Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸಿಟಿಯೇ ನೆಗೆದುಬಿತ್ತು- ಲಕ್ಷುರಿ ಫ್ಲಾಟ್ ಸೇಲ್ ಆಗಲಿಲ್ಲ ಅಂತ ಶಾಪ ಹಾಕಿದ ಕುಳ

Penthouse For Rs 285 Crore: ತಮ್ಮ ಪೆಂಟ್​ಹೌಸ್ ಫ್ಲ್ಯಾಟ್ ಮಾರಾಟ ಆಗಲಿಲ್ಲ ಎಂಬ ಹತಾಶೆಯಲ್ಲಿ ದುಬೈ ನಿವಾಸಿ ಕೋಟ್ಯಾಧಿಪತಿಯೊಬ್ಬರು ಲಂಡನ್ ನಗರದ ಕಥೆಯೇ ಮುಗೀತು ಎಂದು ಉದ್ಗರಿಸಿದ್ದಾರೆ.

ಈ ಸಿಟಿಯೇ ನೆಗೆದುಬಿತ್ತು- ಲಕ್ಷುರಿ ಫ್ಲಾಟ್ ಸೇಲ್ ಆಗಲಿಲ್ಲ ಅಂತ ಶಾಪ ಹಾಕಿದ ಕುಳ
ಲಂಡನ್​ನ ಬೆಲ್​ಗ್ರೇವಿಯಾದ ಒಂದು ಜಾಗ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 09, 2023 | 6:35 PM

ಲಂಡನ್: ಇವರು ದುಬೈನಲ್ಲಿರುವ ಬ್ರಿಟನ್ ಸಾಹುಕಾರ. ಲಂಡನ್ ನಗರದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಬೆಲ್​ಗ್ರೇವಿಯಾದಲ್ಲಿ (Belgravia) ಇವರು ಐಷಾರಾಮಿ ಪೆಂಟ್​ಹೌಸ್​ವೊಂದನ್ನು (Penthouse) ಹೊಂದಿದ್ದಾರೆ. ಬೆಲ್​ಗ್ರೇವಿಯಾದಲ್ಲಿ ಹಲವು ಐಷಾರಾಮಿ ಅಪಾರ್ಟ್ಮೆಂಟ್​ಗಳಿದ್ದು, ಲಂಡನ್​ನ ಹಾಟ್ ರಿಯಲ್ ಎಸ್ಟೇಟ್ ಮಾರುಕಟ್ಟೆ ಎಂದೇ ಪರಿಗಣಿತವಾಗಿದೆ. ಇಂಥ ಪ್ರದೇಶದಲ್ಲಿ ಲಕ್ಷುರಿ ಪೆಂಟ್​ಹೌಸ್ ಹೊಂದಿರುವ ಈ ವ್ಯಕ್ತಿ, ಅದನ್ನು ಮಾರಲು ಹರಸಾಹಸ ನಡೆಸಿದ್ದಾರೆ. 285 ಕೋಟಿ ರುಪಾಯಿಗೆ ತಮ್ಮ ಪ್ಲಾಟ್ ಅನ್ನು ಮಾರುವ ಅವರ ಯತ್ನ ವಿಫಲವಾಗಿಲ್ಲ. ಇವರ ಏಜೆಂಟ್ ಕೂಡ ಪೆಂಟ್ ಹೌಸ್ ಮಾರುವುದು ಹೇಗೆಂದು ತಲೆ ಮೇಲೆ ಹಚ್ಚಿ ಕೂತಿದ್ದಾರೆ. ಅಂದಹಾಗೆ, ತಮ್ಮ ಲಂಡನ್ ನಗರಿಯ ಪೆಂಟ್​ಹೌಸ್ ಲಕ್ಷುರಿ ಮನೆಯು ಮಾರಾಟ ಕಾಣದ ಹತಾಶೆಯಲ್ಲಿ ಈ ಕೋಟ್ಯಾಧಿಪತಿಯು ‘ಲಂಡನ್ ಕಥೆ ಮುಗೀತುಅದಕ್ಕೇ ನನ್ನ ಫ್ಲಾಟ್ ಮಾರಾಟ ಆಗುತ್ತಿಲ್ಲ’ ಎಂದು ತಮ್ಮ ರಿಯಲ್ ಎಸ್ಟೇಟ್ ಏಜೆಂಟ್ ಬಳಿ ಉದ್ಗರಿಸಿದ್ದಾರಂತೆ.

ಅಂದಹಾಗೆ, ಈ ಕೋಟ್ಯಾಧಿಪತಿ ಈ ಹಿಂದೆ ಲಂಡನ್​ನಲ್ಲೇ ಇದ್ದವರಾದರೂ ನಾನ್ ಡಾಮಿಸೈಲ್ ಸೌಲಭ್ಯ ರದ್ದಾದ ಬಳಿಕ ಈಗ ದುಬೈನಲ್ಲಿ ನೆಲಸಿದ್ದಾರೆ. ನಾನ್ ಡಾಮಿಸೈಲ್ ಸ್ಟೇಟಸ್ ಇದ್ದರೆ ವಿದೇಶೀ ಆದಾಯಕ್ಕೆ ಈ ದೇಶದಲ್ಲಿ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲ. ಹಿಂದೆ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರೂ ಕೂಡ ನಾನ್ ಡಾಮಿಸೈಲ್ ಸ್ಟೇಟಸ್ ಹೊಂದಿದ್ದು, ಭಾರತದಲ್ಲಿರುವ ತಮ್ಮ ಆದಾಯಕ್ಕೆ ಬ್ರಿಟನ್​ನಲ್ಲಿ ತೆರಿಗೆ ಕಟ್ಟುವುದರಿಂದ ವಿನಾಯಿತಿ ಪಡೆದಿದ್ದರು. ಈ ವಿಚಾರ ವಿವಾದಕ್ಕೂ ಕಾರಣವಾಗಿತ್ತು. ಅದು ಬೇರೆ ಸಂಗತಿ. ಈಗ ನಾನ್ ಡಾಮಿಸೈಲ್ ಸ್ಟೇಟಸ್ ಇಲ್ಲದೇ ಲಂಡನ್​ನಿಂದ ದುಬೈಗೆ ಶಿಫ್ಟ್ ಆಗಿರುವ ಕೋಟ್ಯಾಧಿಪತಿಯು ಲಂಡನ್​ನಲ್ಲಿರುವ ತಮ್ಮ ಈ ದುಬಾರಿ ಆಸ್ತಿಯನ್ನು ಮಾರುವ ಗಡಿಬಿಡಿಯಲ್ಲಿದ್ದಾರೆ.

ಪೆಂಟ್​ಹೌಸ್ ಎಂದರೇನು? ಲಂಡನ್​ನಲ್ಲಿರುವ ಈ ಲಕ್ಷುರಿ ಮನೆ ಯಾಕೆ ಮಾರಾಟವಾಗಿಲ್ಲ?

ಪೆಂಟ್​ಹೌಸ್ ಎಂದರೆ ಒಂದು ಐಷಾರಾಮಿ ಕಟ್ಟಡದ ಟಾಪ್ ಫ್ಲೋರ್​ನಲ್ಲಿ ನಿರ್ಮಿಸಲಾಗಿರುವ ಐಷಾರಾಮಿ ಫ್ಲಾಟ್ ಎನ್ನಬಹುದು. ಸರೋವರ, ಪಾರ್ಕ್, ಬೀಚ್ ಇತ್ಯಾದಿಗೆ ಮುಖ ಮಾಡಿರುವ ಅಪಾರ್ಟ್ಮೆಂಟ್​ಗಳಿಗೆ ಬೇಡಿಕೆ ಹೇಗೆ ಹೆಚ್ಚು ಇರುತ್ತದೋ ಹಾಗೇ ಪೆಂಟ್​ಹೌಸ್​ಗಳಿಗೂ ಒಳ್ಳೆಯ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಾಟ್ ರಿಯಲ್ ಎಷ್ಟೇಟ್ ಜಾಗವಾದ ಬೆಲ್​ಗ್ರೇವಿಯಾದಲ್ಲಿರುವ ತಮ್ಮ ಪೆಂಟ್​ಹೌಸ್​ನ ಸೆಲಿಂಗ್ ಪ್ರೈಸ್ ಆಗಿ 28 ಮಿಲಿಯನ್ ಪೌಂಡ್ (ಸುಮಾರು 285 ಕೋಟಿ ರೂ) ಇಟ್ಟಿದ್ದರು ಈ ಸಾಹುಕಾರ. ಆದರೆ, ಈ ಬೆಲೆಗೆ ಪೆಂಟ್​ಹೌಸ್ ಕೊಳ್ಳುವವರೇ ಲಂಡನ್​ನಲ್ಲಿ ಯಾರೂ ಇಲ್ಲ.

ಇದನ್ನೂ ಓದಿCashKaro: ಹನಿಮೂನ್ ವೇಳೆ ಬಂದ ಐಡಿಯಾ: ಸ್ವಾತಿ ಭಾರ್ಗವರ ಕ್ಯಾಷ್​ಕರೋ ಕಂಪನಿಗೆ ಇವತ್ತು ಭರ್ಜರಿ ಆದಾಯ

ಲಂಡನ್​ಗೆ ಬಂದಿರುವ ಈ ದುಬೈ ನಿವಾಸಿ ಒಮ್ಮೆ ತಮ್ಮ ಏಜೆಂಟ್ ಬಳಿ ಈ ಫ್ಲಾಟ್ ಮಾರಾಟವಾಗದೇ ಇರುವುದಕ್ಕೆ ಕಾರಣ ಕೇಳಿದ್ದಾರೆ. ‘ನಾವು ದುಬೈನಲ್ಲಿಲ್ಲ. ಇದು ಲಂಡನ್. ಇಲ್ಲಿ ಈ ಫ್ಲಾಟ್​ನ ಮಾರಾಟ ದರ ತೀರಾ ಜಾಸ್ತಿ ಆಯಿತು. ಇದಕ್ಕೆ 20 ಮಿಲಿಯನ್ ಪೌಂಡ್ ಹಣವೇ ಹೆಚ್ಚಾಗುತ್ತದೆ. ಇಷ್ಟು ಬೆಲೆಗೆ ಇಳಿಸಿದರೆ ಯಾರಾದರೂ ಕೊಳ್ಳಲು ಬರಬಹುದು’ ಎಂದು ಈ ಏಜೆಂಟ್ ಸಲಹೆ ನೀಡಿದ್ದಾರೆ.

ಏಜೆಂಟ್ ಆಡಿದ ಮಾತು ಈ ದುಬೈ ನಿವಾಸಿಗೆ ಸರಿ ಎನಿಸಿದೆ. ಸರಿ ನೋಡೋಣ ಎಂದು ಪರೋಕ್ಷವಾಗಿ ಬೆಲೆ ಇಳಿಕೆಗೆ ಸಮ್ಮತಿಸಿದ್ದಾರೆ. ಈ ಹೊಸ ಬೆಲೆಗಾದರೂ ಬೆಲ್​ಗ್ರೇವಿಯಾದಲ್ಲಿರುವ ಪೆಂಟ್​ಹೌಸ್ ಮಾರಾಟ ಕಾಣುಬಹುದು ಎಂಬ ಆಸೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಇದ್ದಾರೆ. ದುಬೈನಲ್ಲಿ ನಮ್ಮ ಹಣಕ್ಕೆ ಹಲವು ಆಯ್ಕೆಗಳು ಸಿಗುತ್ತವೆ. ತಾವು ತೆರಿಗೆ ಕಟ್ಟದ ಲಂಡನ್​ನಲ್ಲಿ ಅದೇ ಲಕ್ಷುರಿಯನ್ನು ಅಪೇಕ್ಷಿಸುವುದು ಎಷ್ಟು ಸರಿ ಎಂದೂ ಈ ಏಜೆಂಟ್ ಪರೋಕ್ಷವಾಗಿ ದುಬೈ ನಿವಾಸಿಗೆ ಕುಟುಕಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Sun, 9 April 23

ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ