Viral Video: ಅಬ್ಬಬ್ಬಾ…ಇದ್ಯಾವುದಪ್ಪಾ ಹೊಸ ಕೀಬೋರ್ಡ್, ನಿಜಕ್ಕೂ ಇದು ಅಚ್ಚರಿ 

ಇಂಟರ್ನೆಟ್ ಜಗತ್ತು ಎಷ್ಟು ದೊಡ್ಡದಾಗಿದೆ ಎಂದರೆ ಇಲ್ಲಿ  ಹಲವಾರು ಅದ್ಭುತಗಳು ಕಾಣಸಿಗುತ್ತವೆ. ಅದರಲ್ಲೂ ಕೆಲವೊಂದು ದೃಶ್ಯಗಳು ನಿಜಕ್ಕೂ ನಮ್ಮಲ್ಲಿ ಅಚ್ಚರಿಯನ್ನು ಮೂಡಿಸಿ,  ಇದು ಸಾಧ್ಯಾನ ಅಂತ  ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಯುವಕನೊಬ್ಬ ಆಫೀನ್​​​ನಲ್ಲಿ ಅತೀ ದೊಡ್ಡ ಕೀಬೋರ್ಡ್ ಹಿಡಿದುಕೊಂಡು, ಅದರಲ್ಲಿಯೇ  ಆಫೀಸ್ ವರ್ಕ್ ಮಾಡಿದ್ದಾನೆ.  ಈ ವಿಡಿಯೋ ಇದೀಗ  ಸಖತ್ ವೈರಲ್ ಆಗಿದ್ದು, ಅಬ್ಬಬ್ಬಾ ಇಂತಹದ್ದೊಂದು ಕೀಬೋರ್ಡ್ ಅನ್ನು ಹಿಂದೆಂದೂ   ನೋಡಿರಲಿಲ್ಲ  ಅಂತ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. 

Viral Video: ಅಬ್ಬಬ್ಬಾ...ಇದ್ಯಾವುದಪ್ಪಾ ಹೊಸ ಕೀಬೋರ್ಡ್, ನಿಜಕ್ಕೂ ಇದು ಅಚ್ಚರಿ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 31, 2024 | 4:50 PM

ನಮಗೆ ತಿಳಿದಿರುವಂತೆ ಈಗಿನ ಕಾಲದಲ್ಲಿ ಬಹುತೇಕ ಎಲ್ಲಾ ಕೆಲಸಗಳು ಕಂಪ್ಯೂಟರ್ ನಲ್ಲಿಯೇ ನಡೆಯುತ್ತವೆ. ಬಹುತೇಕ ಎಲ್ಲರೂ ಪ್ರತಿನಿತ್ಯ ಲ್ಯಾಪ್ ಟಾಪ್ ಅಥವಾ ಪಿಸಿ ಮುಂದೆ ಕುಳಿತು ಕೀ ಬೋರ್ಡ್ ಅಲ್ಲಿ ಟೈಪಿಂಗ್ ಮಾಡುತ್ತಾ ಕೆಲಸ ಮಾಡುತ್ತಿರುತ್ತಾರೆ. ಈಗ ಕೀಬೋರ್ಡ್ ಅಲ್ಲಿ ಯುವಕನೊಬ್ಬ ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾನೆ.  ನಮ್ಮಲ್ಲಿ ಜನರು ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದು ಹೊಸದೇನಲ್ಲ ಬಿಡಿ. ಕೆಲವರು ಹಳೆಯ ವಾಹನಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಅದೇ ರೀತಿ ಈ ಯುವಕ ಅತೀ ದೊಡ್ಡ ಕೀಬೋರ್ಡ್ ತಯಾರಿಸುವ ಮೂಲಕ ಹೊಸ ಪ್ರಯೋಗವೊಂದನ್ನು ಮಾಡಿದ್ದಾನೆ.  ಹೌದು ಸಾಮಾನ್ಯವಾಗಿ ಕಂಪ್ಯೂಟರ್ ಕೀಬೋರ್ಡ್ ಗಾತ್ರದಲ್ಲಿ ಸಣ್ಣದಾಗಿರುತ್ತವೆ. ಆದ್ದರಿಂದ ಇಂತಹ  ಕೀಬೋರ್ಡ್ ಅಲ್ಲಿ ಟೈಪಿಂಗ್ ಮಾಡಲು ತುಂಬಾ ಕಷ್ಟ ಅಂತ ಹೇಳಿ ಈ ಯುವಕ ಅತೀ ದೊಡ್ಡ ಕೀಬೋರ್ಡ್ ಹಿಡಿದುಕೊಂಡು, ಅದರಲ್ಲಿ  ಆಫೀಸ್ ವರ್ಕ್ ಮಾಡಿದ್ದಾನೆ.  ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು,  ಹಲವರಲ್ಲಿ ನಗು ತರಿಸಿದೆ.

ವೈರಲ್  ವಿಡಿಯೋವನ್ನು @HumansNocontext ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಯುವಕನೊಬ್ಬ ಅತೀ ದೊಡ್ಡ ಕೀಬೋರ್ಡ್ ಬಳಸಿಕೊಂಡು ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ದೃಶ್ಯವನ್ನು  ಕಾಣಬಹುದು.

ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಸಣ್ಣ ಕೀಬೋರ್ಡ್ ಬಳಸಿಕೊಂಡು ಕೆಲಸ ಮಾಡಲು ಕಷ್ಟ ಎಂದು ಆಫೀಸಿಗೆ ದೊಡ್ಡ ಗಾತ್ರದ ಕೀಬೋರ್ಡ್ ಒಂದನ್ನು ತಂದು ಅದನ್ನು ಪಿಸಿ ಗೆ ಜೋಡಿಸಿ, ಆ ಕೀಬೋರ್ಡ್ ಅಲ್ಲಿಯೇ ಟೈಪಿಂಗ್ ಮಾಡಿದ್ದಾನೆ.  ಈ ಯುವಕನನ್ನು ಕಂಡು ಅಲ್ಲೇ ಪಕ್ಕದಲ್ಲಿ ಕುಳಿತಿದ್ದಂತಹ  ಯುವಕನೊಬ್ಬ, ಇತನಿಗೆ  ಇದಕ್ಕಿಂತ ದೊಡ್ಡ ಕೀಬೋರ್ಡ್ ಸಿಗಲಿಲ್ಲವೇನೋ  ಅಂತ ಮನಸ್ಸಲ್ಲಿಯೇ ಅಂದುಕೊಳ್ಳುತ್ತಾ, ನಗುತ್ತಿರುವ ದೃಶ್ಯವನ್ನು ಕಾಣಹುದು.

ಇದನ್ನೂ ಓದಿ: ನನ್ನ ಜತೆ ಯಾರು ಇಲ್ಲ, ನಾನು ಒಬ್ಬಂಟಿ, ಒಂಟಿಯಾಗಿ ಪಾರ್ಕಿನಲ್ಲಿ ಆಡಿದ ಕಾಗೆ

ಜನವರಿ 24ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 35 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಟೈಪಿಂಗ್ ಮಿಸ್ಟೇಕ್ ತಪ್ಪಿಸಲು ಬಹಳಷ್ಟು ಜನರಿಗೆ ಈ ಕೀ ಬೋರ್ಡ್ ಅವಶ್ಯಕತೆ ಇದೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು  ʼಅದೇನಾದ್ರೂ ಪರವಾಗಿಲ್ಲ, ನನ್ಗೆ ಈ ಕೀಬೋರ್ಡ್ ಬೇಕೇ ಬೇಕುʼ ಎಂದು ತಮಾಷೆ ಮಾಡಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಇದ್ಯಾವುದಪ್ಪಾ ಹೊಸ ಬಗೆಯ ಕೀಬೋರ್ಡ್ʼ ಎಂದು ಆಶ್ಚರ್ಯಪಟ್ಟಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ