
ಖಾಸಗಿ ಕಂಪನಿ ಅಥವಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು (employee) ಅಲ್ಲಿನ ನಿಯಮಗಳನ್ನು ಪಾಲಿಸಬೇಕು. ಕೆಲವೊಮ್ಮೆ ನೈತಿಕ ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಆದರೆ ಇಲ್ಲೊಬ್ಬ ಉದ್ಯೋಗಿಯೊಬ್ಬರಿಗೆ ಕಹಿ ಅನುಭವವಾಗಿದೆ. ಭಾರತೀಯ ಕ್ಯಾಲಿಫೋರ್ನಿಯಾ ಸಂಸ್ಥೆಯೊಂದರಲ್ಲಿ (California Institute) ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಬಾಸ್ ನಿಂದಿಸಿದ್ದು, ಕಹಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಬಾಸ್ ಈ ರೀತಿ ವರ್ತಿಸಿದ್ದು ಸರಿನಾ ಅಥವಾ ನಾನೇನು ತಪ್ಪು ಮಾಡಿದೆ ಎಂದು ಕೇಳಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಬಾಸ್ ವರ್ತನೆಯನ್ನು ಟೀಕಿಸಿದ್ದಾರೆ.
IndianWorkPlace ಹೆಸರಿನ ಸಬ್ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ಕೆಲಸ ಸ್ಥಳದಲ್ಲಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ನನ್ನ ಟ್ಯಾ ಟೂ ನೋಡಿ ಹಿರಿಯ ಕ್ಯಾಲಿಫೋರ್ನಿಯಾ ಅಧಿಕಾರಿ ಕೂಗಾಡಿದರು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವಾಸ್ತವವಾಗಿ, ನಾನು ಬಹಳ ದಿನಗಳಿಂದ ಟ್ಯಾಟೂ ಹಾಕಿಸಿಕೊಳ್ಳಬೇಕೆಂದು ಬಯಸಿದ್ದೆ. ಟ್ಯಾಟೂ ನನ್ನ ಬಲಗೈ ಮುಂದೋಳಿನ ಮೇಲೆ ಇದ್ದು, ಸ್ವಲ್ಪ ದೊಡ್ಡದಾಗಿಯೇ ಇದೆ.
Senior CA shouted at me seeing my TATTOO.
byu/Sad-Championship-533 inIndianWorkplace
ಆದರೆ ನಾನು ಟ್ಯಾಟೂವನ್ನು ವಿಶೇಷವಾಗಿ ಆರ್ಟಿಕಲ್‌ಶಿಪ್ ಸಂಸ್ಥೆಯಲ್ಲಿ ಸಾರ್ವಜನಿಕವಾಗಿ ತೋರಿಸುವುದಿಲ್ಲ. ಇದನ್ನು ಮರೆಮಾಡಲು ಯಾವಾಗಲೂ ಶರ್ಟ್ ಅಡಿಯಲ್ಲಿ ಮೊಣಕೈ ತೋಳಿನ ಬ್ಯಾಂಡ್ ಅನ್ನು ಧರಿಸುತ್ತೇನೆ. ಆದರೆ, ನಿನ್ನೆ ಅವಸರದಲ್ಲಿ ನಾನು ಅದನ್ನು ಧರಿಸಲು ಮರೆತಿದ್ದೆ. ಶರ್ಟ್ ಮಾತ್ರ ಧರಿಸಿದ್ದೆ ಎಂದು ಹೇಳಿದ್ದಾರೆ.
ನಾನು ಆಗ್ರಾದಲ್ಲಿ ಒಂದು ಸಂಸ್ಥೆಯಲ್ಲಿ ಆಡಿಟ್‌ನಲ್ಲಿದ್ದೆ. ನಾವು ಆಡಿಟ್ ಮುಗಿಸಿ, ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಊಟಕ್ಕೆಂದು ಕೆಫೆಟೇರಿಯಾದಲ್ಲಿ ಕುಳಿತಿದ್ದೆವು. ಕಿಟಕಿಯ ಮೂಲಕ ಬರುತ್ತಿದ್ದ ಸೂರ್ಯನ ಕಿರಣಗಳಿಂದಾಗಿ, ನಾನು ಬೆವರುತ್ತಿದ್ದೆ. ಹೀಗಾಗಿ ನಾನು ನನ್ನ ಶರ್ಟ್‌ನ ತೋಳುಗಳನ್ನು ಮೇಲಕ್ಕೆ ಎಳೆದೆ. ಈ ವೇಳೆಯಲ್ಲಿ ಸೀನಿಯರ್ ಸಿಎ ಟ್ಯಾಟೂ ಗಮನಿಸಿ ಕೂಗಾಡಲು ಶುರು ಮಾಡಿದರು. ವೃತ್ತಿಯ ಬಗ್ಗೆ ನನ್ನ ನೈತಿಕ ಕರ್ತವ್ಯಗಳನ್ನು ಪ್ರಶ್ನಿಸಿದರು. ನಾವು ನಮ್ಮ ಸಂಸ್ಥೆಗೆ ಹಿಂತಿರುಗಿದ ನಂತರ ಚರ್ಚಿಸುತ್ತೇವೆ ಎಂದು ನೇರವಾಗಿ ಹೇಳಿದರು. ಬಹುಶಃ ಇದು ನಾನು ಸುಮಾರು 2 ತಿಂಗಳಿನಿಂದ ಕೇಳುತ್ತಿದ್ದ ಕೈಗಾರಿಕಾ ತರಬೇತಿ ಕಂಪನಿಗೆ ನನ್ನ ವರ್ಗಾವಣೆಯನ್ನು ನಿಲ್ಲಿಸುವಲ್ಲಿ ತೊಂದರೆಗಳನ್ನುಂಟುಮಾಡುವ ಅವರ ಸುಳಿವು ಆಗಿರಬಹುದು ಎಂದು ನನಗನಿಸಿತು. ಇದು ನಾನು ಮಾಡಿದ ಅಪರಾಧ ಎಂದು ಅನಿಸುತ್ತಿಲ್ಲ. ಇವತ್ತು ನಾನು ಸಂಸ್ಥೆಗೆ ಹೋಗಿಲಿಲ್ಲ. ಅಲ್ಲಿ ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ಈ ಘಟನೆ ಮಾತ್ರ ಬಹಳ ವಿಚಿತ್ರವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಇಲ್ಲಿ ಕೆಲಸ ಮಾಡಿದ್ರೂ ಬೆಲೆ ಇಲ್ಲ; ಮ್ಯಾನೇಜರ್ ವರ್ತನೆಗೆ ಬೇಸೆತ್ತು ರಾಜೀನಾಮೆ ನೀಡಿದ ಉದ್ಯೋಗಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಟ್ಯಾಟೂ ಹಾಕಿಸಿದ ಉದ್ಯೋಗಿಯನ್ನು ನಿಂದಿಸುವುದು ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಇತ್ತೀಚೆಗಿನ ದಿನಗಳಲ್ಲಿ ಬಾಸ್ ವರ್ತನೆ ಅತೀರೇಕವಾಗುತ್ತಿದೆ. ಈ ರೀತಿಯಾದ್ರೆ ಕೆಲಸ ಮಾಡಲು ಯಾರು ಬರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಯಾವುದೇ ಕೆಲಸದ ನೀತಿಗೆ ವಿರುದ್ಧವಾಗಿ ಟ್ಯಾಟೂ ಹಾಕಿಸಿಕೊಳ್ಳುವುದು ಹೇಗೆ? ಅದು ವೈಯಕ್ತಿಕ ಆಯ್ಕೆ. ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಬರುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಆ ಅಪಾಯಗಳನ್ನು ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Wed, 19 November 25