ಬಸ್ ಓಡಿಸುತ್ತಿದ್ದ ವೇಳೆ ಡ್ರೈವರಿಗೆ ಹೃದಯಾಘಾತ: ಚಾಲಕನ ಸಮಯಪ್ರಜ್ಞೆಯಿಂದ ಉಳಿತು 60 ಪ್ರಯಾಣಿಕರ ಜೀವ
ಬಸ್ ಚಾಲನೆ ಮಾಡುವ ವೇಳೆ ಡ್ರೈವರಿಗೆ ಹೃದಯಾಘಾತ ಆಗಿದ್ದು, ಈ ವೇಳೆ ಬಸ್ಸನ್ನು ರಸ್ತೆ ಬದಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದಾನೆ. ಬಸ್ಸಿನಲ್ಲಿದ್ದ 60 ಪ್ರಯಾಣಿಕರ ಜೀವವನ್ನು ಉಳಿಸಿದ್ದಾನೆ ಎಂದು ಹೇಳಲಾಗಿದೆ.
ಬಾಲಸೋರ್,ಜ.30: ಬಸ್ ಓಡಿಸುತ್ತಿದ್ದ ವೇಳೆ ಡ್ರೈವರಿಗೆ ಹೃದಯಾಘಾತ ಆಗಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಚಾಲಕ ಹೃದಯಾಘಾತ ಉಂಟಾದ ತಕ್ಷಣ ಬಸ್ಸನ್ನು ರಸ್ತೆ ಬದಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದಾನೆ. ಬಸ್ಸಿನಲ್ಲಿದ್ದ 60 ಪ್ರಯಾಣಿಕರ ಜೀವವನ್ನು ಉಳಿಸಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಈ ಬಸ್ ಪಶ್ಚಿಮ ಬಂಗಾಳದಿಂದ ಒಡಿಸಾದ ಬಾಲಸೋರ್ ಜಿಲ್ಲೆಯ ಪಂಚಲಿಂಗೇಶ್ವರ ದೇವಸ್ಥಾನದ ಕಡೆಗೆ 60 ಜನರನ್ನು ಹೊತ್ತೊಯ್ಯುತ್ತಿತ್ತು ಎಂದು ಹೇಳಿದ್ದಾರೆ. ಈ ವೇಳೆ ಚಾಲಕನಿಗೆ ಹೃದಯಾಘಾತ ಉಂಟಾಗಿದೆ. ನೋವು ಕಾಣಿಸಿಕೊಂಡ ತಕ್ಷಣ ಚಾಲಕ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ, ಪ್ರಜ್ಞೆ ತಪ್ಪಿದ್ದಾನೆ.
ಇದನ್ನೂ ಓದಿ: ಎಂಥಾ ಕಾರಣ: ತನಗೆ ಹೇಳದೆ ಅತ್ತೆ ತನ್ನ ಮೇಕ್ಅಪ್ ಕಿಟ್ ಬಳಸಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ
ಈ ವೇಳೆ ಪಕ್ಕದ ಸೀಟಿನಲ್ಲಿದ್ದ ಒಬ್ಬ ಪ್ರಯಾಣಿಕ ಇತರ ಪ್ರಯಾಣಿಕರನ್ನು ಕರೆದಿದ್ದಾನೆ. ನಂತರ ಚಾಲಕನ್ನು ಹತ್ತಿರದ ನೀಲಗಿರಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಚಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಚಾಲಕನ ಸಮಯ ಪ್ರಜ್ಞೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Tue, 30 January 24