AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒರಟಾಗಿ ವರ್ತಿಸಿದ ಗ್ರಾಹಕರಿಗೆ ದುಪ್ಪಟ್ಟು ಬಿಲ್​​, ಸೌಜನ್ಯದಿಂದ ವರ್ತಿಸಿದವರಿಗೆ ರಿಯಾಯ್ತಿ

Cafe : ಒಂದು ಚಹಾ ಕೊಡಿ, ದಯವಿಟ್ಟು ಒಂದು ಚಹಾ ಕೊಡಿ, ಹೆಲೋ, ದಯವಿಟ್ಟು ಚಹಾ ಕೊಡಿ. ನೀವು ಯಾವ ರೀತಿಯಲ್ಲಿ ಆರ್ಡರ್ ಮಾಡುತ್ತೀರೋ ಆ ಪ್ರಕಾರ ನಿಮ್ಮ ಬಿಲ್​ ನಿಗದಿಯಾಗುತ್ತದೆ ಅಮೆರಿಕದ ಈ ಕೆಫೆಯೊಂದರಲ್ಲಿ.

ಒರಟಾಗಿ ವರ್ತಿಸಿದ ಗ್ರಾಹಕರಿಗೆ ದುಪ್ಪಟ್ಟು ಬಿಲ್​​, ಸೌಜನ್ಯದಿಂದ ವರ್ತಿಸಿದವರಿಗೆ ರಿಯಾಯ್ತಿ
UK café charges differently based on how polite or rude one is See pic of menu
TV9 Web
| Updated By: ಶ್ರೀದೇವಿ ಕಳಸದ|

Updated on:Oct 17, 2022 | 2:57 PM

Share

Trending : ಯಾವ ಕೆಲಸವೂ ಮೇಲುಕೀಳಲ್ಲ. ಹಾಗೆಯೇ ಯಾರು ಯಾವ ಕೆಲಸದಲ್ಲಿಯೇ ತೊಡಗಿಕೊಂಡಿರಲಿ, ಅವರನ್ನು ಸಮಾನವಾಗಿ ಕಾಣಬೇಕು. ಆದರೆ ನಾವಿರುವ ಪರಿಸರದಲ್ಲಿ ಅಥವಾ ನಮ್ಮ ಸುತ್ತಮುತ್ತಲೂ ಇದು ಅನ್ವಯವಾಗುತ್ತಿದೆಯಾ? ಒಬ್ಬ ಪ್ರೊಫೆಸರ್, ಆಫೀಸರ್, ಲಾಯರ್​ ಇವರನ್ನೆಲ್ಲ ಸಂಬೋಧಿಸುವ ರೀತಿನೀತಿ ಹೇಗಿರುತ್ತದೆ ಮತ್ತು ಹೋಟೆಲ್​ಗೆ ಹೋಗಿ ಅಲ್ಲಿಯ ವೇಟರ್​ಗೆ ಆರ್ಡರ್ ಮಾಡುವಾಗಿನ ಧರ್ತಿ ಹೇಗಿರುತ್ತದೆ…  ಇದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ ಅಲ್ಲವಾ? ಈ ವಿಷಯಕ್ಕೆ ಸಂಬಂಧಿಸಿದ ಒಂದು ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Chaii Stop™️ (@chaiistop_)

ಅಮೆರಿಕದ ಕೆಫೆಯೊಂದರಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಗೌರವಯುತವಾಗಿ, ಸೌಜನ್ಯದಿಂದ ವರ್ತಿಸುತ್ತಾನೆ ಎನ್ನುವುದರ ಮೇಲೆ ಅವನ ಬಿಲ್​ ನಿಗದಿಯಾಗುತ್ತದೆ. ಇದು ವಿಚಿತ್ರವಾದರೂ ಸತ್ಯ. ಸಾಕಷ್ಟು ಗ್ರಾಹಕರು ತಮ್ಮ ಮೂಡ್​ಗೆ ತಕ್ಕಂತೆಯೋ ಅಥವಾ ವೇಟರ್​ಗಳು ತಮ್ಮ ಪರಿಚಾರಕರು ಎಂಬ ಮೇಲರಿಮೆಯಲ್ಲಿಯೋ ಅವರೊಂದಿಗೆ ಬಹಳ ಹಗೂರವಾಗಿ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ನಡೆವಳಿಕೆಯ ವಿಷಯವಾಗಿ ಜಗಳಗಳೂ ನಡೆಯುತ್ತವೆ. ಹೀಗಾದಾಗ ಅಲ್ಲಿಯ ವಾತಾವರಣದಲ್ಲಿ ಪ್ರಕ್ಷುಬ್ಧತೆ ಉಂಟಾಗಿ ಉಳಿದವರ ಮೂಡ್ ಕೂಡ ಹಾಳಾಗುವ ಸಂಭವವಿರುತ್ತದೆ. ಜೊತೆಗೆ ವ್ಯಾಪರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ.

ಹಾಗಾಗಿ ಅಮೆರಿಕದ ಕೆಫೆಯೊಂದರಲ್ಲಿ ಇದಕ್ಕೆ ಹೊಸ ಉಪಾಯವನ್ನು ಕಂಡುಕೊಳ್ಳಲಾಗಿದೆ. ಗ್ರಾಹಕರ ಸಭ್ಯತನಕ್ಕೆ ಅನುಗುಣವಾಗಿ ಇಲ್ಲಿ ಬಿಲ್​ ನಿಗದಿ ಮಾಡಲಾಗುತ್ತದೆ. ಈ ಮೂಲಕ ಗ್ರಾಹಕರ ವರ್ತನೆಯಲ್ಲಿ ಉತ್ತಮ ಬದಲಾವಣೆಯನ್ನು ತರುವುದು ಕೆಫೆಯ ಉದ್ದೇಶವಾಗಿದೆ. ಆದ್ದರಿಂದ ಇಲ್ಲಿ ಅಗೌರವ, ಅಸಭ್ಯತನದಿಂದ ವರ್ತಿಸುವ ಗ್ರಾಹಕರಿಗೆ ದುಪ್ಪಟ್ಟು ಬಿಲ್​​. ಸೌಜನ್ಯದಿಂದ ವರ್ತಿಸುವ ಗ್ರಾಹಕರಿಗೆ ರಿಯಾಯ್ತಿ.

Chaii Stop ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಈ ಆಲೋಚನೆ ಬಹಳ ಇಷ್ಟವಾಯಿತು ಎಂದು ನೆಟ್ಟಿಗರು ಪ್ರಶಂಸಿಸಿದ್ಧಾರೆ. ಇದಕ್ಕಿಂತ ಉತ್ತಮವಾದ ಉಪಾಯ ಇನ್ನೊಂದಿಲ್ಲ ಇದು ಮುಂದುವರಿಯಲಿ ಎಂದಿದ್ದಾರೆ ಒಬ್ಬರು. ಅದ್ಭುತವಾದ ಐಡಿಯಾ ಇದು, ಬಹಳ ಸೂಕ್ಷ್ಮವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ನಿಮಗೇನು ಅನ್ನಿಸುತ್ತದೆ ಈ ವಿಷಯವಾಗಿ? ಭಾರತದಲ್ಲಿ ಇಂಥದೊಂದು ಆಲೋಚನೆ ಜಾರಿಗೆ ಬಂದರೆ ಹೇಗಿರುತ್ತದೆ?

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:51 pm, Mon, 17 October 22