Lok Sabha polls: 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ, ಮೈನ್‌ಪುರಿಯಿಂದ ಡಿಂಪಲ್ ಯಾದವ್ ಸ್ಪರ್ಧೆ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಮೈನ್‌ಪುರಿ ಸಂಸದೆ ಡಿಂಪಲ್ ಯಾದವ್ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಮೈನ್‌ಪುರಿ ಯಾದವ್ ಕುಟುಂಬದ ಭದ್ರಕೋಟೆಯಾಗಿದ್ದು, ಈ ಕ್ಷೇತ್ರವನ್ನು ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಡಿಂಪಲ್ ಅವರ ಮಾವ ಮುಲಾಯಂ ಸಿಂಗ್ ಯಾದವ್ ಅವರು ಈ ಹಿಂದೆ ಪ್ರತಿನಿಧಿಸಿದ್ದರು.
ದೆಹಲಿ ಜನವರಿ 30: ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ (Lok Sabha elections) 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಮಾಜವಾದಿ ಪಾರ್ಟಿ (Samajwadi Party ) ಮಂಗಳವಾರ ಪ್ರಕಟಿಸಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಮೈನ್‌ಪುರಿ ಸಂಸದೆ ಡಿಂಪಲ್ ಯಾದವ್ (Dimple Yadav) ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಮೈನ್‌ಪುರಿ ಯಾದವ್ ಕುಟುಂಬದ ಭದ್ರಕೋಟೆಯಾಗಿದ್ದು, ಈ ಕ್ಷೇತ್ರವನ್ನು ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಡಿಂಪಲ್ ಅವರ ಮಾವ ಮುಲಾಯಂ ಸಿಂಗ್ ಯಾದವ್ ಅವರು ಈ ಹಿಂದೆ ಪ್ರತಿನಿಧಿಸಿದ್ದರು.
ಸಂಭಾಲ್‌ನ ಹಾಲಿ ಸಂಸದ ಶಫೀಕರ್ ರೆಹಮಾನ್ ಬಾರ್ಕ್ ಕೂಡ ಈ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ. ಯುಪಿಯ ಕ್ಯಾಬಿನೆಟ್‌ನ ಮಾಜಿ ಸಚಿವ ರವಿದಾಸ್ ಮೆಹ್ರೋತ್ರಾ ಅವರು ರಾಜ್ಯದ ರಾಜಧಾನಿ ಲಕ್ನೋದಿಂದ ಸ್ಪರ್ಧಿಸಲಿದ್ದಾರೆ.
— Samajwadi Party (@samajwadiparty) January 30, 2024
16 ಅಭ್ಯರ್ಥಿಗಳ ಪಟ್ಟಿ
ಡಿಂಪಲ್ ಯಾದವ್ (ಮೈನ್‌ಪುರಿ), ಅಕ್ಷಯ್ ಯಾದವ್ (ಫಿರೋಜಾಬಾದ್), ಧರ್ಮೇಂದ್ರ ಯಾದವ್ (ಬದೌನ್), ಶಫೀಕರ್ ರೆಹಮಾನ್ ಬಾರ್ಕ್ (ಸಂಭಾಲ್), ದೇವೇಶ್ ಶಕ್ಯಾ (ಇತಾಹ್), ಉತ್ಕರ್ಷ್ ವರ್ಮಾ (ಖೇರಿ), ಆನಂದ್ ಭಡೋರಿಯಾ (ಧೌರಾಹ್ರಾ), ಅಣ್ಣು ಟಂಡನ್ (ಉನ್ನಾವ್), ರವಿದಾಸ್ ಮೆಹ್ರೋತ್ರಾ (ಲಕ್ನೋ), ಡಾ ನವಲ್ ಕಿಶೋರ್ ಶಾಕ್ಯಾ (ಫರೂಕಾಬಾದ್), ರಾಜಾ ರಾಮ್ ಪಾಲ್ (ಅಕ್ಬರ್ಪುರ್), ಶಿವಶಂಕರ್ ಸಿಂಗ್ ಪಟೇಲ್ (ಬಂಡಾ), ಅವಧೇಶ್ ಪ್ರಸಾದ್ (ಫೈಜಾಬಾದ್), ಕಾಜಲ್ ನಿಶಾದ್ (ಗೋರಖ್ಪುರ), ಲಾಲ್ಜಿ ವರ್ಮಾ (ಅಂಬೇಡ್ಕರ್ ನಗರ) ಮತ್ತು ರಾಮ್ ಪ್ರಸಾದ್ ಚೌಧರಿ ( ಬಸ್ತಿ).
ಇದನ್ನೂ ಓದಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಅಚ್ಚರಿ ಫಲಿತಾಂಶ: ಬೊಮ್ಮಾಯಿ ಭವಿಷ್ಯ
ಬಿಜೆಪಿಯನ್ನು ಎದುರಿಸಲು ಅಖಿಲೇಶ್ ಯಾದವ್ ಮೈತ್ರಿ ಮಾದರಿ
ಏತನ್ಮಧ್ಯೆ, ಭಾನುವಾರ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮೈತ್ರಿ ಮಾದರಿಯನ್ನು ಪ್ರಸ್ತುತಪಡಿಸಿದ್ದಾರೆ.ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ I.N.D.I.A ಬ್ಲಾಕ್‌ನಿಂದ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಹೇಳಿಕೆ ಬಂದಿದೆ.
ಸಮಾಜವಾದಿ ಪಕ್ಷದ ವಕ್ತಾರ ಅಮೀಖ್ ಜಮೇಯ್, “ಮುಂಬರುವ ಚುನಾವಣೆಗಳು ನಮ್ಮ ಜಾತ್ಯತೀತ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ, ನಮ್ಮ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಮತ್ತು ಆರ್‌ಎಲ್‌ಡಿ ಜೊತೆ ಸೀಟು ಹಂಚಿಕೆಯನ್ನು ಘೋಷಿಸುವ ಮೂಲಕ ಮಾದರಿಯನ್ನು ಪ್ರಸ್ತುತಪಡಿಸಿದ್ದಾರೆ” ಎಂದು ಹೇಳಿದರು.
“ಕಾಂಗ್ರೆಸ್ ಜೊತೆ ಎರಡನೇ ಸುತ್ತಿನ ಮಾತುಕತೆ ನಡೆಯುತ್ತಿದೆ. ಬಿಜೆಪಿಯನ್ನು (ಅಧಿಕಾರದಿಂದ) ತೆಗೆದುಹಾಕಲು ಪ್ರತಿಯೊಬ್ಬರೂ ಇದನ್ನು ಅನುಸರಿಸಬೇಕು” ಎಂದು ಅವರು ಹೇಳಿದರು.
ಏತನ್ಮಧ್ಯೆ, ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್, ಬಿಜೆಪಿ ಮತ್ತು “ಮಾಧ್ಯಮದ ದೊಡ್ಡ ವಿಭಾಗ” ಇಂಡಿಯಾ ಮೈತ್ರಿಕೂಟ ಮುರಿದು ದುರ್ಬಲವಾಗಿದೆ ಎಂದು ತೋರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ, ಬಿಹಾರದಲ್ಲಿ ಏನಾಗುತ್ತಿದೆ ಎಂಬುದರ ಹೊರತಾಗಿಯೂ ಇಂಡಿಯಾ ಬಣವು ಬಲಗೊಳ್ಳುವುದನ್ನು ನೀವು ನೋಡುತ್ತೀರಿ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ 11 ಪ್ರಬಲ ಲೋಕಸಭಾ ಸ್ಥಾನಗಳೊಂದಿಗೆ ಕಾಂಗ್ರೆಸ್ ಜೊತೆಗಿನ ತಮ್ಮ ಪಕ್ಷದ ಮೈತ್ರಿಯು “ಉತ್ತಮ ಆರಂಭವಾಗಿದೆ” ಎಂದು ಎಸ್‌ಪಿ ಮುಖ್ಯಸ್ಥ ಯಾದವ್ ಶನಿವಾರ ಘೋಷಿಸಿದ್ದಾರೆ. ಶೀಘ್ರದಲ್ಲೇ, ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಮತ್ತು ಎಸ್‌ಪಿ ಮುಖ್ಯಸ್ಥ ಯಾದವ್ ನಡುವೆ ರಚನಾತ್ಮಕ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ.ಆದರೆ ಇನ್ನೂ ಸೂತ್ರವನ್ನು ಅಂತಿಮಗೊಳಿಸಬೇಕಾಗಿದೆ ಎಂದು ಸಮಾಜವಾದಿ ಪಾರ್ಟಿ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Tue, 30 January 24