AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre News: ಮುಕ್ಕಣ್ಣು, ಜಡೆ ಬಾಲದೊಂದಿಗೆ ಜನಿಸಿದ ಕರು; ಶಿವನ ಅವತಾರವೆಂದು ಪೂಜಿಸುತ್ತಿರುವ ಜನರು

ಹಸುವೊಂದು ಮೂರು ಕಣ್ಣುಗಳನ್ನು ಹಾಗೂ ಮಚ್ಚೆಯ ಕೂದಲಿನ ರಾಶಿಯುಳ್ಳ ಬಾಲವನ್ನು ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಈ ಕರು ಶಿವನ ಅವತಾರವೆಂದು ಜನರು ಪೂಜಿಸುತ್ತಿದ್ದಾರೆ.

Bizarre News: ಮುಕ್ಕಣ್ಣು, ಜಡೆ ಬಾಲದೊಂದಿಗೆ ಜನಿಸಿದ ಕರು; ಶಿವನ ಅವತಾರವೆಂದು ಪೂಜಿಸುತ್ತಿರುವ ಜನರು
ಮೂರು ಕಣ್ಣುಗಳೊಂದಿಗೆ ಜನಿಸಿದ ಕರು
Rakesh Nayak Manchi
|

Updated on:Aug 21, 2022 | 11:46 AM

Share

ಅನೇಕ ಅಪರೂಪದ ಹಾಗೂ ವಿಲಕ್ಷಣ ಜನನಗಳಿಗೆ ಜಗತ್ತು ಸಾಕ್ಷಿಯಾಗಿದೆ. ಇದೀಗ ಛತ್ತೀಸ್‌ಗಢದ ರಾಜನಂದಗಾಂವ್‌ನ ಹೇಮಂತ್ ಚಂದೇಲ್ ಅವರ ಮನೆಯಲ್ಲಿ ಹಸುವೊಂದು ಮೂರು ಕಣ್ಣುಗಳನ್ನು ಹೊಂದಿರುವ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಈ ವಿಚಾರ ಹಬ್ಬುತ್ತಿದ್ದಂತೆ ಕರುವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇನ್ನೂ ಕೆಲವರು ಈ ಕರುವನ್ನು ಶಿವನ ಅವತಾರವೆಂದು ಪೂಜೆಯನ್ನೂ ಮಾಡಿದ್ದಾರೆ. ಈ ಕರು ಮೂರು ಕಣ್ಣುಗಳ ಜೊತೆಗೆ ನಾಲ್ಕು ಮೂಗಿನ ಹೊಳ್ಳೆಗಳನ್ನು ಕೂಡ ಹೊಂದಿದೆ.

“ಕರು ತನ್ನ ಹಣೆಯ ಮಧ್ಯದಲ್ಲಿ ಹೆಚ್ಚುವರಿ ಕಣ್ಣು ಮತ್ತು ಮೂಗಿನ ಹೊಳ್ಳೆಯಲ್ಲಿ ನಾಲ್ಕು ರಂಧ್ರಗಳನ್ನು ಹೊಂದಿದೆ. ಇದರ ಬಾಲವು ‘ಜಟಾ’ (ಮಚ್ಚೆಯ ಕೂದಲಿನ ರಾಶಿ) ನಂತೆ ಕಾಣುತ್ತದೆ ಮತ್ತು ಅದರ ನಾಲಿಗೆ ಸಾಮಾನ್ಯ ಕರುಗಳಿಗಿಂತ ಉದ್ದವಾಗಿದೆ” ಎಂದು ಹೇಮಂತ್ ಚಾಂದೇಲ್ ಅವರು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಕರು ಹುಟ್ಟಿದಾಗಿನಿಂದಲೂ ರೈತ ಚಂದೇಲ್ ಮನೆಯಲ್ಲಿ ತೆಂಗಿನಕಾಯಿ, ಹೂವಿನ ನೈವೇದ್ಯ ಸಮರ್ಪಿಸುತ್ತಿದ್ದಾರೆ. ಆದಾಗ್ಯೂ, ಪಶುವೈದ್ಯ ತಜ್ಞರು, ಅಂತಹ ನಿದರ್ಶನಗಳನ್ನು ಪವಾಡಗಳಂತೆ ನೋಡಬಾರದು. ಬದಲಿಗೆ ವೈದ್ಯಕೀಯ ವೈಪರೀತ್ಯಗಳಾಗಿ ಪರಿಗಣಿಸಬೇಕು ಎಂದು ಹೇಳುತ್ತಾರೆ. ಅಂತಹ ವಿರೂಪಗಳೊಂದಿಗೆ ಜನಿಸಿದ ಹೆಚ್ಚಿನ ಪ್ರಾಣಿಗಳಂತೆಯೇ ಕರುವಿನ ಆರೋಗ್ಯವು ಶೀಘ್ರದಲ್ಲೇ ಹದಗೆಡಬಹುದು ಎಂದು ತಿಳಿಸಿದ್ದಾರೆ.

ಸುದ್ದಿ ಸಂಸ್ಥೆ ಎಎನ್​ಐ ಜೊತೆ ಮಾತನಾಡಿದ ಜಾನುವಾರು ಇಲಾಖೆಯ ಡಾ. ತರುಣ್ ರಾಮ್ಟೆಕೆ, “ಇದು ಹಾರ್ಮೋನ್ ಅಸ್ವಸ್ಥತೆಯ ಕಾರಣದಿಂದ ಇಂತಹ ಕರುವಿನ ಜನನವಾಗಿದೆ. ಅಂತಹ ಸಂದರ್ಭಗಳಲ್ಲಿ ಪ್ರಾಣಿ ದೀರ್ಘಕಾಲ ಬದುಕುವುದಿಲ್ಲ. ಕೆಲವು ಎರಡು ವರ್ಷ ಅಥವಾ ಆರು ತಿಂಗಳು ಬದುಕಿದರೆ, ಇನ್ನೂ ಕೆಲವು ಕೇವಲ 10-15 ದಿನಗಳವರೆಗೆ ಬದುಕುತ್ತವೆ ಎಂದಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಕರು ಆರೋಗ್ಯವಾಗಿರುವುದು ಕಂಡುಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ. ಕರುವಿನ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಜನರು ವಿಚಿತ್ರ ಜನ್ಮದಿಂದ ಆಕರ್ಷಿತರಾಗಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:46 am, Sun, 21 August 22

ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ