Viral Video: ವೇದಿಕೆಯ ಮೇಲೆ ವಧು ವರರ ಜಬರ್ದಸ್ತ್ ಡಾನ್ಸ್; ವಿಡಿಯೊ ನೋಡಿದ್ರೆ ಫಿದಾ ಆಗ್ತೀರಾ

ವೇದಿಕೆಯ ಮೇಲೆ ಸಕತ್ತಾಗಿ ಕುಣಿದ ವಧು ವರರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ಮದುವೆಯಲ್ಲಿ ಪಾಲ್ಗೊಂಡ ಅತಿಥಿಗಳು ಸುತ್ತಲೂ ನಿಂತು ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ವಿಡಿಯೊ ನೋಡಿ..

Viral Video: ವೇದಿಕೆಯ ಮೇಲೆ ವಧು ವರರ ಜಬರ್ದಸ್ತ್ ಡಾನ್ಸ್; ವಿಡಿಯೊ ನೋಡಿದ್ರೆ ಫಿದಾ ಆಗ್ತೀರಾ
ಸಕತ್​ ಸ್ಟೆಪ್​ ಹಾಕಿದ ವಧು ವರರು
Edited By:

Updated on: Nov 03, 2021 | 9:33 AM

ಇತ್ತೀಚಿಗಿನ ಮದುವೆ ಸಮಾರಂಭಗಳಲ್ಲಿ ನೃತ್ಯ ಹಾಡುಗಳಂತಹ ಕಾರ್ಯಕ್ರಮಗಳಿಲ್ಲದೇ ಕೊನೆಗೊಳ್ಳುವುದಿಲ್ಲ. ವಧು ವರರು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಆ ಸಂತೋಷದ ದಿನದಂದು ನವ ಜೋಡಿ ಜಬರ್ದಸ್ತ್ ಡಾನ್ಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಫುಲ್ ವೈರಲ್ ಆಗಿದ್ದು ನೆಟ್ಟಿಗರು ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದು ಅವರಿಬ್ಬರ ಜೀವನದ ವಿಶೇಷ ದಿನವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವಧು ವರರ ಜಬರ್ದಸ್ತ್ ಡಾನ್ಸ್ ವಿಡಿಯೊ ನೀವೇ ನೋಡಿ.

ಮದುವೆಯ ವಿಧಿವಿಧಾನಗಳು ಮುಗಿದಿದ್ದೆ ವಧು ವರರು ಡಿಜೆ ಡ್ಯಾನ್ಸ್ ಫ್ಲೋರ್​ಗೆ ಇಳಿದಿರುವ ವಿಡಿಯೊ ಸಕತ್ ವೈರಲ್ ಆಗಿದೆ. ಉತ್ಸಾಹದಿಂದ ಕುಣಿಯುತ್ತಿರುವ ಜೋಡಿಗೆ ಸುತ್ತಲೂ ನಿಂತಿದ್ದ ಜನ ಪ್ರೋತ್ಸಾಹಿಸುತ್ತಿದ್ದಾರೆ. ಕುಣಿಯುತ್ತಾ ಕುಣಿಯುತ್ತಾ ಸುಸ್ತಾದ ವಧು ವರರು ಕೆಲವು ಸೆಕೆಂಡುಗಳ ಕಾಲ ಸಮತೋಲವನ್ನು ಕಳೆದುಕೊಳ್ಳುತ್ತಾರೆ. ನಂತರ ಮತ್ತೆ ಉತ್ಸಾಹದಿಂದ ಕುಣಿಯುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.

ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಉತ್ಸಾಹದಲ್ಲಿ ಕುಣಿಯುತ್ತಿರುವ ವಧು ವರರನ್ನು ನೋಡಿ ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ. 4 ದಿನಗಳ ಹಿಂದೆಯೇ ವಿಡಿಯೊ ಪೋಸ್ಟ್ ಮಾಡಲಾಗಿದ್ದು, 3,400 ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಸಂಗ್ರಹಿಸಿದೆ. ಕೆಲವರು ವಿಡಿಯೊ ಮೆಚ್ಚಿಕೊಂಡ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯ ಬೆಲ್ಲಿ ಡಾನ್ಸ್​; ನೆಟ್ಟಿಗರೆಲ್ಲಾ ಫಿದಾ

Viral Video: ಡಾನ್ಸ್​ ಮಾಡ್ತಾ ಮಾಡ್ತಾ ವರನನ್ನು ಬೀಳಿಸಿಯೇ ಬಿಟ್ಟನಲ್ಲಾ ಪುಣ್ಯಾತ್ಮ!