ಬೆಂಗಳೂರು: ನಗರದ ಚಿಂದಿ ಆಯುವ ಮಹಿಳೆಯ ಇಂಗ್ಲೀಷ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈಕೆಯ ಇಂಗ್ಲೀಷ್ ಕೇಳಿದ ನೆಟ್ಟಿಗರೆಲ್ಲಾ ಫಿದಾ ಆಗಿದ್ದಾರೆ. ವಿಡಿಯೋ ಮಾಡುತ್ತಿರುವ ಯುವತಿಯ ಜತೆ ಚಿಂದಿ ಆಯುವ ಮಹಿಳೆ ಸರಾಗವಾಗಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದಾಳೆ. ಕೇಳಿದ ಪ್ರಶ್ನೆಗಳಿಗೆಲ್ಲಾ ಇಂಗ್ಲೀಷ್ ಭಾಷೆಯಲ್ಲಿಯೇ ಉತ್ತರ ನೀಡುತ್ತಿದ್ದಾಳೆ. ವಿಡಿಯೋ ಜನರ ಮನ ಗೆದ್ದಿದ್ದು ಸಖತ್ ವೈರಲ್ ಆಗಿದೆ.
ಚಿಂದಿ ಆಯುವ ಮಹಿಳೆಯ ಹೆಸರು ಸಿಸಿಲಿಯಾ ಮಾರ್ಗರೇಟ್ ಲಾವರೆನ್ಸ್ ಎಂದು ಹೇಳಿಕೊಂಡಿದ್ದಾಳೆ. ವಿಡಿಯೋ ಮಾಡಿದ ಶಚಿನಾ ಹೆಗ್ಗಾರ್ ಪ್ರಶ್ನೆ ಕೇಳುತ್ತಾ ಹೋಗುತ್ತಾರೆ. ಶಚಿನಾ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಿಸಿಲಿಯಾ ಇಂಗ್ಲೀಷ್ನಲ್ಲಿಯೇ ಉತ್ತರಿಸಿದ್ದಾರೆ. ಇವರಿಬ್ಬರ ಸಂಭಾಷಣೆಯ ವಿಡಿಯೋ ಮೆಚ್ಚುವಂತಿದೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ವಿಡಿಯೋದಲ್ಲಿ ಗಮನಿಸುವವಂತೆ ಸಿಸಿಲಿಯಾ ಜಪಾನ್ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. 2007-14ರವರೆಗೆ ಜಪಾನ್ನಲ್ಲಿದ್ದೆ ಬಳಿಕ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಜತೆಜತೆಗೆ ಸುಂದರವಾಗಿ ಹಾಡನ್ನು ಕೂಡಾ ಹಾಡಿದ್ದಾರೆ.
ಈ ವಿಡಿಯೋ ತುಂಬಾ ಸ್ಪೂರ್ತಿದಾಯಕವಾಗಿದೆ. ಅವಳು ಒಬ್ಬಳೇ ಅಲ್ಲ, ಅವಳು ಒಬ್ಬಂಟಿಯಾಗಿಲ್ಲ ಎಂದು ಹೇಳಿರುವ ಮಾತು ನಿಜವಾಗಿಯೂ ಇಷ್ಟವಾಯಿತು ಎಂದು ಓರ್ವರು ಹೇಳಿದ್ದಾರೆ. ದೇವರು ಮಹಿಳೆಗೆ ಆಶೀರ್ವದಿಸುತ್ತಾನೆ ಎಂದು ಹೇಳಿದ್ದಾರೆ. ಜೀವನ ಅಂದಾಕ್ಷಣ ಏರಿಳಿತಗಳು ಇದ್ದೇ ಇರುತ್ತದೆ. ಅವಳ ಮನೋಭಾವನೆ ಮೆಚ್ಚುವಂತಿದೆ ಎಂದು ಇನ್ನೋರ್ವರು ಬರೆದಿದ್ದಾರೆ.
ಇದನ್ನೂ ಓದಿ:
Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಸ್ಟೆಪ್! ವಯಸ್ಸಿಗೂ ಮೀರಿದ ಅಭಿನಯ ನೀವೂ ನೋಡಿ ..
Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!
Published On - 9:48 am, Tue, 17 August 21