Viral Photo: ಹಂದಿಯ ಮುಖವನ್ನು ಹೋಲುವ ಮೀನು ಪತ್ತೆ; ಫೋಟೋ ವೈರಲ್​​

|

Updated on: Jul 26, 2024 | 6:07 PM

ಹಂದಿಯ ಮುಖವನ್ನು ಹೋಲುವ ಮೀನಿನ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ಒಂದು ಕ್ಷಣ ಈ ಫೋಟೋ ನೋಡಿದಾಗ ಇದು ನಿಜಾನಾ ಅಥವಾ ಎಡಿಟೆಡ್​ ಫೋಟೋನಾ? ಎಂದು ಅನುಮಾನ ಹುಟ್ಟುವುದಂತೂ ಖಂಡಿತಾ. ಫೋಟೋ ಇಲ್ಲಿದೆ ನೋಡಿ.

Viral Photo: ಹಂದಿಯ ಮುಖವನ್ನು ಹೋಲುವ ಮೀನು ಪತ್ತೆ; ಫೋಟೋ ವೈರಲ್​​
Follow us on

ಹಂದಿಯ ಮುಖವನ್ನು ಹೋಲುವ ಮೀನಿನ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದು ಹಂದಿಯ ಮುಖ, ಮೀನಿನ ದೇಹವನ್ನು ಹೊಂದಿದೆ. ಇದನ್ನು ನೋಡಿದರೆ ಒಂದು ಕ್ಷಣ ನೀವು ಶಾಕ್ ಆಗುವುದಂತೂ ಖಂಡಿತಾ. ಇದು ನಿಜಾನಾ? ಎಡಿಟೆಡ್​ ಫೋಟೋನಾ? ಎಂದು ಅನುಮಾನ ಹುಟ್ಟುವುದು ಖಚಿತ.

ಇಂಡೋನೇಷ್ಯಾದಲ್ಲಿ ಹಂದಿಯ ಮುಖವನ್ನು ಹೋಲುವ ಮೀನು ಪತ್ತೆಯಾಗಿದ್ದು, ಈ ಮೀನಿನ ಫೋಟೋಗಳನ್ನು ಇಂಡೋನೇಷ್ಯಾದ ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ಫೋಟೋ ಎಲ್ಲೆಡೆ  ಭಾರೀ ಸುದ್ದು ಮಾಡುತ್ತಿದೆ.

ಫೋಟೋ ಇಲ್ಲಿದೆ ನೋಡಿ:

ಇದನ್ನೂ ಓದಿ: Video: ಗ್ಯಾಸ್ ಸೋರಿಕೆಯಿಂದ ಆಟೋ ಸ್ಫೋಟ; ಭೀಕರ ಅಗ್ನಿ ಅವಘಡದ ಭಯಾನಕ ದೃಶ್ಯ ವೈರಲ್​

@gofishingindonesia ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ವಿಶಿಷ್ಟ ಮೀನಿನ ಫೋಟೋ ಹಂಚಿಕೊಳ್ಳಲಾಗಿದೆ. ಫೋಟೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ ಲಕ್ಷಾಂತರ ನೆಟ್ಟಿಗರನ್ನು ತಲುಪಿದೆ. ಫೋಟೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಸಾಕಷ್ಟು ಜನರು “ಇದು ನಿಜವಲ್ಲ, ಎಡಿಟೆಡ್​​ ಫೋಟೋ” ಎಂದು ಕಾಮೆಂಟ್​ ಮಾಡಿದ್ದಾರೆ. ಆದರೆ ಇದು ನಿಜಾನಾ? ಎಡಿಟೆಡ್​ ಫೋಟೋನಾ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ