ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳ ಮಹಾಪೂರವೇ ಹರಿದು ಬರುತ್ತಿವೆ. ಕೆಲವು ವಿಡಿಯೋಗಳು ಹೆಚ್ಚು ತಮಾಷೆಯಾಗಿರುತ್ತವೆ. ನಕ್ಕು ನಕ್ಕು ಕಣ್ಣಲ್ಲೆಲ್ಲಾ ನೀರು ತುಂಬಿಕೊಳ್ಳುವಷ್ಟು ಮಜವಾಗಿರುತ್ತದೆ. ಅಂಥಹುದೆ ವಿಡಿಯೋ ಇದಾಗಿದ್ದು ಫುಲ್ ವೈರಲ್ ಆಗಿದೆ. ಮದುವೆ ಮಂಟಪದಲ್ಲಿ ವರನನ್ನು ನೋಡಿದ ವಧು ಕೆನ್ನೆಗೆ ಬಾರಿಸಿದ್ದಾಳೆ. ಕಾರಣ ಕೇಳಿ ಕೆಲವರು ಸರಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದರೆ ಇನ್ನು ಕೆಲವರು ತಮಾಷೆ ಮಾಡಿ ನಗುತ್ತಿದ್ದಾರೆ.
ವರ ಆಗಲೇ ಮದುವೆ ಮಂಟಪದಲ್ಲಿ ಬಂದಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಬಳಿಕ ವಧು ಮಂಟಪಕ್ಕೆ ಪ್ರವೇಶಿಸುತ್ತಾಳೆ. ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ವರನ ಕೆನ್ನೆಗೆ ಬಾರಿಸಿದ್ದಾಳೆ. ವಧುವಿನ ರಿಯಾಕ್ಷನ್ ನೋಡಿ ನೆಟ್ಟಿಗರು ನಗುತ್ತಿದ್ದಾರೆ. ವಿಡಿಯೋ ಸಕತ್ ವೈರಲ್ ಆಗಿದ್ದು ಕೆಲವರು ಕಾಮೆಂಟ್ ವಿಭಾಗದಲ್ಲಿ ನಗುವಿನ ಎಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕೆನ್ನೆಗೆ ಬಾರಿಸುತ್ತಿದ್ದಂತೆಯೇ ವರ ಎದ್ದು ಹೋಗಿ ಗುಟ್ಕಾವನ್ನು ಉಗುಳಿ ಬರುವುದನ್ನು ನೋಡಬಹುದು. ಸುತ್ತಲಿರುವ ಜನ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ದೃಶ್ಯ ಕ್ಯಾಮಾರದಲ್ಲಿ ಸೆರೆಯಾಗಿದ್ದು ಫುಲ್ ವೈರಲ್ ಆಗಿದೆ. ದೃಶ್ಯ ನಡೆದಿರುವ ಸ್ಥಳ ಎಲ್ಲಿ ಎಂಬ ಮಾಹಿತಿ ಲಭ್ಯವಾಗಿಲ್ಲ.
ಮದುವೆಯಾಗುವ ವರ ಮಂಟಪದಲ್ಲಿ ಗುಟ್ಕಾ ಅಗೆಯುತ್ತಿದ್ದಾನೆ ಎಂದು ತಿಳಿದ ವಧು ಕೋಪಗೊಂಡಿದ್ದಾಳೆ. ಗುಟ್ಕಾವನ್ನು ಉಗುಳಿ ಬರುವಂತೆ ಸಲಹೆ ನೀಡುತ್ತಾಳೆ. ನಂತರ ವರ ಎದ್ದು ಹೋಗಿ ಅಗೆಯುತ್ತಿದ್ದ ಪಾನ್ ಉಗುಳಿ ಬಂದಿದ್ದಾನೆ. ದೃಶ್ಯಕ್ಕೆ ಮ್ಯೂಸಿಕ್ ಹೊಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ತಮಾಷೆಯ ವಿಡಿಯೋಗಳನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ವರ ಇನ್ನು ಮುಂದೆ ಗುಟ್ಕಾವನ್ನು ಮುಟ್ಟುವುದೂ ಇಲ್ಲ.. ಎಂದು ಓರ್ವರು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಹಸುವನ್ನು ಕಾರಿನಲ್ಲಿ ಕುಳಿಸಿಕೊಂಡು ರೈಡ್ ಹೊರಟ ವ್ಯಕ್ತಿ; ವಿಡಿಯೋ ವೈರಲ್
(Bride slapping groom for eating gutgka video goes viral in social media)
Published On - 12:08 pm, Sun, 29 August 21