AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ದಾಳಿಂಬೆ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಹಾನಿ ಕೂಡ ಇದೆ, ಏನದು ಗೊತ್ತಾ?

ತುಂಬಾ ಪೌಷ್ಟಿಕವಾಗಿರುವ ಹಾಗೂ ರುಚಿಯಾಗಿರುವ ದಾಳಿಂಬೆ ಹಣ್ಣು ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ ಕೆಲವೊಮ್ಮೆ ಅಡ್ಡಪರಿಣಾಮ ಬೀರುತ್ತದೆ.

Health Tips: ದಾಳಿಂಬೆ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಹಾನಿ ಕೂಡ ಇದೆ, ಏನದು ಗೊತ್ತಾ?
ದಾಳಿಂಬೆಯ ಅಡ್ಡಪರಿಣಾಮಗಳು
TV9 Web
| Updated By: Rakesh Nayak Manchi|

Updated on: Sep 18, 2022 | 6:14 PM

Share

ದಾಳಿಂಬೆ ಹಣ್ಣು ಬಾಯಿಗೆ ತುಂಬಾ ರುಚಿ ನೀಡುತ್ತದೆ. ಇದು ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದ್ದು, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಹೇರಳವಾಗಿ ಕಂಡುಬರುತ್ತದೆ. ಮಾತ್ರವಲ್ಲದೆ ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಸೆಲೆನಿಯಮ್ ಮತ್ತು ಸತುವುಗಳಲ್ಲಿಯೂ ಸಮೃದ್ಧವಾಗಿದೆ. ಹೀಗಾಗಿ ಇದು ಆರೋಗ್ಯವಾಗಿ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅನೇಕ ರೋಗಳಿಗೆ ವೈದ್ಯರು ದಾಳಿಂಬೆ ತಿನ್ನಲು ಶಿಫಾರಸು ಮಾಡುತ್ತಾರೆ. ಅದಾಗ್ಯೂ ದಾಳಿಂಬೆ ಕೆಲವೊಮ್ಮೆ ಆರೋಗ್ಯಕ್ಕೆ ಅಡ್ಡಪರಿಣಾಮವನ್ನು ಕೂಡ ಉಂಟುಮಾಡಬಹುದು. ಹಾಗಿದ್ದರೆ ದಾಳಿಂಬೆ ದೇಹಕ್ಕೆ ಯಾವ ರೀತಿ ಅಡ್ಡಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಮೊದಲು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ದಾಳಿಂಬೆಯ ಆರೋಗ್ಯಕರ ಪ್ರಯೋಜನಕಾರಿಗಳು

  1. ದಾಳಿಂಬೆ ರಸವು ರಕ್ತದೊತ್ತಡ ರೋಗಿಗಳಿಗೆ ಅಮೃತವಾಗಿ ಕೆಲಸ ಮಾಡುತ್ತದೆ.
  2. ಮಧುಮೇಹದ ಚಿಕಿತ್ಸೆಯಲ್ಲಿ ದಾಳಿಂಬೆ ರಸವನ್ನು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಬಳಕೆ ಮಾಡಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಕಡಿಮೆ ಮಾಡುತ್ತದೆ.
  3. ದಾಳಿಂಬೆಯಲ್ಲಿ ಕಂಡುಬರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕವು ಇತರ ಹಣ್ಣಿನ ರಸಗಳಿಗಿಂತ ಹೆಚ್ಚಿರುತ್ತದೆ. ಇದರ ಸೇವನೆಯಿಂದ ಜೀವಕೋಶಗಳು ಬಲಗೊಳ್ಳುತ್ತವೆ.
  4. ದಾಳಿಂಬೆ ರಸವು ಕ್ಯಾನ್ಸರ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ದಾಳಿಂಬೆ ರಸವು ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳನ್ನು ತಡೆಯಲು ತುಂಬಾ ಸಹಾಯಕವಾಗಿದೆ.
  5. ದಾಳಿಂಬೆ ರಸವು ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
  6. ಕೀಲು ನೋವು ಅಥವಾ ಯಾವುದೇ ರೀತಿಯ ಸಂಧಿವಾತ ಶಮನಕ್ಕೆ ದಾಳಿಂಬೆ ರಸವು ಪ್ರಯೋಜನಕಾರಿಯಾಗಿದೆ.
  7. ಹೃದ್ರೋಗ ಸಮಸ್ಯೆ ಇದ್ದವರಿಗೆ ದಾಳಿಂಬೆ ರಸ ಪ್ರಯೋಜನಕಾರಿಯಾಗಿದೆ.

    ದಾಳಿಂಬೆ ಸೇವನೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳು

  • ಯಾರಾದರೂ ಅತಿಸಾರದ ಸಮಸ್ಯೆ ಹೊಂದಿದ್ದರೆ ದಾಳಿಂಬೆ ಮತ್ತು ದಾಳಿಂಬೆ ರಸವನ್ನು ಸೇವಿಸಬಾರದು.
  • ದಾಳಿಂಬೆ ರಸವನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಅನೇಕರಿಗೆ ತುರಿಕೆ ಉಂಟಾಗಬಹುದು. ಅಲ್ಲದೆ ಊತ ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು.
  • ಕಡಿಮೆ ರಕ್ತದೊತ್ತಡದ ಸಂದರ್ಭದಲ್ಲಿ ದಾಳಿಂಬೆ ರಸವನ್ನು ಮಿತವಾಗಿ ಸೇವಿಸಬೇಕು.
  • ದಾಳಿಂಬೆ ಸಿಪ್ಪೆ, ಬೇರು ಅಥವಾ ಕಾಂಡದ ಅತಿಯಾದ ಬಳಕೆ ಅತ್ಯಂತ ಅಪಾಯಕಾರಿ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ