AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮಾಜಿ ಡಿಜಿಪಿ ಶ್ರೀಕುಮಾರ್​​ಗೆ ನ್ಯಾಯಾಂಗ ಬಂಧನ

ಜಾಮೀನು ಸಿಗುವವರೆಗೆ ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ. ಇಲ್ಲಿಯವರೆಗೆ ಜಾಮೀನು ಅರ್ಜಿ ಸಲ್ಲಿಸಿಲ್ಲ. ಇಲ್ಲಿಯವರೆಗೆ ನಮ್ಮೊಂದಿಗೆ ಯಾರೂ ಅನುಚಿತವಾಗಿ ವರ್ತಿಸಿಲ್ಲ ಎಂದು ಇಬ್ಬರೂ ಮ್ಯಾಜಿಸ್ಟ್ರೇಟ್‌ಗೆ ತಿಳಿದ್ದು ತೀಸ್ತಾ ತನ್ನ ವಕೀಲ ಎಸ್‌ಎಂ ವತ್ಸಾ ಮೂಲಕ ಜೈಲಿನೊಳಗೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದರು.

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮಾಜಿ ಡಿಜಿಪಿ ಶ್ರೀಕುಮಾರ್​​ಗೆ ನ್ಯಾಯಾಂಗ ಬಂಧನ
ತೀಸ್ತಾ ಸೆಟಲ್ವಾಡ್ -ಶ್ರೀಕುಮಾರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 02, 2022 | 7:14 PM

Share

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ (Teesta Setalvad) ಮತ್ತು ಮಾಜಿ ಡಿಜಿಪಿ ಆರ್‌ಬಿ ಶ್ರೀಕುಮಾರ್ (former DGP RB Sreekumar) ಅವರನ್ನು ಎಂವಿ ಚೌಹಾಣ್‌ನ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯ ಶನಿವಾರ ಪೊಲೀಸ್ ಕಸ್ಟಡಿ ಪೂರ್ಣಗೊಳಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. 2002ರ ಗುಜರಾತ್ ಗಲಭೆಯಲ್ಲಿ(2002 Gujarat riots) ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್ ಚಿಟ್ ಅನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದ ಒಂದು ದಿನದ ನಂತರ ಅಹಮದಾಬಾದ್ ಡಿಟೆಕ್ಷನ್ ಆಫ್ ಕ್ರೈಮ್ ಬ್ರಾಂಚ್ (ಡಿಸಿಬಿ) ಇವರಿಬ್ಬರನ್ನು ಕಳೆದ ತಿಂಗಳು ಬಂಧಿಸಿತ್ತು. ಜಾಮೀನು ಸಿಗುವವರೆಗೆ ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ. ಇಲ್ಲಿಯವರೆಗೆ ಜಾಮೀನು ಅರ್ಜಿ ಸಲ್ಲಿಸಿಲ್ಲ. ಇಲ್ಲಿಯವರೆಗೆ ನಮ್ಮೊಂದಿಗೆ ಯಾರೂ ಅನುಚಿತವಾಗಿ ವರ್ತಿಸಿಲ್ಲ ಎಂದು ಇಬ್ಬರೂ ಮ್ಯಾಜಿಸ್ಟ್ರೇಟ್‌ಗೆ ತಿಳಿದ್ದು ತೀಸ್ತಾ ತನ್ನ ವಕೀಲ ಎಸ್‌ಎಂ ವತ್ಸಾ ಮೂಲಕ ಜೈಲಿನೊಳಗೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದರು. ಅವರು ಎನ್‌ಜಿಒ (ಸಿಜೆಪಿ) ಮೂಲಕ ಕೆಲಸ ಮಾಡುವಾಗ, ಅನೇಕರನ್ನು ಅಪರಾಧಿಗಳೆಂದು ಪರಿಗಣಿಸಲಾಗಿದೆ. ಅವರಲ್ಲಿ ಹಲವರು ಸಾಬರಮತಿ ಕೇಂದ್ರೀಯ ಜೈಲಿನಲ್ಲಿದ್ದು ನ್ಯಾಯಾಂಗ ಬಂಧನದ ಸಮಯದಲ್ಲಿ ತಾನು ಅಲ್ಲಿರಬೇಕಾಗುತ್ತದೆ. ಆದ್ದರಿಂದ ಅಲ್ಲಿ ಅಪಾಯವಿದೆ ಎಂದು ಗ್ರಹಿಸಿ ಆಕೆ ರಕ್ಷಣೆ ಬೇಡಿದ್ದಾಳೆ ಎಂದು ವಕೀಲರು ಹೇಳಿದ್ದಾರೆ.

ಪ್ರಾಸಿಕ್ಯೂಟರ್ ಮಿತೇಶ್ ಅಮೀನ್ ಮತ್ತು ಅಮಿತ್ ಪಟೇಲ್ ಅವರು ತೀಸ್ತಾ”ಅಸಾಧಾರಣ ಕೈದಿಯಲ್ಲ” ಎಂದು ಈ ಅರ್ಜಿಯನ್ನು ವಿರೋಧಿಸಿದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದು, ಒಂದು ಗಂಟೆಯೊಳಗೆ ಪ್ರಕಟಿಸುವ ಸಾಧ್ಯತೆಯಿದೆ.

ಸೆಟಲ್ವಾಡ್ ಮತ್ತು ಶ್ರೀಕುಮಾರ್ ವಿರುದ್ಧ ಕ್ರಿಮಿನಲ್ ಪಿತೂರಿ, ಫೋರ್ಜರಿ ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಇನ್ಸ್‌ಪೆಕ್ಟರ್ ದರ್ಶನ್‌ಸಿಂಹ ಬರಾದ್ ಅವರು ಡಿಸಿಬಿಯಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಗುಜರಾತ್ ರಾಜ್ಯದ ಪರವಾಗಿ ಸಲ್ಲಿಸಲಾದ ಒಂಬತ್ತು ಪುಟಗಳ ಎಫ್‌ಐಆರ್‌ನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಹೆಸರಿಸಲಾಗಿದೆ. ಭಟ್ ಈಗಾಗಲೇ ಮತ್ತೊಂದು ಪ್ರಕರಣದಲ್ಲಿ ಜೈಲು ಸೇರಿದ್ದಾರೆ.