ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?

|

Updated on: Apr 10, 2023 | 3:19 PM

ರೆಸ್ಟೋರೆಂಟ್​ ಹೊರಾಂಗಣ ಮತ್ತು ಒಳಾಂಗಣವನ್ನು ಜೈಲಿನ ಹಾಗೆ ನಿರ್ಮಿಸಲಾಗಿದೆ. ರೆಸ್ಟೋರೆಂಟ್​ ಒಳಗಡೆ ಪ್ರವೇಶ ಪಡೆಯುವ ಮುನ್ನ ದೊಡ್ಡದಾಗಿ "ಸೆಂಟ್ರಲ್​ ಜೈಲ್ "​ ರೆಸ್ಟೋರೆಂಟ್ ಬೋರ್ಡ್​ ಕಾಣುತ್ತದೆ. ಒಳಗಡೆ ಹೋಗಿ ಕೂಡುತ್ತಿದ್ದಂತೆ ಪೊಲೀಸ್​ರ​ ಮತ್ತು ಅಪರಾಧಿಗಳ ವೇಶ ಧರಿಸಿರುವ ವೇಟರ್​​ಗಳು ಬರುತ್ತಾರೆ. ಮತ್ತೆ ಊಟವನ್ನು ಜೈಲಿನ ತಟ್ಟೆಯಲ್ಲೇ ನೀಡುತ್ತಾರೆ ಯಾವುದು ಆ ರೆಸ್ಟೋರೆಂಟ್​ ಇಲ್ಲಿದೆ.

ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?
ಸೆಂಟ್ರಲ್​ ಜೈಲ್​ ರೆಸ್ಟೋರೆಂಟ್​​
Follow us on

ಬೆಂಗಳೂರು: ರೆಸ್ಟೋರೆಂಟ್​​ಗಳೆಂದರೇ (Restaurant) ಮೊದಲಿಗೆ ನಮ್ಮ ಕಣ್ಮುಂದೆ ಬರೋದು ಜಗಮಗಿಸುವ ಲೈಟು, ಅಲ್ಲಿ ಓಡಾಡುವ ವೇಟರ್​ಗಳು, ಹಾಗೇ ವೆಚ್ಚದಾಯಕವಾದ, ರುಚಿಕರವಾದ ಆಹಾರ ಪದಾರ್ಥಗಳು. ಆದರೆ ಈ ಒಂದು ಹೋಟೇಲ್​ಗೆ ಹೋದರೆ ನಿಮಗೆ ಜೈಲಿನ ಒಳಗಡೆ ಹೋದ ಹಾಗೆ ಅನಿಸುತ್ತದೆ. ಊಟ ಜೈಲಿನ ಊಟದ ತರಹ ಭಾಸವಾಗುತ್ತದೆ. ಹೌದು “ಬೆಂಗಳೂರಿನ (Bengaluru) ಹೆಚ್​ ಎಸ್​ ಆರ್​ ಲೇಔಟ್​ನಲ್ಲಿದೆ ಸೆಂಟ್ರಲ್​​ ಜೈಲ್​ ರೆಸ್ಟೋರೆಂಟ್” ನ (HSR Layout Central Jail Restaurant)​​​. ವಿಡಿಯೋ ವೈರಲ್​ ಆಗಿದೆ.

ರೆಸ್ಟೋರೆಂಟ್​ ಹೊರಾಂಗಣ ಮತ್ತು ಒಳಾಂಗಣವನ್ನು ಜೈಲಿನ ಹಾಗೆ ನಿರ್ಮಿಸಲಾಗಿದೆ. ರೆಸ್ಟೋರೆಂಟ್​ ಒಳಗಡೆ ಪ್ರವೇಶ ಪಡೆಯುವ ಮುನ್ನ ದೊಡ್ಡದಾಗಿ “ಸೆಂಟ್ರಲ್​ ಜೈಲ್​ ರೆಸ್ಟೋರೆಂಟ್​ ಬೋರ್ಡ್”​ ಕಾಣುತ್ತದೆ. ಒಳಗಡೆ ಹೋಗಿ ಕೂಡುತ್ತಿದ್ದಂತೆ ಪೊಲೀಸ್​ ಮತ್ತು ಅಪರಾಧಿಗಳ ವೇಶ ಧರಿಸಿರುವ ವೇಟರ್​​ಗಳು ಬರುತ್ತಾರೆ. ಮತ್ತೆ ಊಟವನ್ನು ಜೈಲಿನ ತಟ್ಟೆಯಲ್ಲೇ ನೀಡುತ್ತಾರೆ.

ಇದನ್ನೂ ಓದಿ: ಹಾವು ಕಚ್ಚಿತೆಂದು, ಹಾವನ್ನೇ ಕಚ್ಚಿ ಕೊಂದ ವ್ಯಕ್ತಿ; ವಿಡಿಯೋ ವೈರಲ್​​

ರೆಸ್ಟೋರೆಂಟ್​ ಒಳಗಡೆ ಜೈಲು ಕಂಬಿಗಳಿದ್ದು, ಕಂಬಿ ಒಳಗಡೆ ಹೋಗಿ ಊಟ ಮಾಡಬೇಕು. ಇದು ನಿಮಗೆ ಜೈಲಿನ ಒಳಗಡೆ ಇದ್ದ ಅನುಭವ ಕೊಡುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದೆ. ಉದ್ಯಮಿ ಹರ್ಷ್ ಗೋಯೆಂಕಾ ಎಂಬವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲಲ್ಲಿ ಹಂಚಿಕೊಂಡಿದ್ದು, ಜೈಲ್​ ಕೆ ಮಜಾ ಖಾವೋ ಎಂದು ಶಿರ್ಷಿಕೆ ನೀಡಿದ್ದಾರೆ. ಪೋಸ್ಟ್ ಮಾಡಿದ ನಂತರ, ವೀಡಿಯೊವನ್ನು ಟ್ವಿಟರ್​​ನಲ್ಲಿ 33,000 ಜನರು ವೀಕ್ಷಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Mon, 10 April 23