Bizarre: ದೇವರ ಆಹಾರ ಎಂದು ಕೀಟಗಳ ಮೊಟ್ಟೆ ಸೇವನೆ ಮಾಡ್ತಾರೆ ಇಲ್ಲಿನ ಜನರು

| Updated By: Rakesh Nayak Manchi

Updated on: Oct 17, 2022 | 4:49 PM

ಪ್ರಪಂಚದಲ್ಲಿ ವಿವಿಧ ರೀತಿಯ ಆಹಾರ ಪದ್ಧತಿಗಳು ಇವೆ. ಈ ಪೈಕಿ ನೀವು ಎಂದಿಗೂ ಕೇಳಿರದ, ನೋಡಿರದ ಆಹಾರ ಪದ್ಧತಿ ಮೆಕ್ಸಿಕೋದಲ್ಲಿ ಜಾಲ್ತಿಯಲ್ಲಿದೆ. ಕೀಟಗಳ ಮೊಟ್ಟೆಗಳನ್ನು ದೇವರುಗಳ ಆಹಾರ ಎಂದು ಭಾವಿಸಿ ಇಲ್ಲಿನ ಜನರು ಅದನ್ನು ಸೇವನೆ ಮಾಡುತ್ತಾರೆ.

Bizarre: ದೇವರ ಆಹಾರ ಎಂದು ಕೀಟಗಳ ಮೊಟ್ಟೆ ಸೇವನೆ ಮಾಡ್ತಾರೆ ಇಲ್ಲಿನ ಜನರು
ಕೀಟಗಳ ಮೊಟ್ಟೆ ಸೇವನೆ ಮಾಡುವ ಮೆಕ್ಸಿಕೋ ನಗರದ ಜನರು
Follow us on

ಪ್ರಪಂಚದಲ್ಲಿ ಆಹಾರ ಪದ್ಧತಿಗಳಿಗೇನೂ ಕಡಿಮೆ ಇಲ್ಲ. ಆಯಾಯ ಪ್ರದೇಶಗಳು, ಸಂಸ್ಕೃತಿಗೆ ಅನುಗುಣವಾಗಿ ಆಹಾರ ಪದ್ಧತಿ ಮುಂದುವರಿಸುತ್ತಾ ಬರಲಾಗಿದೆ. ಇವುಗಳಲ್ಲಿ ಸಾಮಾನ್ಯ ಆಹಾರ ಪದ್ಧತಿಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಮೂಗು ಮುರಿಯುವಂತಹ ವಿಚಿತ್ರ ಆಹಾರ ಪದ್ಧತಿಗಳಾಗಿವೆ. ಈ ಪೈಕಿ ಎರಡನೇ ವಿಭಾಗವನ್ನು ನೋಡುವುದಾದರೆ ಮೆಕ್ಸಿಕೋ ನಗರದಲ್ಲಿ ದೇವರುಗಳ ಆಹಾರವೆಂದು ಕೀಟಗಳ ಮೊಟ್ಟೆಯನ್ನು ಸೇವಿಸುವ ಜನರ ಸಮೂಹವೊಂದಿದೆ.  ಕೀಟಗಳ ಮೊಟ್ಟೆ ಸೇವನೆಯ ಹಿಂದೆ ನಂಬಿಕೆಯೊಂದು ಅಡಗಿದೆ.

ಮಾಧ್ಯಮ ವರದಿಯ ಪ್ರಕಾರ, ಮೆಕ್ಸಿಕೋ ನಗರದಿಂದ ಸ್ವಲ್ಪ ದೂರದಲ್ಲಿ ಲೇಕ್ ಟೆಕ್ಸ್ಕೊಕೊ ಎಂಬ ಕೊಳದಲ್ಲಿ ನೀರಿನ ನೊಣ (ಸೊಳ್ಳೆ) ಕೂಡ ಕಂಡುಬರುತ್ತದೆ. ಈ ನೊಣದ ಮೊಟ್ಟೆಗಳನ್ನು ಅಹುಟ್ಲೆ ಎಂದು ಕರೆಯಲಾಗುತ್ತದೆ. ಅಹುಟ್ಲೆ ಎಂದರೆ ಸಂತೋಷದ ಬೀಜ. ಇದು ಗಾತ್ರ ಬಟಾಣಿಗಿಂತಲೂ ಚಿಕ್ಕದಾಗಿರುತ್ತದೆ. ಇದನ್ನು ಮೆಕ್ಸಿಕೋ ನಗರದ ಜನರು ಸೇವನೆ ಮಾಡುತ್ತಾರೆ. 14-15 ನೇ ಶತಮಾನದ ಮೆಕ್ಸಿಕೋದ ಅಜ್ಟೆಕ್ ಸಾಮ್ರಾಜ್ಯದ ಕಾಲದಿಂದಲೂ ಜನರು ಇದನ್ನು ಸೇವಿಸುತ್ತಾ ಬರುತ್ತಾರೆ.

ಮೊಟ್ಟೆ ಸಂಗ್ರಹಣೆ ಹೇಗೆ?

ಸೊಳ್ಳೆಗಳು ನೀರಿನಲ್ಲಿ ಇಡುವ ಮೊಟ್ಟೆಗಳನ್ನು ಮೀನುಗಾರರು ಸಂಗ್ರಹಿಸುತ್ತಾರೆ. ಹೇಗೆಂದರೆ, ಮೊದಲು ನೀರಿನ ಮೇಲ್ಮೈ ಕೆಳಗೆ ದೊಡ್ಡ ಬಲೆಯನ್ನು ಕಟ್ಟಲಾಗುತ್ತದೆ. ಸೊಳ್ಳೆ ಅಥವಾ ನೊಣಗಳು ಮೊಟ್ಟೆಯನ್ನು ಇದರ ಮೇಲೆ ಇಡುತ್ತವೆ. ಇದನ್ನು ಮೀನುಗಾರರು ಅಥವಾ ರೈತರು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸುತ್ತಾರೆ.

ಮೊಟ್ಟೆ ಸೇವನೆ ಕಡಿಮೆ ಮಾಡಿದ ಯುವಜನತೆ

14ನೇ ಶತಮಾನದಿಂದಲೂ ಜನರು ಕೀಟಗಳ ಮೊಟ್ಟೆಯನ್ನು ಸೇಸಿತ್ತಾ ಬರಲಾಗುತ್ತಿದೆ. ಆದರೆ ಇಂದಿನ ಯುವ ಜಗದಲ್ಲಿ ಇದರ ಸೇವನೆ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ ಮೆಕ್ಸಿಕೋ ನಗರದ ಅನೇಕ ರೆಸ್ಟೋರೆಂಟ್‌ಗಳು ಕ ಖಾದ್ಯವನ್ನು ತಯಾರಿಸುವುದಿಲ್ಲ. ಅಷ್ಟಕ್ಕೂ ಈ ಖಾದ್ಯ ಕಡಿಮೆ ಬೆಲೆಗೆ ಸಿಗುವುದಿಲ್ಲ, ಬೆಲೆಯೂ ದುಬಾರಿಯಾಗಿದೆ. 2019 ರಲ್ಲಿ ಪ್ರಕಟವಾದ ವರದಿಯ ಪ್ರಕಾರ ಮೊಟ್ಟೆಯ ಸಣ್ಣ ಜಾರ್​ಗೆ 1600 ರೂಪಾಯಿವರೆಗೆ ಇದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ