Video: ಕೊನೆಗೂ ನನ್ನ ಕನಸು ನನಸಾಯ್ತು; ಸ್ವಂತ ಮನೆ ಖರೀದಿಸಿದ ಖುಷಿಯಲ್ಲಿ ತೇಲಾಡಿದ ಬೆಂಗಳೂರಿನ ಟೆಕ್ಕಿ
ಸ್ವಂತ ಮನೆ ಯಾವತ್ತಿದ್ರೂ ನಮ್ಮ ಮನೆ ಎಂಬ ಭಾವ ತರುತ್ತದೆ ಹೀಗಾಗಿ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಉಳಿಸಿ ಸ್ವಂತ ಸೂರು ಕಟ್ಟಿಕೊಳ್ಳುತ್ತಾರೆ. ಇಲ್ಲೊಬ್ಬ ವ್ಯಕ್ತಿಯದ್ದು ಅದೇ ಕನಸು. ಹೌದು, ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಶಿಫ್ಟ್ ಆಗಿದ್ದು, ಈ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ಜುಲೈ 08: ಬಾಡಿಗೆ ಮನೆ ಯಾವತ್ತಿದ್ರೂ ಸ್ವಂತ ಮನೆ ಫೀಲ್ ಕೊಡಲ್ಲ. ಬಾಡಿಗೆ ಮನೆಯಲ್ಲಿದ್ದವರಿಗೆ ತಮ್ಮ ಸ್ವಂತ ಸೂರು ಇರಬೇಕೆನ್ನುವ ಕನಸು. ಆದರೆ ಈ ಮದ್ಯಮವರ್ಗದ ಜನರು ಇರೋ ಸಂಬಳದಲ್ಲಿ ಅಲ್ಪ ಸ್ವಲ್ಪ ಉಳಿಸಿ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತಿಲ್ಲ. ದುಡಿದ ಹಣವನ್ನೆಲ್ಲಾ ಬಾಡಿಗೆ ಕಟ್ಟಿ, ಜೀವನ ನಿರ್ವಹಣೆಗೆ ಸಾಕಾಗುತ್ತಿದೆ. ಹೀಗಿರುವಾಗ ಬೆಂಗಳೂರಿನ (Bengaluru) ಐಟಿ ಉದ್ಯೋಗಿಯ ಸ್ವಂತ ಮನೆಯ ಕನಸು ಈಡೇರಿದೆ. ಬಾಡಿಗೆ ಮನೆಯಿಂದ ಸ್ವಂತ ಮನೆ ಶಿಫ್ಟ್ ಆಗಿದ್ದಾರೆ. ಈ ವೇಳೆ ಸ್ವಂತ ಮನೆಗೂ ಬಾಡಿಗೆ ಮನೆಗೂ ಇರುವ ವ್ಯತ್ಯಾಸ ಗೊತ್ತಾಯಿತು ಎಂದಿದ್ದಾರೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ವಿಶಾಲ್ ಶರ್ಮಾ ಎಂಬ ಯುವಕ ಟೆಕ್ಕಿ ಆನ್ ರೀಲ್ಸ್ (techieonreels) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವಂತ ಮನೆಯ ರಿಜಿಸ್ಟ್ರೇಷನ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕುಟುಂಬಕ್ಕಾಗಿ ಮನೆ ಕಟ್ಟುವುದು ಎಂದರೆ ಅದು ಬರೀ ಒಂದೇ ಒಂದು ಸಹಿಗೆ ಸೀಮಿತವಲ್ಲ ಎಂಬ ಶೀರ್ಷಿಕೆ ನೀಡಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಈ ಕ್ಲಿಪಿಂಗ್ ನಲ್ಲಿ ಮನೆ ರಿಜಿಸ್ಟ್ರೇಷನ್ ದಿನ ಬೆಳಗ್ಗೆ ನನಗೆ ಬಾಡಿಗೆ ಮನೆಯಲ್ಲಿ ಇರೋದಕ್ಕೂ, ಸ್ವಂತ ಮನೆ ಖರೀದಿ ಮಾಡುವುದಕ್ಕೂ ಇರುವ ನಿಜವಾದ ವ್ಯತ್ಯಾಸ ಗೊತ್ತಾಯಿತು. ರಿಜಿಸ್ಟ್ರೇಷನ್ ಪೇಪರ್ ಮೇಲೆ ಇದ್ದಿದ್ದು ನನ್ನ ಸಹಿ. ಆ ಸಹಿಯ ಹಿಂದಿನ ನನ್ನ ಖುಷಿ ನನ್ನ ಕುಟುಂಬಕ್ಕೆ ಸೇರಿದ್ದು ಎಂದು ವಿವರಿಸಿದ್ದಾರೆ.
ಸ್ವಂತ ಮನೆಯ ರಿಜಿಸ್ಟ್ರೇಷನ್ ದಿನ ಬೆಂಗಳೂರಿನಲ್ಲಿ ನೆಲೆಸಿರುವ ನನ್ನ ಸಹೋದರ, ಸಹೋದರಿ ಹಾಗೂ ಇಡೀ ಕುಟುಂಬದವರು ಜತೆಗಿದ್ದರು. ನನ್ನ ತಂದೆ-ತಾಯಿಯ ಆಶೀರ್ವಾದ, ಎಲ್ಲರ ಮುಖದಲ್ಲಿ ಖುಷಿಯಿತ್ತು. ಎಲ್ಲರ ಮೊಗದಲ್ಲಿದ್ದ ನಗು ಆ ದಿನವನ್ನು ಇನ್ನಷ್ಟು ಡಬಲ್ ಮಾಡಿತ್ತು. ಈ ಮನೆ ಒಬ್ಬನೇ ಖರೀದಿಸಿದ್ದಲ್ಲ. ಸ್ವಂತ ಮನೆ ಖರೀದಿಸುವ ಕನಸು ನನಸಾಗಲು ನನ್ನ ಇಡೀ ಕುಟುಂಬ ನನ್ನ ಜೊತೆಗೆ ನಿಂತಿತ್ತು ಎಂದಿದ್ದಾರೆ. ಈ ವಿಡಿಯೋದಲ್ಲಿ ಸ್ವಂತ ರಿಜಿಸ್ಟ್ರೇಷನ್ ದಿನದಂದು ಕುಟುಂಬ ಸೇರಿರುವುದನ್ನು ಕಾಣಬಹುದು. ಕನಸು ನನಸಾಗುವ ದಿನದಂದು ಕುಟುಂಬದ ಸದಸ್ಯರ ಮೊಗದಲ್ಲಿ ನಗು ಮೂಡಿರುವುದನ್ನು ನೋಡಬಹುದು.
ಇದನ್ನೂ ಓದಿ: ತಮ್ಮ ಮಾಸಿಕ ಹೂಡಿಕೆ 1.7 ಲಕ್ಷ ರೂ; ಇನ್ವೆಸ್ಟ್ಮೆಂಟ್ ಸೀಕ್ರೆಟ್ ರಿವೀಲ್ ಮಾಡಿದ ಬೆಂಗಳೂರಿನ ದಂಪತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಕ್ಷಣವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಯೋಗ ಕೂಡಿ ಬಂದರೆ ಎಲ್ಲವೂ ಆಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸ ಮನೆ ಖರೀದಿಸಿದ್ದೀರಿ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




