Mumbai: ಒಂದು ನಿಮಿಷ, ಹತ್ತು ಸೆಕೆಂಡಿನ ಈ ವಿಡಿಯೋದಲ್ಲಿ ಪ್ಲ್ಯಾಟ್ಫಾರ್ಮ್, ಮೆಟ್ಟಿಲುಗಳು, ನಿಲ್ದಾಣದ ಆವರಣ ಮತ್ತದನ್ನು ದಾಟಿಯೂ ಜನ ಹೀಗೆ ಸರದಿಯಲ್ಲಿ ನಿಂತಿದ್ದಾರೆಂದರೆ ಯೋಚಿಸಿ. ಇವರಿಗೆಲ್ಲ ಅದೆಷ್ಟು ತಾಳ್ಮೆಯನ್ನು ಮುಂಬೈ ಎಂಬ ಮಹಾನಗರಿ ಧಾರೆ ಎರೆದಿರಬಹುದು ಎಂದು. ರೈಲು ಪ್ರಯಾಣ (Train Journey) ಮುಗಿಸಿ ತಮ್ಮ ಮನೆಗಳಿಗೆ ಹೋಗಲು ಆಟೋಗಾಗಿ ಕಾಯುತ್ತ ನಿಂತಿದ್ದಾರೆ. ಇದೀಗ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಿಗಳು ಅಚ್ಚರಿಯಿಂದ ನೋಡುತ್ತ ಪ್ರತಿಕ್ರಿಯಿಸುತ್ತಿದ್ದಾರೆ. ಮುಂಬೈನ ದೊಂಬಿವಿಲಿಯಲ್ಲಿ ನಿತ್ಯದ ಸಂಜೆಗಳು ಹೀಗೇ ಇರುತ್ತವೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. #MumbaiSpirit ನಡಿ ಇದೀಗ ವೈರಲ್ ಆಗುತ್ತಿದೆ.
The Auto Rickshaw queue in Dombivli during evening peak hours showcases people’s remarkable patience. #MumbaiRains #MumbaiSpirit pic.twitter.com/i7Pgv21peZ
ಇದನ್ನೂ ಓದಿ— Godman Chikna (@Madan_Chikna) June 29, 2023
ಈ ವಿಡಿಯೋ ಅನ್ನು ಜೂ. 29 ರಂದು ಪೋಸ್ಟ್ ಮಾಡಲಾಗಿದೆ. ಇದನ್ನು ವೀಕ್ಷಿಸಿದವರ ಸಂಖ್ಯೆ 1 ಮಿಲಿಯನ್ ದಾಟಿದೆ. ಮುಂಬೈಕರ್ಗಳ ನಿಜವಾದ ಆತ್ಮ ಅಡಗಿರುವುದು ಇಲ್ಲಿಯೇ ಎಂದು ಹೇಳುತ್ತಿದ್ಧಾರೆ ಅನೇಕರು. ಈ ಸರದಿಯಲ್ಲಿರುವ ಜನರನ್ನು ಎಣಿಸಿ ನೋಡಿದೆ, 235 ಜನರು ಇಲ್ಲಿ ನಿಂತಿದ್ಧಾರೆ ಎಂದು ಒಬ್ಬರು ಹೇಳಿದರು. ಇವರೆಲ್ಲರ ಬಳಿ ಮೊಬೈಲ್ ಇರದಿದ್ದರೆ ಏನು ಮಾಡುತ್ತಿದ್ದರು? ಎಂದು ಕೇಳಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ”ಜಪಾನಿನ ಸುಶಿ” ಅನ್ನ ಬೇಳೆಯನ್ನು ದಯವಿಟ್ಟು ಅವಮಾನಿಸಬೇಡಿ ಎನ್ನುತ್ತಿರುವ ನೆಟ್ಟಿಗರು
ಅಯ್ಯೋ ಇವರೆಲ್ಲರೂ ಇಷ್ಟು ಹೊತ್ತು ನಿಂತುಕೊಂಡು ಎಷ್ಟೊಂದು ಸಮಯ ಕಳೆಯುತ್ತಿದ್ದಾರಲ್ಲ, ಬದಲಿಗೆ ನಡೆದುಕೊಂಡೇ ಹೋಗಬಹುದೇನೋ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿ ನನಗೆ ದುಃಖವೆನ್ನಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಇದು ಮುಂಬೈ ಸ್ಪಿರಿಟ್ ಅಲ್ಲ. ದುಃಖಕರವಾದ ಜೀವನ. ಒಂದು ವರ್ಷ ಈ ಮಹಾನಗರದಲ್ಲಿದ್ದೆ ಎಂದಿದ್ದಾರೆ ಒಬ್ಬರು. ಸ್ಪಿರಿಟ್ ಎನ್ನುವುದನ್ನು ಮುಂಬೈ ನಿಮಗರಿವಿಲ್ಲದೇ ಕಲಿಸುತ್ತದೆ, ಇಲ್ಲವಾದಲ್ಲಿ ಅಲ್ಲಿ ಬದುಕುವುದು ಬಲು ದುಸ್ತರ ಎಂದಿದ್ದಾರೆ ಕೆಲವರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:49 am, Tue, 4 July 23