸಂಸದರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕೆಸಿಆರ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ ಪ್ರೋಟೋಕಾಲ್ ಸ್ವಾಗತವನ್ನು ತಪ್ಪಿಸಿದನ್ನು ಬಿಜೆಪಿ ಟೀಕಿಸಿದೆ. ಕಳೆದ ಆರು ತಿಂಗಳಲ್ಲಿ ಮೂರು ಬಾರಿ ಕೆಸಿಆರ್ ಇದೇ ರೀತಿ ಮಾಡಿದ್ದಾರೆ. ಮುಖ್ಯಮಂತ್ರಿಯವರ ಈ ಕೃತ್ಯವು ಪ್ರಧಾನಿಯವರ ಸಂಸ್ಥೆಗೆ ಮಾಡಿದ ಅವಮಾನ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಪ್ರಧಾನ ಮಂತ್ರಿಗಳು ಸಹಕಾರಿ ಫೆಡರಲಿಸಂಗೆ ಸ್ಪಷ್ಟವಾದ ಕರೆಯನ್ನು ನೀಡಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಭಿನ್ನಾಭಿಪ್ರಾಯವಿರುವ ಎಲ್ಲಾ ನಾಯಕರನ್ನು ಭೇಟಿ ಮಾಡಿದ್ದರು ಇದನ್ನು ಗೌರವ ಎನ್ನಲಾಗುತ್ತದೆ . ಸಾಂವಿಧಾನಿಕವಾಗಿ ಫೆಡರಲ್ ಪ್ರೋಟೋಕಾಲ್ ಅನ್ನು ಕೆಸಿಆರ್ ಅಡ್ಡಿಪಡಿಸಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿರುವುದಾಗಿ ಎಂದು ಪಿಟಿಐ ಉಲ್ಲೇಖಿಸಿದೆ.
Welcomed Hon’ble Union Home Minister & Minister of Cooperation Shri @AmitShah ji at HICC for @BJP4India National Executive Committee Meeting.#BJPNECInTelangana pic.twitter.com/CKmLuZDVGs
— Bandi Sanjay Kumar (@bandisanjay_bjp) July 2, 2022
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಡುವೆಯೇ ಈ ವಿವಾದ ಉಂಟಾಗಿದೆ. ಸಭೆಗೆ ಹೈದರಾಬಾದ್ ಅನ್ನು ಆಯ್ಕೆ ಮಾಡುವ ಬಿಜೆಪಿಯ ನಿರ್ಧಾರವು ತುಲನಾತ್ಮಕವಾಗಿ ದುರ್ಬಲವಾಗಿರುವ ಪ್ರದೇಶಗಳಲ್ಲಿ ವಿಸ್ತರಣೆಗೆ ರಾಜ್ಯವು ತನ್ನ ಕಾರ್ಯಸೂಚಿಯಲ್ಲಿ ಮೊದಲ ಆದ್ಯತೆಯಾಗಿದೆ ಎಂಬುದಕ್ಕೆ ಪಕ್ಷದಿಂದ ಸ್ಪಷ್ಟವಾದ ಸಂಕೇತವೆಂದು ಪರಿಗಣಿಸಲಾಗಿದೆ. ತೆಲಂಗಾಣದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ.
2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ದೆಹಲಿಯ ಹೊರಗೆ ಪಕ್ಷವು ತನ್ನ ಪ್ರಮುಖ ರಾಷ್ಟ್ರೀಯ ಸಭೆಯನ್ನು ನಡೆಸುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ 2017ರಲ್ಲಿ ಒಡಿಶಾ, 2016ರಲ್ಲಿ ಕೇರಳ ಮತ್ತು 2015ರಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿತ್ತು.
Published On - 10:03 pm, Sat, 2 July 22