ಈ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಖಿನ್ನತೆಯ ಅಪಾಯ ಹೆಚ್ಚಾಗುತ್ತದೆ

ಈ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಖಿನ್ನತೆಯ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಖಿನ್ನತೆಯ ಅಪಾಯ ಹೆಚ್ಚಾಗುತ್ತದೆ
ಸಾಂಧರ್ಬಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on: Sep 19, 2022 | 7:00 AM

ಒತ್ತಡಕ್ಕೆ ಒಳಗಾಗುವುದು ಇಂದಿನ ದಿನಗಳಲ್ಲಿ ಅನೇಕರಿಗೆ ಅಭ್ಯಾಸವಾಗಿದೆ. ಆದರೆ ಒತ್ತಡವನ್ನು ಸರಿಯಾಗಿ ನಿಭಾಯಿಸದಿದ್ದರೆ ಅಥವಾ ಕಡಿಮೆ ಮಾಡಿಕೊಳ್ಳದಿದ್ದರೆ ಖಿನ್ನತೆಗೆ ಒಳಗಾಗಬಹುದು. ತಜ್ಞರ ಪ್ರಕಾರ, ಉತ್ತಮ ನಿದ್ರೆ ಮತ್ತು ಸರಿಯಾದ ಆಹಾರ ಸೇವನೆ ಮಾಡುವುದರಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಉತ್ತಮ ಆಹಾರ ಸೇವಿಸುವುದರಿಂದಖಿನ್ನತೆಯನ್ನು ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಕೆಲವು ಆಹಾರ ಮತ್ತು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ.

ಪಾಸ್ಟ್​ ಫುಡ್​

ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ತೊಂದರೆಗಳನ್ನು ಹೊಂದಿರುತ್ತಾರೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಜನರು ತಮ್ಮ ಬಾಯಿ ಚಪಲಕ್ಕೆ ಬಲಿಯಾಗಿ ಪಾಸ್ಟ್​ ಫುಡ್ ಸೇವಿಸುತ್ತಾರೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ಪಾಸ್ಟ್​ ಫುಡ್​ ರುಚಿಕರವಾಗಿರಬಹುದು. ಆದರೆ, ಇದು ಕೊಬ್ಬು, ಸಂಸ್ಕರಿಸಿದ ಕಾರ್ಬ್ಸ್ ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಹೆಚ್ಚಿನ ಫಾಸ್ಟ್ ಫುಡ್ ತಿನ್ನುವ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯು ಬಹಿರಂಗಪಡಿಸುತ್ತದೆ. ಕರೆದ ಪದಾರ್ಥಗಳು, ಮೊಮೊಸ್, ಬರ್ಗರ್, ಪಿಜ್ಜಾ ಮುಂತಾದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು.

ಮದ್ಯ

ಅನೇಕ ಜನರು ಆಯಾಸವಾಗಿದ್ದಾಗ, ಒತ್ತಡದಲ್ಲಿದ್ದಾಗ ಮದ್ಯವನ್ನು ಸೇವಿಸುತ್ತಾರೆ. ಆಲ್ಕೊಹಾಲ್ ಅರೆ ನಿದ್ರಾವಸ್ಥೆಗೆ ಕಾರಣವಾಗಬಹುದು. ಇದು ನಿಮ್ಮ ಖಿನ್ನತೆಯನ್ನು ಹೆಚ್ಚಿಸುತ್ತದೆ. ಖಿನ್ನತೆಯಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ಮದ್ಯ ಸೇವಿಸಬಾರದು. ಆಲ್ಕೋಹಾಲ್ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

ಸಂಸ್ಕರಿಸಿದ ಧಾನ್ಯಗಳು

ಧಾನ್ಯಗಳ ಸೇವನೆಯು ದೇಹಕ್ಕೆ ಒಳ್ಳೆಯದಾದರೂ, ಕೆಲವರು ಸಂಸ್ಕರಿಸಿದ ಧಾನ್ಯಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವುಗಳನ್ನು ಸಂಸ್ಕರಿಸುವುದರಿಂದ ಪೋಷಕಾಂಶಗಳು ಹೋಗುತ್ತವೆ. ಸಂಸ್ಕರಿಸಿದ ಧಾನ್ಯಗಳನ್ನು ತಿನ್ನುವ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಂಶೋಧನೆಯು ಬಹಿರಂಗಪಡಿಸುತ್ತದೆ. ಧಾನ್ಯಗಳು ಅಂದರೆ ಬಾರ್ಲಿ, ಗೋಧಿ ಮತ್ತು ಬೇಳೆಕಾಳುಗಳನ್ನು ಸಂಸ್ಕರಿಸದೆ ತೆಗೆದುಕೊಂಡರೆ ಉತ್ತಮ.

ಗಮನಿಸಿ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ತಜ್ಞರನ್ನು ಸಂಪರ್ಕಿಸಿದ ನಂತರವೇ ಈ ವಿಧಾನಗಳು ಮತ್ತು ಸಲಹೆಗಳನ್ನು ಅನುಸರಿಸಬೇಕು.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ