Viral Video: ರೈಲಿನೊಳಗೆ ಸಖತ್ ಬೋಲ್ಡಾಗಿ  ಡ್ಯಾನ್ಸ್  ಮಾಡಿದ ಯುವತಿಯರು, ರೊಚ್ಚಿಗೆದ್ದ ನೆಟ್ಟಿಗರು 

ರೀಲ್ಸ್ ಮಾಡಲು ಜನರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ರೈಲು, ಮೆಟ್ರೋ, ರಸ್ತೆ ಹೀಗೆ ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುತ್ತಿರುತ್ತಾರೆ. ಅದೇ ರೀತಿ ಇದೀಗ ಯುವತಿಯರಿಬ್ಬರು  ರೈಲಿನೊಳಗೆ ಭೋಜ್ಪುರಿ ಹಾಡಿಗೆ ನೃತ್ಯ ಮಾಡಿದ್ದು, ಈ ವೈರಲ್ ವಿಡಿಯೋವನ್ನು ಕಂಡು ಸಾರ್ವಜನಿಕ ಸ್ಥಳಗಳಲ್ಲಿ ಇದೆಂತಹ ಹುಚ್ಚಾಟ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

Viral Video: ರೈಲಿನೊಳಗೆ ಸಖತ್ ಬೋಲ್ಡಾಗಿ  ಡ್ಯಾನ್ಸ್  ಮಾಡಿದ ಯುವತಿಯರು, ರೊಚ್ಚಿಗೆದ್ದ ನೆಟ್ಟಿಗರು 
ವೈರಲ್​​ ವಿಡಿಯೋ
Edited By:

Updated on: Nov 28, 2023 | 6:05 PM

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಎಷ್ಟರ ಮಟ್ಟಿಗೆ ಇದೆ ಎಂದರೆ ಫೇಮಸ್ ಆಗುವ ಸಲುವಾಗಿ ರೀಲ್ಸ್ ಮಾಡುವವರು ಎಂತಹ ಹುಚ್ಚು ಸಾಹಸಕ್ಕೂ ಬೇಕಾದರೂ ಕೈ ಹಾಕುತ್ತಾರೆ. ಇನ್ನೂ ಹೆಚ್ಚಿನವರು ಮೆಟ್ರೋ, ರೈಲು, ರಸ್ತೆ ಹೀಗೆ  ಸಾರ್ವಜನಿಕ ಸ್ಥಳಗಳಲ್ಲಿ ಡಾನ್ಸ್ ರೀಲ್ಸ್ ಮಾಡುತ್ತಾರೆ.  ಮತ್ತು  ಈ ರೀತಿಯ ವರ್ತನೆಯಿಂದ ಹಲವರು ಆಗಾಗ್ಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವುದುಂಟು.  ಸಾರ್ವಜನಿಕ ಸ್ಥಳಗಳಲ್ಲಿ ಡಾನ್ಸ್  ಮಾಡಿ ಪೇಚಿಗೆ ಸಿಳುಕಿಕೊಂಡ ಇಂತಹ ಹಲವು ಘಟನೆಗಳು ಈ ಹಿಂದೆ ನಡೆದಿದೆ. ಅದೇ ರೀತಿ ಇದೀಗ ಯುವತಿಯರಿಬ್ಬರು, ರೈಲಿನೊಳಗೆ ಭೋಜ್ಪುರಿ ಹಾಡಿಗೆ ಸೊಂಟ ಬಳುಕಿಸಿದ್ದು, ರೈಲಿನೊಳಗೆ ಈ ರೀತಿ ಎಲ್ಲೇ ಮೀರಿ ನೆಡೆಯುವವರ ವಿರುದ್ಧ ರೈಲ್ವೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಜಯ ಜೆರ್ರಿ (@jayajerry8572) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಡಾನ್ಸ್ ವೀಡಿಯೋ ಕ್ಲಿಪ್ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಯುವತಿಯರಿಬ್ಬರು ಬೋಲ್ಡ್ ಆಗಿ ಭೋಜ್ ಪುರಿ ಹಾಡಿಗೆ ಸೊಂಟ ಬಳುಕಿಸುತ್ತಿರುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

ವಿಡಿಯೋದಲ್ಲಿ  ರೈಲಿನೊಳಗೆ ಇತರ ಪ್ರಯಾಣಿಕರೆಲ್ಲರೂ ತಮ್ಮ ತಮ್ಮ ಸೀಟಿನಲ್ಲಿ ನೆಮ್ಮದಿಯಿಂದ ಮಲಗಿ ನಿದ್ದೆ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡುವ ಸಲುವಾಗಿ ಸೊಂಟ ಬಳುಕಿಸುತ್ತಾ, ಭೋಜ್ ಪುರಿ ಹಾಡಿಗೆ  ಬೋಲ್ಡ್ ಆಗಿ ಡಾನ್ಸ್  ಮಾಡುತ್ತಾಳೆ, ಕೊನೆಯಲ್ಲಿ ಆಕೆಯ ಗೆಳತಿಯೂ ಆಕೆಯೊಂದಿಗೆ ಸೇರಿ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು,   ಅನೇಕರು ಈ ವಿಡಿಯೋವನ್ನು ಕಂಡು ಸಾರ್ವಜನಿಕ ಸ್ಥಳಗಳಲ್ಲಿ ಇದೆಂತಹ ಹುಚ್ಚಾಟ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ:  ಹೀಗೊಂದು ವಿಶೇಷ ಮದುವೆ,  ಬಾನಂಗಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿ  

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 8.2 ಮಿಲಿಯನ್ ವೀಕ್ಷಣೆಗಳನ್ನು,  191K ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಬಂದಿವೆ.  ಒಬ್ಬ ಬಳಕೆದಾರರು ʼರೈಲ್ವೆ ಇಲಾಖೆ ಇಂತಹವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕುʼ ಎಂದು ಕಿಡಿಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಯಾಣಿಕರನ್ನು ಸಂತೋಷಪಡಿಸಲು ಈ ಡಾನ್ಸರ್ ಗಳನ್ನು ಕರೆಸಿದ್ದಕ್ಕಾಗಿ ರೈಲ್ವೆ ಇಲಾಖೆಗೆ ಧನ್ಯವಾದಗಳುʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ಎಷ್ಟರ ಮಟ್ಟಿಗೆ  ಸರಿ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:59 pm, Tue, 28 November 23

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us