
ಬೆಂಗಳೂರು, ಅಕ್ಟೋಬರ್ 14: ಸದಾ ವಾಹನಗಳ ಟ್ರಾಫಿಕ್ನಿಂದ ಗಿಜಿಗುಡುವ ಬೆಂಗಳೂರಿನ (Bengaluru) ರಸ್ತೆಗಳು ಯಮಸ್ವರೂಪಿ ರಸ್ತೆಗಳಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ರಸ್ತೆ ಗುಂಡಿಗಳು, ಹೊಂಡಗಳಿಂದ ತುಂಬಿದ್ದು, ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಸರಿಯಾದ ಮೂಲಸೌಕರ್ಯದ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಬ್ರ್ಯಾಂಡ್ ಬೆಂಗಳೂರು ಎನ್ನುವ ಥೀಮ್ ಗೆ ಇದು ತದ್ವಿರುದ್ಧವಾಗಿದೆ. ಆದರೆ ಇದೀಗ ಅಮರನಾಥ್ ಶಿವಶಂಕರ್ (Amarnath Shivashankar) ಎಂಬ ಬಳಕೆದಾರ ಕರ್ನಾಟಕ ಸರ್ಕಾರವನ್ನು ವ್ಯವಹಾರ ಮುಂದುವರಿಕೆ ಯೋಜನೆಗಳನ್ನು ಜಾರಿಗೊಳಿಸುವಂತೆ ಮತ್ತು ಬೆಂಗಳೂರಿನ ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ. ಇನ್ನು ಐಟಿ ಪಾರ್ಕ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ
ಅಮರನಾಥ್ ಶಿವಶಂಕರ್ ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್ ನಲ್ಲಿ ಕೋವಿಡ್ ಸಮಯದಲ್ಲಿ ಔಟರ್ ರಿಂಗ್ ರಸ್ತೆ, ಐಟಿಪಿಎಲ್, ಎಲೆಕ್ಟ್ರಾನಿಕ್ ಸಿಟಿ, ಮಾನ್ಯತಾ ಟೆಕ್ ಪಾರ್ಕ್, ಬಾಗ್ಮನೆ ಟೆಕ್ ಪಾರ್ಕ್ ಇತ್ಯಾದಿಗಳ ಐಟಿ ಕಂಪನಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಪೂರ್ಣವಾಗಿ ದೂರವಿದ್ದವು, ಸರ್ಕಾರವು ಹಾಗೆ ಮಾಡಲು ಆದೇಶಿಸಿದರೆ ಅವರು ಮತ್ತೆ ದೂರ ಉಳಿಯಬಹುದು. ನೌಕರರು ತಮ್ಮ ಪ್ರಯಾಣದ ಸಮಯದಲ್ಲಿ ಉತ್ಪಾದಕ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
When IT companies on the Outer Ring Road, ITPL, Electronic City, Manyata Tech Park, Bagmane Tech Park etc. went completely remote for more than a year during Covid, they can do that again if Government mandates them to do so. Employees are losing productive hours during their…
— Amarnath Shivashankar (@Amara_Bengaluru) October 12, 2025
ಬಿಸಿಪಿಯನ್ನು ಕೇಳಿ, ಕೆಲವು ತಿಂಗಳು ಐಟಿ ಪಾರ್ಕ್‌ಗಳನ್ನು ಮುಚ್ಚಿ, ರಸ್ತೆಗಳು ಮತ್ತು ಮಳೆ ನೀರಿನ ಚರಂಡಿಗಳನ್ನು ಸರಿಪಡಿಸಿ, ಮುರಿದ ಮೂಲಸೌಕರ್ಯವನ್ನು ಸರಿಪಡಿಸಿ. ಫ್ಲೈಓವರ್ ನಿರ್ಮಾಣಗಳನ್ನು ಪೂರ್ಣಗೊಳಿಸಿ, ಹೆಚ್ಚಿನ ಬಿಎಂಟಿಸಿ ಬಸ್‌ಗಳನ್ನು ಖರೀದಿಸಿ, ಮೆಟ್ರೋ ನಿರ್ಮಾಣವನ್ನು ವೇಗವಾಗಿ ಟ್ರ್ಯಾಕ್ ಮಾಡಿ. ಇಚ್ಛಾಶಕ್ತಿ ಇರುವಲ್ಲಿ, ಒಂದು ಮಾರ್ಗವಿದೆ. ಬೆಂಗಳೂರನ್ನು ಒಮ್ಮೆ ಮತ್ತು ಶಾಶ್ವತವಾಗಿ ಸರಿಪಡಿಸಿ” ಎಂದು ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ:Video: ಇದು ವಾಹನಕ್ಕಲ್ಲ, ಕೋಣ ಓಡಿಸಲು ಸೂಕ್ತವಾದ ರಸ್ತೆ
ಅಕ್ಟೋಬರ್ 12 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನೋವಿನ ಸಂಗತಿ ಎಂದು ನನಗೆ ತಿಳಿದಿದೆ, ಆದರೆ ಐಟಿ ಪಾರ್ಕ್‌ಗಳನ್ನು ಮುಚ್ಚಲು ಕೇಳುವುದು ತುಂಬಾ ಕಷ್ಟ ಎಂದಿದ್ದಾರೆ. ಇನ್ನೊಬ್ಬರು, ಮನೆ ದುರಸ್ತಿ ಮಾಡುವವರೆಗೂ ಮನೆಯಿಂದಲೇ ಕೆಲಸ ಮಾಡಿ. ಇದು ಬಹುಶಃ ನಗರದ ಅತ್ಯುತ್ತಮ ಮೂಲಸೌಕರ್ಯ ಯೋಜನೆಯಾಗಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು ದುರಸ್ಥಿ ಕಾರ್ಯಗಳು ಮೇಲಿಂದ ಮೇಲೆ ನಡೆಯುತ್ತವೆ. ಆದರೆ ಈ ಬಗ್ಗೆ ಸರಿಯಾಗಿ ಗಮನ ಹರಿಸಿದರೆ ಮಾತ್ರ ಮೂಲ ಸೌಕರ್ಯಗಳು ಉತ್ತಮವಾಗಿರಲು ಸಾಧ್ಯ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ