Mental Health: ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿಮ್ಮ ಪ್ರಾಣಕ್ಕೆ ಕಂಟಕವಾಗಬಹುದು ಎಚ್ಚರ

ಅಧ್ಯಯನದ ಪ್ರಕಾರ ಮಾನಸಿಕ ಆರೋಗ್ಯವು ನೀವು ಹೇಗೆ ಯೋಚಿಸುತ್ತೀರಿ, ಹೇಗೆ ಭಾವನೆಗಳನ್ನು ಹೊರ ಹಾಕುತ್ತೀರಿ, ಹೇಗೆ ಕಾರ್ಯನಿರ್ವಹಿಸುತ್ತೀರಿ ಮತ್ತು ನಿಮ್ಮ ಆಯ್ಕೆಗಳನ್ನು ಒಳಗೊಂಡಿದೆ.

Mental Health: ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿಮ್ಮ ಪ್ರಾಣಕ್ಕೆ ಕಂಟಕವಾಗಬಹುದು ಎಚ್ಚರ
Mental HealthImage Credit source: Google
Follow us
| Updated By: ಅಕ್ಷತಾ ವರ್ಕಾಡಿ

Updated on: Nov 13, 2022 | 11:06 AM

ಮಾನಸಿಕ ಒತ್ತಡ, ಆತಂಕ , ಭಯ, ಖಿನ್ನತೆ ಮುಂತಾದ ಸಮಸ್ಯೆಗಳಿಗೆ ಇಂದು ಯುವ ಜನತೆ ಹೆಚ್ಚಾಗಿ ಬಲಿಯಾಗುತ್ತಿರುವುದು ಕಂಡುಬರುತ್ತಿದೆ. ಮಾನಸಿಕ ಆರೋಗ್ಯವು ಆರೋಗ್ಯದ ಪ್ರಮುಖ ಭಾಗವಾಗಿದ್ದು, ಇದು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಯ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಸೂಚಿಸುತ್ತದೆ.

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ ಮಾನಸಿಕ ಆರೋಗ್ಯವು ನೀವು ಹೇಗೆ ಯೋಚಿಸುತ್ತೀರಿ, ಹೇಗೆ ಭಾವನೆಗಳನ್ನು ಹೊರ ಹಾಕುತ್ತೀರಿ, ಹೇಗೆ ಕಾರ್ಯನಿರ್ವಹಿಸುತ್ತೀರಿ ಮತ್ತು ನಿಮ್ಮ ಆಯ್ಕೆಗಳನ್ನು ಒಳಗೊಂಡಿದೆ.ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ಧೂಮಪಾನ, ಕೆಟ್ಟ ಚಟಗಳೊಂದಿನ ಜೀವನಶೈಲಿಗೆ ನಿಮ್ಮನ್ನು ಬಲಿಮಾಡುತ್ತದೆ.

ಲಕ್ನೋದ ಪ್ರತಿಷ್ಠಿತ ಲಾ ಮಾರ್ಟಿನಿಯರ್ ಶಾಲೆಯೊಂದರ ಪಿಯುಸಿ ವಿದ್ಯಾರ್ಥಿನಿ ಯಶ್ ಸಕ್ಸೇನಾ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.ವಿದ್ಯಾರ್ಥಿನಿ ಸಾವಿನ ವಿಷಯ ತಿಳಿದ ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ರಜೆ ನೀಡಿದೆ.

ಸಿಕ್ಕಿರುವ ಮಾಹಿತಿಯ ಪ್ರಕಾರ ಗೌತಂಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಮಾರ್ಟಿನಿಯರ್ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ 12 ವಿದ್ಯಾರ್ಥಿ ಯಶ್ ಸಕ್ಸೇನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳ ಆರೋಗ್ಯ ಸರಿಯಿರಲ್ಲಿಲ್ಲ, ಶಾಲೆಗೆ ಬರಲು ಸಹ ಸಾಧ್ಯವಾಗುತ್ತಿರಲ್ಲಿಲ್ಲ. ಇಂದು ಬೆಳಿಗ್ಗೆ ಅವರು ಶಾಲೆಗೆ ಬಂದಿದ್ದರು. ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಆಸ್ಪತ್ರೆಯ ವೈದ್ಯರು ವಿದ್ಯಾರ್ಥಿಯ ಜೀವ ಉಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಶಾಲೆಯ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಇದೇ ಮೊದಲಲ್ಲ, ಇದಕ್ಕೂ ಮುನ್ನ 8ನೇ ತರಗತಿ ವಿದ್ಯಾರ್ಥಿ ರಾಹುಲ್ ಶ್ರೀಧರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಆದರೆ ಈ ಘಟನೆಯ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಮಾನಸಿಕ ಆರೋಗ್ಯ ಸಮಸ್ಯೆಗಳು ಅಲ್ಪಾವಧಿಯ ಅಥವಾ ದೀರ್ಘಾವಧಿಯದ್ದಾಗಿರಬಹುದು, ಅದು ವ್ಯಕ್ತಿಯ ಮನಸ್ಥಿತಿ, ನಡವಳಿಕೆ, ಆಲೋಚನೆ ಮತ್ತು ಸಂಬಂಧದ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ. ಮಾನಸಿಕ ಆರೋಗ್ಯವು ಮಾನವರಲ್ಲಿ ಹೃದಯ ಸಮಸ್ಯೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಪರಿಣಾಮಗಳು ನೇರವಾಗಿ, ಜೈವಿಕ ಮಾರ್ಗಗಳ ಮೂಲಕ ಮತ್ತು ಪರೋಕ್ಷವಾಗಿ, ಅಪಾಯಕಾರಿ ಆರೋಗ್ಯ ನಡವಳಿಕೆಗಳ ಮೂಲಕ ಉದ್ಭವಿಸಬಹುದು.

ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ:

ಇದನ್ನು ಓದಿ: ಹೊಗೆ, ಧೂಳು, ಮಾಲಿನ್ಯಗಳು ನಿಮ್ಮ ಹೃದ್ರೋಗಗಳ ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು ಎಚ್ಚರ

ದೀರ್ಘಕಾಲದವರೆಗೆ ಖಿನ್ನತೆ, ಆತಂಕ, ಒತ್ತಡವನ್ನು ಅನುಭವಿಸುತ್ತಿರುವ ಜನರ ದೇಹದ ಮೇಲೆ  ಪರಿಣಾಮಗಳನ್ನು ಅನುಭವಿಸಬಹುದು, ಉದಾಹರಣೆಗೆ ಪದೇ ಪದೇ ಹೃದಯ ನೋವು, ಹೃದಯಕ್ಕೆ ಕಡಿಮೆ ರಕ್ತದ ಹರಿವು ಮುಂತಾದ ಸಮಸ್ಯೆಗಳು ಪ್ರಾರಂಭದಲ್ಲಿ ನಿರ್ಲಕ್ಷಿಸಿದರೆ ಕಾಲಾನಂತರದಲ್ಲಿ ನಿಮ್ಮ ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆ ಹೆಚ್ಚಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: