AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕ ಸರ್ಕಾರದ ಯುಎಸ್​​ಸಿಐಆರ್​​ಎಫ್ ವರದಿ ತಿರಸ್ಕರಿಸಿದ ಭಾರತ

ಜೂನ್‌ನಲ್ಲಿ ಬಿಡುಗಡೆಯಾದ ವರದಿಯು ಭಾರತ, ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇತರ 11 ರಾಷ್ಟ್ರಗಳನ್ನು ಧಾರ್ಮಿಕ ಸ್ವಾತಂತ್ರ್ಯದ ಸಂದರ್ಭದಲ್ಲಿ "ನಿರ್ದಿಷ್ಟ ಕಾಳಜಿಯ ದೇಶಗಳು" ಎಂದು ಗೊತ್ತುಪಡಿಸಲು ಬೈಡೆನ್ ಆಡಳಿತಕ್ಕೆ ಶಿಫಾರಸು ಮಾಡಿದೆ.

ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕ ಸರ್ಕಾರದ ಯುಎಸ್​​ಸಿಐಆರ್​​ಎಫ್ ವರದಿ ತಿರಸ್ಕರಿಸಿದ ಭಾರತ
ಅರಿಂದಮ್ ಬಾಗ್ಚಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 02, 2022 | 8:28 PM

Share

ದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಯುಎಸ್ ಸರ್ಕಾರದ (US) ಆಯೋಗದ ಇಂಟರ್​​ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ವರದಿ ಪಕ್ಷಪಾತದಿಂದ ಕೂಡಿದ ಮತ್ತು ನಿಖರವಲ್ಲದ್ದು ಎಂದು ಭಾರತ ಹೇಳಿದೆ.  ವರದಿಯು ಪ್ರೇರಿತ ಅಜೆಂಡಾ ಹೊಂದಿದ್ದು ಇದು ದೇಶದ ಬಹುತ್ವದ ತಿಳುವಳಿಕೆಯನ್ನು ಹೊಂದಿಲ್ಲ ಎಂದು ಭಾರತ ಹೇಳಿದೆ. ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕದ ಆಯೋಗವು ಭಾರತದ ಮೇಲೆ ಪಕ್ಷಪಾತ ಮತ್ತು ತಪ್ಪಾದ ಹೇಳಿಕೆ ನೀಡಿರುವುದನ್ನು ನಾವು ನೋಡಿದ್ದೇವೆ. ಈ ಹೇಳಿಕೆಗಳು ಭಾರತ ಮತ್ತು ಅದರ ಸಾಂವಿಧಾನಿಕ ಚೌಕಟ್ಟು, ಅದರ ಬಹುತ್ವ ಮತ್ತು ಅದರ ಪ್ರಜಾಪ್ರಭುತ್ವದ ನೀತಿಯ ತಿಳುವಳಿಕೆಯ ತೀವ್ರ ಕೊರತೆಯನ್ನು ಪ್ರತಿಬಿಂಬಿಸುತ್ತವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಹೇಳಿದ್ದಾರೆ. ದುರದೃಷ್ಟವಶಾತ್ ಯುಎಸ್​​ಸಿಐಆರ್​​ಎಫ್ ತನ್ನ ಪ್ರೇರಿತ ಕಾರ್ಯಸೂಚಿಯ ಅನುಸಾರವಾಗಿ ತನ್ನ ಹೇಳಿಕೆಗಳು ಮತ್ತು ವರದಿಗಳಲ್ಲಿ ತಪ್ಪಾದ ಮಾಹಿತಿಗಳನ್ನು ಪದೇ ಪದೇ ನೀಡುವುದನ್ನು ಮುಂದುವರಿಸಿದೆ. ಅಂತಹ ಕ್ರಮಗಳು ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ವಸ್ತುನಿಷ್ಠತೆಯ ಬಗ್ಗೆ ಕಳವಳಕ್ಕೆ ಮಾತ್ರ ಸಹಾಯ ಮಾಡುತ್ತದೆ ಎಂದು ವಕ್ತಾರರು ಹೇಳಿದ್ದಾರೆ.

ಜೂನ್‌ನಲ್ಲಿ ಬಿಡುಗಡೆಯಾದ ವರದಿಯು ಭಾರತ, ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇತರ 11 ರಾಷ್ಟ್ರಗಳನ್ನು ಧಾರ್ಮಿಕ ಸ್ವಾತಂತ್ರ್ಯದ ಸಂದರ್ಭದಲ್ಲಿ “ನಿರ್ದಿಷ್ಟ ಕಾಳಜಿಯ ದೇಶಗಳು” ಎಂದು ಗೊತ್ತುಪಡಿಸಲು ಬೈಡೆನ್ ಆಡಳಿತಕ್ಕೆ ಶಿಫಾರಸು ಮಾಡಿದೆ.

ವಿಶೇಷ ವರ್ಚುವಲ್ ಸಂವಾದ ವೇಳೆ ಯುಎಸ್​​ಸಿಐಆರ್​​ಎಫ್ ಕಮಿಷನರ್ ಅನುರಿಮಾ ಭಾರ್ಗವ ಅವರು ಭಾರತೀಯ ಸರ್ಕಾರಿ ಅಧಿಕಾರಿಗಳು ಹೇರಳವಾದ ಗುಂಪು ಹಿಂಸಾಚಾರದೊಂದಿಗೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಕಿರುಕುಳಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.