ವೈರಲ್ ವಿಡಿಯೋ: ರೆಸ್ಟೊರೆಂಟ್ ನಲ್ಲಿ ಪ್ರೇಮ ನಿವೇದನೆ.. ಹುಡುಗಿ ರಿಜೆಕ್ಟ್ ಮಾಡಿದಾಗ ಹುಡುಗ ಮಾಡಿದ್ದೇನು? ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!

Love Proposal - ಲವ್ ಪ್ರಪೋಸಲ್: ಈ ಸೃಷ್ಟಿಯಲ್ಲಿ ಪ್ರೀತಿ ಅತ್ಯಂತ ಸುಂದರ. ಅದರ ಭಾವನೆ ಇನ್ನೂ ಉತ್ತಮೋತ್ತಮವಾಗಿದೆ. ಪ್ರೀತಿಗೆ ವಯಸ್ಸು, ಜಾತಿ, ಧರ್ಮ, ಜಾತಿ, ಪ್ರದೇಶ ಮುಂತಾದ ಎಲ್ಲೆಗಳಿಲ್ಲ ಎಂಬುದು ಕಾಲಕಾಲಕ್ಕೆ ಸರ್ವವಿಧಿತವಾಗುತ್ತಾ ಇರುತ್ತದೆ.

ವೈರಲ್ ವಿಡಿಯೋ: ರೆಸ್ಟೊರೆಂಟ್ ನಲ್ಲಿ ಪ್ರೇಮ ನಿವೇದನೆ.. ಹುಡುಗಿ ರಿಜೆಕ್ಟ್ ಮಾಡಿದಾಗ ಹುಡುಗ ಮಾಡಿದ್ದೇನು? ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!
ರೆಸ್ಟೊರೆಂಟ್ ನಲ್ಲಿ ಪ್ರೇಮ ನಿವೇದನೆ.. ಹುಡುಗಿ ರಿಜೆಕ್ಟ್ ಮಾಡಿದಾಗ ಹುಡುಗ ಮಾಡಿದ್ದೇನು ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!
Updated By: ಸಾಧು ಶ್ರೀನಾಥ್​

Updated on: Sep 03, 2022 | 10:29 PM

Viral Video: ಲವ್ ಪ್ರಪೋಸಲ್: ಈ ಸೃಷ್ಟಿಯಲ್ಲಿ ಪ್ರೀತಿ ಅತ್ಯಂತ ಸುಂದರ. ಅದರ ಭಾವನೆ ಇನ್ನೂ ಉತ್ತಮೋತ್ತಮವಾಗಿದೆ. ಪ್ರೀತಿಗೆ ವಯಸ್ಸು, ಜಾತಿ, ಧರ್ಮ, ಜಾತಿ, ಪ್ರದೇಶ ಮುಂತಾದ ಎಲ್ಲೆಗಳಿಲ್ಲ ಎಂಬುದು ಕಾಲಕಾಲಕ್ಕೆ ಸರ್ವವಿಧಿತವಾಗುತ್ತಾ ಇರುತ್ತದೆ. ಆದರೆ ಈ ಪವಿತ್ರ ಪ್ರೀತಿ ಇತ್ತೀಚಿನ ದಿನಗಳಲ್ಲಿ ಟೈಂಪಾಸ್ ಆಗಿಬಿಟ್ಟಿದೆ. ಕೆಲವು ಹುಡುಗಿಯರು ಅಥವಾ ಹುಡುಗರು ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಬಾಯ್​ಫ್ರೆಂಡ್ ಅಥವಾ ಗರ್ಲ್​ಫ್ರೆಂಡ್​​ ತನ್ನ ಪ್ರೀತಿಯನ್ನು ಸ್ವೀಕರಿಸದಿದ್ದಾಗ, ಕೋಪಗೊಳ್ಳುತ್ತಾರೆ ಮತ್ತು ಭಾವನಾತ್ಮಕವಾಗಿ ಹುಚ್ಚುತನಕ್ಕೆ ಇಳಿಯುತ್ತಾರೆ.

ಕೆಲವರು ಪ್ರೀತಿಯಲ್ಲಿ ವಿಫಲಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಹಸಿಬಿಸಿ ಪ್ರೇಮ-ಪ್ರೀತಿಯ ಸಮ್ಮುಖದಲ್ಲಿ ಇಂತಹುದೇ ಒಂದು ಲವ್ ಪ್ರಪೋಸಲ್ ಗೆ ಸಂಬಂಧಿಸಿದ ವಿಡಿಯೋವೊಂದು ನೆಟ್ ನಲ್ಲಿ ಭಾರೀ ವೈರಲ್ ಆಗುತ್ತಿದೆ. ಅದು ದಶಲಕ್ಷ ವ್ಯೂಸ್​ ಅನ್ನೂ ದಾಟಿದೆ. ಈ ಟ್ರೆಂಡಿಂಗ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿದ್ದಾನೆ. ಅವನು ರುಚಿಕರವಾದ ಆಹಾರವನ್ನು ಆರ್ಡರ್​​ ಮಾಡುತ್ತಾನೆ.

ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಇದೇ ಉತ್ತಮ ಸಮಯ ಎಂದು ಭಾವಿಸಿದ ಆತ, ಮರುಕ್ಷಣವೇ ಮೊಣಕಾಲುಗಳ ಮೇಲೆ ಮಂಡಿಯೂರಿ ಮದುವೆಯ ಪ್ರಸ್ತಾಪವನ್ನು ಮಾಡುತ್ತಾನೆ. ತಾನು ಕಡು ಪ್ರೀತಿಸುವ ಗೆಳತಿ ತನ್ನ ಪ್ರಸ್ತಾಪವನಗೆ ಓಕೆ ಹೇಳುತ್ತಾಳೆ ಎಂದು ಅವನು ಸಂಭ್ರಮದಿಂದ ಓಲಾಡುತ್ತಿರುತ್ತಾನೆ. ಆದರೆ ಅದು ತನ್ನ ಭ್ರಮೆ ಎಂಬುದು ಅಲ್ಲೇ ಇತ್ಯರ್ಥವಾಗುತ್ತದೆ. ಅನ್ಯಮನಸ್ಕಳಾದ ಹುಡುಗಿ ಏನನ್ನೂ ಹೇಳದಿದ್ದಾಗ ಅವನ ಪ್ರೀತಿ ಹುಸಿಯಾಗುತ್ತದೆ. ಬಹುಶಃ ತಾನೇ ಗಿಫ್ಟ್​ ಆಗಿ ಮೊಲದ ಬಿಳುಪಿನ ಹೊಚ್ಚಹೊಸ ಷೂ ಕೊಡಿಸಿದ್ದ ಅಂತಾ ಕಾಣುತ್ತದೆ. ಅದೇ ಸಿಟ್ಟಿನಲ್ಲಿ ಕೋಪ ತಾಳಲಾರದೆ ಗೆಳತಿಯ ಶೂ ತೆಗೆಯುತ್ತಾನೆ. ತಾನು ಆರ್ಡರ್ ಮಾಡಿದ್ದ ಅರ್ಧಂಬರ್ಧ ತಿಂದಿದ್ದ ಆಹಾರವನ್ನೂ, ಒಂದು ಪಾಲಿಥಿನ್ ಕವರ್ ನಲ್ಲಿ ತುಂಬಿಕೊಳ್ಳುತ್ತಾನೆ. ಆಹಾರ ಮತ್ತು ಷೂ ಎರಡನ್ನೂ ಕಿತ್ತುಕೊಂಡು ಸರಕ್ಕಂತ ಅಲ್ಲಿಂದ ಕಾಲ್ಕೀಳುತ್ತಾನೆ… ಹೋಗುವಾಗ ಅಲ್ಲಿದ್ದ ನೀರಿನಬ ಬಾಟಲಿಯನ್ನೂ ಹೊತ್ತೊಯ್ಯುತ್ತಾನೆ.

ಇದೆಲ್ಲಾ ವೀಡಿಯೊದಲ್ಲಿ ದಾಖಲಾಗಿದ್ದು, ಅದೀಗ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ @Unexpectedendd ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಲಕ್ಷಾಂತರ ಜನರು ಅದನ್ನು ವೀಕ್ಷಿಸಿದ್ದಾರೆ. ಅದಕ್ಕೆ ಲಕ್ಷಾಂತರ ಲೈಕ್‌ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹುಡುಗ ಮಾಡಿದ್ದು ಸರಿ.. ಬಡವನ ಅನ್ನ ವ್ಯರ್ಥವಾಯಿತು ಎಂದು ಹುಡುಗನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಇದೇ ವೇಳೆ ಇನ್ನು ಕೆಲವರು ಹೆಣ್ಣುಮಕ್ಕಳು ತಮಗೆ ಇಷ್ಟ ಬಂದಂತೆ ಬದುಕುವ ಹಕ್ಕು ಹೊಂದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನೀವೂ ಒಮ್ಮೆ ಆ ವಿಡಿಯೋ ನೋಡಿ.

Published On - 10:28 pm, Sat, 3 September 22