AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Halal Certification: ಹೊಸ ಹಲಾಲ್ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ; ಏನಿದು ನೂತನ ನಿಯಮ?

Central Govt New Halal Guidelines: ವಿದೇಶಗಳಿಗೆ ರಫ್ತಾಗುವ ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಶನ್ ಅನ್ನು ಸರ್ಕಾರ ಸೂಚಿತ ಕೇಂದ್ರಗಳಿಂದಲೇ ಪಡೆಯಬೇಕಾಗುತ್ತದೆ. ಸರ್ಕಾರ ಇತ್ತೀಚೆಗೆ ಹೊಸ ನಿಯಮಾವಳಿಗಳಿರುವ ಅಧಿಸೂಚನೆ ಹೊರಡಿಸಿದೆ.

Halal Certification: ಹೊಸ ಹಲಾಲ್ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ; ಏನಿದು ನೂತನ ನಿಯಮ?
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 09, 2023 | 7:19 PM

Share

ಮುಖ್ಯಾಂಶಗಳು

  • ವಿದೇಶಗಳಿಗೆ ಹಲಾಲ್ ಸರ್ಟಿಫಿಕೇಟ್ ಪಡೆದು ರಫ್ತಾಗುವ ಮಾಂಸ ಉತ್ಪನ್ನಗಳ ವಿಚಾರದಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
  • ಹಲಾಲ್ ಸರ್ಟಿಫಿಕೇಟ್ ನೀಡುವ ಸಂಸ್ಥೆಗಳು ಸರ್ಕಾರದಿಂದ ಅಕ್ರೆಡಿಶನ್ ಪಡೆಯಬೇಕು. ಇಂಥ ಸಂಸ್ಥೆಗಳು ಮಾತ್ರವೇ ಹಲಾಲ್ ಪ್ರಮಾಣಪತ್ರ ನೀಡಬಹುದು.
  • ಎನ್​ಎಬಿಸಿಬಿ ಸರ್ಕಾರದ ಪರವಾಗಿ ಹಲಾಲ್ ಸರ್ಟಿಕೇಶನ್ ಕಂಪನಿಗಳಿಗೆ ಅಕ್ರೆಡಿಶನ್ ಕೊಡುತ್ತದೆ.

ನವದೆಹಲಿ: ಹಲವು ವಿದೇಶಗಳಲ್ಲಿ ಹಲಾಲ್ ಉತ್ಪನ್ನಗಳಿಗೆ (Halal Products) ಬೇಡಿಕೆ ಇದೆ. ಭಾರತದಿಂದ ಈ ದೇಶಗಳಿಗೆ ರಫ್ತಾಗುವ ಉತ್ಪನ್ನಗಳು ಬಹುತೇಕ ಹಲಾಲ್ ಪ್ರಮಾಣಪತ್ರ (Halal Certification) ಹೊಂದಿರುತ್ತವೆ. ಆದರೆ, ಹಲಾಲ್ ಪ್ರಮಾಣಪತ್ರದಲ್ಲಿ ಭಾರತದಲ್ಲಿ ನಿರ್ದಿಷ್ಟ ನಿಯಮಾವಳಿ ರಚನೆಯಾಗಿರಲಿಲ್ಲ. ಈಗ ಕೇಂದ್ರ ಸರ್ಕಾರ ಈ ವಿಚಾರದ ಬಗ್ಗೆ ಗಮನ ಹರಿಸಿದೆ. ವಿದೇಶಗಳಿಗೆ ರಫ್ತಾಗುವ ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಶನ್ ಅನ್ನು ಸರ್ಕಾರ ಸೂಚಿತ ಕೇಂದ್ರಗಳಿಂದಲೇ ಪಡೆಯಬೇಕಾಗುತ್ತದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ (Quality Council of India) ಮಂಡಳಿಯ ಅಕ್ರೆಡಿಶನ್ ಪಡೆದ ಸಂಸ್ಥೆಯಿಂದ ಪ್ರಮಾಣಪತ್ರ ಹೊಂದಿರುವ ಪ್ಯಾಕೇಜಿಂಗ್ ಕೇಂದ್ರಗಳಲ್ಲಿ ಮಾಂಸ ಉತ್ಪನ್ನಗಳನ್ನು ತಯಾರಿಸಿ ಪ್ರೋಸಸಿಂಗ್ ನಡೆಸಿ ಪ್ಯಾಕ್ ಆಗಿರಬೇಕು. ಆಗಲೇ ಮಾತ್ರ ಹಲಾಲ್ ಸರ್ಟಿಫಿಕೇಶನ್ ಸಿಗುತ್ತದೆ ಎಂದು ಸರ್ಕಾರ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಹೊಸ ನಿಯಮ ಹಲಾಲ್ ಸರ್ಟಿಕೇಶನ್ ಪಡೆಯುವ ಆಹಾರ ಉತ್ಪನ್ನಗಳಿಗೆ ಮಾತ್ರ. ಇತರ ಉತ್ಪನ್ನಗಳ ರಫ್ತು ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು, ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಶನ್ ಬೇಕೆಂಬ ನಿಯಮಗಳು ಇಲ್ಲದಿರವ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುವಾಗ ಆ ದೇಶದ ಅವಶ್ಯಕತೆಗಳಿಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಕಳುಹಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: CashKaro: ಹನಿಮೂನ್ ವೇಳೆ ಬಂದ ಐಡಿಯಾ: ಸ್ವಾತಿ ಭಾರ್ಗವರ ಕ್ಯಾಷ್​ಕರೋ ಕಂಪನಿಗೆ ಇವತ್ತು ಭರ್ಜರಿ ಆದಾಯ

ಹಲಾಲ್ ಸರ್ಟಿಫಿಕೇಟ್ ಕೊಡುವ ಸಂಸ್ಥೆಗಳ ಅಕ್ರೆಡಿಶನ್​ಗೆ 6 ತಿಂಗಳ ಕಾಲಾವಕಾಶ

ಈಗ ಹಲವು ಸಂಸ್ಥೆಗಳು ಹಲಾಲ್ ಸರ್ಟಿಫಿಕೇಶನ್ ನೀಡುತ್ತವೆ. ಇನ್ಮುಂದೆ ಈ ಸಂಸ್ಥೆಗಳು ಎನ್​ಎಬಿಸಿಬಿ (ನ್ಯಾಷನಲ್ ಅಕ್ರೆಡಿಶನ್ ಬೋರ್ಡ್) ಯಿಂದ 6 ತಿಂಗಳ ಒಳಗಾಗಿ ಅಕ್ರೆಡಿಶನ್ ಪಡೆಯಬೇಕು. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಐ–ಸಿಎಎಸ್ (ಇಂಡಿಯನ್ ಕನ್ಫಾರ್ಮಿಟಿ ಅಸೆಸ್ಮೆಂಟ್ ಸ್ಕೀಮ್) ಅಡಿಯಲ್ಲಿ ಈ ಹಲಾಲ್ ಸಂಸ್ಥೆಗಳು ಹಲಾಲ್ ಉತ್ಪಾದನಾ ಕೇಂದ್ರಗಳಿಗೆ ಪರವಾನಿಗೆ ನೀಡುತ್ತವೆ. ಇಂಥ ಕೇಂದ್ರಗಳಲ್ಲಿ ತಯಾರಾಗುವ ಉತ್ಪನ್ನಗಳಿಗೆ ಮಾತ್ರ ಹಲಾಲ್ ಸರ್ಟಿಫಿಕೇಶನ್ ಸಿಗುತ್ತದೆ ಎಂಬುದು ನೋಟಿಫಿಕೇಶನ್​ನಿಂದ ತಿಳಿದುಬರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ