Viral Video: ಮದುವೆಯಲ್ಲಿ ಹಾರವನ್ನು ಎಸೆದುಕೊಂಡ ಜೋಡಿ: ಪುಟಿನ್​ಗೂ ಇಷ್ಟು ಅಹಂಕಾರವಿಲ್ಲವೆಂದ ನೆಟ್ಟಿಗರು

ಇಲ್ಲೊಂದು ವಿಡಿಯೋದಲ್ಲಿ ಹಾರ ಬದಲಾಯಿಸಿಕೊಳ್ಳುವ ವೇಳೆ ವಧು ವರರಿಬ್ಬರೂ ಸಿಟ್ಟಿನಿಂದ ಹಾರವನ್ನು ಎಸೆದುಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಮದುವೆಯಲ್ಲಿ ಹಾರವನ್ನು ಎಸೆದುಕೊಂಡ ಜೋಡಿ: ಪುಟಿನ್​ಗೂ ಇಷ್ಟು ಅಹಂಕಾರವಿಲ್ಲವೆಂದ ನೆಟ್ಟಿಗರು
ಮದುವೆ
Updated By: Pavitra Bhat Jigalemane

Updated on: Mar 02, 2022 | 1:21 PM

ಮದುವೆ (Wedding) ಮನೆಗಳಲ್ಲಿ ಕೆಲವು ವಿಚಿತ್ರ ಘಟನೆಗಳು ನಡೆಯುವುದು ಸಾಮಾನ್ಯ. ಸಾಮಾನ್ಯವಾಗಿ ತಮಾಷೆಯ ಘಟನೆಗಳೇ ಹೆಚ್ಚು. ವಧು ವರರನ್ನು ಕಾಲೆಳೆದು ತಮಾಷೆ ಮಾಡುವುದು ಸಹಜ, ಆದರೆ ಇಲ್ಲೊಂದು ವಿಡಿಯೋದಲ್ಲಿ ಹಾರ ಬದಲಾಯಿಸಿಕೊಳ್ಳುವ ವೇಳೆ ವಧು (Bride) ವರ (Groom)ರಿಬ್ಬರೂ ಸಿಟ್ಟಿನಿಂದ ಹಾರವನ್ನು ಎಸೆದುಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್​ ಆಗಿದೆ.  ಮದುವೆ ಮನೆಗಳಲ್ಲಿ ವಧು ವರರೇ ಮುಖ್ಯ ಆಕರ್ಷಣೆ ಮತ್ತು ಕೇಂದ್ರ ಬಿಂದುವಾಗಿರುತ್ತಾರೆ. ಹೀಗಿದ್ದಾಗ ಸೊಕ್ಕಿನಿಂದ ಹಾರ ಬದಲಾಯಿಸಿಕೊಳ್ಳುವುದನ್ನು ಕಂಡು ನೆಟ್ಟಿಗರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಈಗಲೇ ಈ ರೀತಿ ಇದ್ದರೆ ಮುಂದೆ ಒಟ್ಟಿಗೆ ಇದ್ದಾಗ ಗತಿ ಏನು ಎಂದು ಕಾಮೆಂಟ್​ ಮಾಡಿದ್ದಾರೆ.

 


ಘಂಟಾ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದ್ದು, ಚಪ್ಪಾಳೆ ತಟ್ಟುವ ಕ್ಯಾಪ್ಷನ್​ ನೀಡಿದೆ. ವಿಡಿಯೋದಲ್ಲಿ ಮೊದಲು ಕೆಂಪು ಬಣ್ಣದ ಸೀರೆಯುಟ್ಟ ವಧು ಸಿಟ್ಟಿನಿಂದ ವರನಿಗೆ ಹಾರವನ್ನು ಎಸೆಯುತ್ತಾಳೆ. ನಂತರ ವರ ಕೂಡ ವಧುವಿನ ಕುತ್ತಿಗೆಗೆ ನಿಂತಲ್ಲೇ ನಿಂತು ಹಾರವನ್ನು ಎಸೆಯುತ್ತಾನೆ. ಇದರ ವಿಡಿಯೋವನ್ನು ನೋಡಿ ನೆಟ್ಟಿಗರು ವಿಚಿತ್ರ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ವೈರಲ್​ ಆಗಿರುವ ವಿಡಿಯೋಕ್ಕೆ ಬಳಕೆದಾರರೊಬ್ಬರು ಪುಟಿನ್​ಗೂ ಕೂಡ ಇಷ್ಟು ಅಹಂಕಾರ ಇರಲು ಸಾಧ್ಯವಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ಮದುವೆಯಾಗುತ್ತಿದ್ದಾರೋ ಅಥವಾ ದ್ವೇಷ ತೀರಿಸಿಕೊಳ್ಳುತ್ತಿದ್ದಾರೋ ಎಂದು ಕಾಮೆಂಟ್​ ಮಾಡಿದ್ದಾರೆ. ವೈರಲ್​ ಆದ ವಿಡಿಯೋ 2 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು ಸಾವಿರಕ್ಕೂ ಅಧಿಕ ಜನ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ

Published On - 1:20 pm, Wed, 2 March 22