CashKaro: ಹನಿಮೂನ್ ವೇಳೆ ಬಂದ ಐಡಿಯಾ: ಸ್ವಾತಿ ಭಾರ್ಗವರ ಕ್ಯಾಷ್​ಕರೋ ಕಂಪನಿಗೆ ಇವತ್ತು ಭರ್ಜರಿ ಆದಾಯ

India's No. 1 Cashback Company: 2022ರಲ್ಲಿ 225 ಕೋಟಿ ರೂ ಆದಾಯ ಗಳಿಸಿದ ಕ್ಯಾಷ್​ಕರೋ ಸಂಸ್ಥೆಯ ವ್ಯವಹಾರಕ್ಕೆ ಐಡಿಯಾ ಹುಡುಕಿದ್ದೇ ಸ್ವಾತಿ ಭಾರ್ಗವ. ಇದರ ಹಿಂದೆ ತುಸು ಕುತೂಹಲ ಮೂಡಿಸುವ ಹನಿಮೂನ್ ಘಟನೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

CashKaro: ಹನಿಮೂನ್ ವೇಳೆ ಬಂದ ಐಡಿಯಾ: ಸ್ವಾತಿ ಭಾರ್ಗವರ ಕ್ಯಾಷ್​ಕರೋ ಕಂಪನಿಗೆ ಇವತ್ತು ಭರ್ಜರಿ ಆದಾಯ
ಸ್ವಾತಿ ಭಾರ್ಗವ
Follow us
|

Updated on:Apr 09, 2023 | 4:55 PM

ಇವತ್ತು ಯಾರಿಗೆ ತಾನೆ ಕ್ಯಾಷ್​ಬ್ಯಾಕ್ (Cashback) ಎಂದ್ರೆ ಇಷ್ಟವಾಗಲ್ಲ? ಫೋನ್ ಪೇ, ಗೂಗಲ್ ಪೇ ಇತ್ಯಾದಿ ವ್ಯಾಲಟ್ ಆ್ಯಪ್​ಗಳು ಹೆಚ್ಚೆಚ್ಚು ಜನರ ಬಳಕೆಗೆ ಹೋಗಲು ಸ್ವಲ್ಪಮಟ್ಟಿಗಾದರೂ ಕಾರಣವಾಗಿದ್ದು ಈ ಕ್ಯಾಷ್​ಬ್ಯಾಕ್​ಗಳೇ. ಆನ್​ಲೈನ್​ನಲ್ಲಿ ನಾವು ಮಾಡಿದ ಪ್ರತೀ ವಹಿವಾಟಿಗೂ ಏನಾದರೂ ಕ್ಯಾಷ್​ಬ್ಯಾಕ್ ಅಥವಾ ಗಿಫ್ಟ್ ಕೂಪನ್ ಸಿಗುತ್ತಾ ಎಂದು ಕಾತರದಿಂದ ನೋಡುವವರು ಬಹಳ ಮಂದಿ. ಕ್ಯಾಷ್​ಕರೋ (CashKaro) ಎಂಬ ವೆಬ್​ಸೈಟ್ ಭಾರತದಲ್ಲಿ ಇದೇ ಕಾರಣಕ್ಕೆ ಇದೀಗ ಟ್ರೆಂಡಿಂಗ್​ನಲ್ಲಿದೆ. ಈ ಕಂಪನಿಯ ಸಹ ಸಂಸ್ಥಾಪಕಿ ಸ್ವಾತಿ ಭಾರ್ಗವ. ತಮ್ಮ ಪತಿ ಜೊತೆ ಸೇರಿ ಸ್ವಾತಿ ಭಾರ್ಗವ (Swati Bhargava) ಸ್ಥಾಪಿಸಿದ ಕ್ಯಾಷ್​ಕರೋ ಈಗ ಭಾರತದ ಅತಿದೊಡ್ಡ ಕ್ಯಾಷ್​ಬ್ಯಾಕ್ ಮತ್ತು ಕೂಪನ್ ವೆಬ್​ಸೈಟ್ ಎಂದು ಹೆಸರು ಮಾಡಿದೆ. ಕ್ಯಾಷ್​ಕರೋ ಸಂಸ್ಥೆಯ ವ್ಯವಹಾರಕ್ಕೆ ಐಡಿಯಾ ಹುಡುಕಿದ್ದೇ ಸ್ವಾತಿ ಭಾರ್ಗವ. ಇದರ ಹಿಂದೆ ತುಸು ಕುತೂಹಲ ಮೂಡಿಸುವ ಹನಿಮೂನ್ ಘಟನೆ ಇದೆ ಎಂದರೆ ಅಚ್ಚರಿ ಅಗಬಹುದು.

ಕ್ಯಾಷ್​ಬ್ಯಾಕ್ ಸ್ಥಾಪನೆಗೆ ಕಾರಣವಾಯಿತು ಸ್ವಾತಿ ಭಾರ್ಗವರ ಹನಿಮೂನ್ ಘಟನೆ

2009ರಲ್ಲಿ ಸ್ವಾತಿ ಅವರು ರೋಹನ್ ಭಾರ್ಗವರನ್ನು ವಿವಾಹವಾದರು. ಆಗ ಸ್ವಾತಿ ಭಾರ್ಗವರೇ ಖುದ್ದಾಗಿ ತಮ್ಮ ಹನಿಮೂನ್ ಟಿಕೆಟ್​ಗಳನ್ನು ಬುಕ್ ಮಾಡಲು ನಿರ್ಧರಿಸಿದರು. ಕ್ಯಾಷ್​ಬ್ಯಾಕ್ ವೆಬ್​ಸೈಟ್​ವೊಂದರ ಮೂಲಕ ಹನಿಮೂನ್ ಟಿಕೆಟ್ ಬುಕ್ ಮಾಡಿದರು. ಸಾಕಷ್ಟು ಕ್ಯಾಷ್​ಬ್ಯಾಕ್ ಕೂಡ ಸಿಕ್ಕಿತು. ಹನಿಮೂನ್​ಗೆ ಹೆಚ್ಚು ಖರ್ಚು ಆಯಿತು ಎಂದೇ ಸ್ವಾತಿ ಹಾಗೂ ರೋಹನ್ ಭಾರ್ಗವ ದಂಪತಿಗೆ ಅನಿಸಲಿಲ್ಲ. ಕ್ಯಾಷ್​ಬ್ಯಾಕ್ ಎಷ್ಟು ಪ್ರಯೋಜನಕಾರಿ ಎಂಬ ಸಂಗತಿ ಸ್ವಾತಿ ಭಾರ್ಗವರಿಗೆ ಅಂದು ಅರಿವಾಯಿತು. ಕ್ಯಾಷ್​​ಬ್ಯಾಕ್​ಗೆ ಒಂದು ಒಳ್ಳೆಯ ಪ್ಲಾಟ್​ಫಾರ್ಮ್ ರೂಪಿಸಲು ಆ ಘಟನೆ ಸ್ವಾತಿ ಭಾರ್ಗವ ಮತ್ತವರ ಪತಿಯನ್ನು ಪ್ರೇರೇಪಿಸಿತಂತೆ.

ಇದನ್ನೂ ಓದಿApple In Bengaluru: ಬೆಂಗಳೂರಿನಲ್ಲಿ ಕಚೇರಿ ತೆರೆದ ಆ್ಯಪಲ್; ಮುಂಬೈನ ಆ್ಯಪಲ್ ಸ್ಟೋರ್​ಗಿಂತ 6 ಪಟ್ಟು ಹೆಚ್ಚು ಬಾಡಿಗೆ

ಬ್ರಿಟನ್​ನಲ್ಲಿ ಕ್ಯಾಷ್​ಕರೋ ಸ್ಥಾಪನೆ, ಬಳಿಕ ಭಾರತಕ್ಕೆ ಆಗಮನ

ಸ್ವಾತಿ ಮತ್ತು ರೋಹನ್ ಭಾರ್ಗವ ದಂಪತಿ ತಮ್ಮ ಹನಿಮೂನ್ ಘಟನೆ ವೇಳೆ ಸಿಕ್ಕ ಕ್ಯಾಷ್​ಬ್ಯಾಕ್ ಐಡಿಯಾ ಇಟ್ಟುಕೊಂಡು 2013ರಲ್ಲಿ ಕ್ಯಾಷ್​ಬ್ಯಾಕ್ ಪ್ಲಾಟ್​ಫಾರ್ಮ್ ರೂಪಿಸಿದರು. ಅದು ಯಶಸ್ವಿಯೂ ಆಯಿತು. ಸ್ವಲ್ಪವೂ ತಡ ಮಾಡದೇ ಭಾರತೀಯ ಮಾರುಕಟ್ಟೆಗೂ ಕ್ಯಾಷ್​ಕರೋ ಸೇವೆ ತಂದರು. ಆಗ ಅವರ ಬಳಿ ಇದ್ದ ನೌಕರರ ಸಂಖ್ಯೆ ಕೇವಲ 17 ಮಾತ್ರ. ವ್ಯವಹಾರವನ್ನು ಅಗ್ರೆಸಿವ್ ಆಗಿ ಮಾಡಲು ಹೆಚ್ಚು ಬಂಡವಾಳ ಬೇಕಾಗಿತ್ತು. ತಮ್ಮ ಕಾಲೇಜು ಮಿತ್ರರು ಮತ್ತು ಸಹಪಾಠಿಗಳನ್ನು ಸಂಪರ್ಕಿಸಿ ನೆರವು ಯಾಚಿಸಿದರು. ಕೇವಲ ಎರಡು ದಿನದಲ್ಲಿ ತಾವು ನಿರೀಕ್ಷಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಬಂಡವಾಳ ಭಾರ್ಗವ ದಂಪತಿಗೆ ಹರಿದುಬಂತು.

2015ರಲ್ಲಿ ಕಲಾರಿ ಕ್ಯಾಪಿಟಲ್ ಸಂಸ್ಥೆಯಿಂದ 25 ಕೋಟಿ ರೂ ಸಾಲ ಸಿಕ್ಕಿತು. ಮರು ವರ್ಷ, ಅಂದರೆ 2016ರಲ್ಲಿ ರತನ್ ಟಾಟಾ ಕೂಡ ಧನ ಸಹಾಯ ನೀಡಿದರು.

ಕ್ಯಾಷ್​ಕರೋದಿಂದ ಕ್ಯಾಷ್​ಬ್ಯಾಕ್ ವ್ಯವಹಾರ ಹೇಗೆ? ಆದಾಯ ಹೇಗೆ?

ಕ್ಯಾಷ್​ಕರೋ ಸಂಸ್ಥೆ ಭಾರತದಲ್ಲಿ 1,500 ಆನ್​ಲೈನ್ ರೀಟೇಲ್ ವ್ಯಾಪಾರಿಗಳೊಂದಿಗೆ ಸಹಕಾರ ಒಪ್ಪಂದ ಹೊಂದಿದೆ. ಕ್ಯಾಷ್​ಕರೋ ವೆಬ್​ಸೈಟ್​ನಲ್ಲಿ ನೀಡಲಾಗುವ ಕ್ಯಾಷ್​ಬ್ಯಾಕ್ ಕೂಪನ್ ಬಳಸಿ ಗ್ರಾಹಕರು ಈ ರೀಟೇಲ್ ಸ್ಟೋರ್​ಗಳಲ್ಲಿ ಬಟ್ಟೆ, ಯಂತ್ರೋಪಕರಣ, ಔಷಧ, ದಿನಸಿ ಸಾಮಾನು ಮತ್ತಿತರ ವಸ್ತುಗಳನ್ನು ಖರೀದಿಸಿದಾಗ ಕ್ಯಾಷ್​ಕರೋ ವತಿಯಿಂದ ಹೆಚ್ಚುವರಿ ಕ್ಯಾಷ್​ಬ್ಯಾಕ್ ಸಿಗುತ್ತದೆ. ಇಂಥ ಪ್ರತಿಯೊಂದು ವಹಿವಾಟಿಗೂ ಆ ರೀಟೇಲ್ ಸ್ಟೋರ್​ಗಳು ಕ್ಯಾಷ್​ಕರೋಗೆ ಇಂತಿಷ್ಟು ಕಮಿಷನ್ ಕೊಡುತ್ತವೆ. ಇದೇ ಕ್ಯಾಷ್​ಕರೋಗೆ ಆದಾಯ ಮೂಲವಾಗಿದೆ. 2022ರಲ್ಲಿ ಕ್ಯಾಷ್​ಕರೋ ಬಹಳ ವೇಗವಾಗಿ ಬೆಳೆಯಿತು. 2021ರಲ್ಲಿ 100 ಕೋಟಿ ರೂ ಇದ್ದ ಅದರ ಆದಾಯ 2022ರಲ್ಲಿ 225 ಕೋಟಿಗೆ ಏರಿದೆ.

ಇದನ್ನೂ ಓದಿMango EMI: ಈಗ ತಿನ್ನಿ, ಆಮೇಲೆ ದುಡ್ಡು ಕೊಡಿ; ಮಾವಿನ ಹಣ್ಣಿಗೂ ಬಂತು ಇಎಂಐ

ಸ್ವಾತಿ ಭಾರ್ಗವ ಸ್ಕೂಲ್​ನಲ್ಲಿ ಟಾಪರ್, ಈಗ ಫಾರ್ಚೂನ್ ಪಟ್ಟಿಯಲ್ಲಿ ಟಾಪ್ ಆಂಟ್ರಪ್ರೆನೂರ್

ಹರ್ಯಾಣದ ಅಂಬಾಲ ನಗರ ಮೂಲದ ಸ್ವಾತಿ ಭಾರ್ಗವ ಬಾಲ್ಯದಲ್ಲಿ ತಮ್ಮ ಶಾಲೆಗೆ ಟಾಪ್ ಆಗುತ್ತಾ ಬಂದಿದ್ದರು. 11 ಮತ್ತು 12ನೇ ತರಗತಿಯನ್ನು ಸಿಂಗಾಪುರದಲ್ಲಿ ಓದಿ, ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಪದವಿ ಮಾಡಿ, ಆ ನಂತರ ಅರ್ಥಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.

ಓದಿನಲ್ಲಿ ಬುದ್ಧಿವಂತೆಯಾದ ಸ್ವಾತಿ ಭಾರ್ಗವ ವ್ಯವಹಾರದಲ್ಲೂ ತಾನು ಚುರುಕು ಎಂದು ತೋರಿಸಿಕೊಟ್ಟಿದ್ದಾರೆ. ಇವರ ನಿವ್ವಳ ಆಸ್ತಿ ಮೌಲ್ಯ 2 ಮಿಲಿಯನ್ ಡಾಲರ್. ಅಂದರೆ ಸುಮಾರು 16 ಕೋಟಿ ರೂ ಆಸ್ತಿಯ ಒಡತಿ. ಭಾರತದ 40 ವರ್ಷದೊಳಗಿನವರ ಫಾರ್ಚೂನ್ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಅಗ್ರಮಾನ್ಯ ಯುವ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲೂ ಅವರು ನಾಮಿನೇಟ್ ಆಗಿದ್ದರು.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Sun, 9 April 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ