ಸೆಕ್ಸ್ ವರ್ಕರ್ಸ್​ಗೆ ಕಳುಹಿಸಿ ಡಿಲೀಟ್ ಆಗಿದ್ದ ಗಂಡನ ಮೆಸೇಜ್ ನೋಡಿದ ಪತ್ನಿ; ಈಗ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ

|

Updated on: Jun 17, 2024 | 7:27 PM

Wife finds out husbands deleted messages sent to sex workers: ಸೆಕ್ಸ್ ವರ್ಕರ್ಸ್​ಗೆ ಗಂಡ ಕಳುಹಿಸಿ ಡಿಲೀಟ್ ಮಾಡಲಾಗಿದ್ದ ಮೆಸೇಜ್​ಗಳನ್ನು ಹೆಂಡತಿ ನೋಡಿ, ಡಿವೋರ್ಸ್ ಕೊಟ್ಟಿದ್ದಾಳೆ. ಜೀವನಾಂಶವಾಗಿ ಐದು ಮಿಲಿಯನ್ ಪೌಂಡ್ ಹಣವನ್ನು ಗಂಡ ಕೊಟ್ಟಿದ್ದಾರೆ. ಐಫೋನ್​ನಲ್ಲಿ ಡಿಲೀಟ್ ಆದ ಮೆಸೇಜ್ ನಿಜವಾಗಿಯೂ ಡಿಲೀಟ್ ಆಗದೇ ಹೆಂಡತಿ ಕಣ್ಣಿಗೆ ಬಿದ್ದಿದೆ. ಇದಕ್ಕೆ ಆ್ಯಪಲ್ ಸಂಸ್ಥೆಯೇ ಕಾರಣ ಎಂದು ಹೇಳಿ ಅದರ ವಿರುದ್ಧ ಆ ವ್ಯಕ್ತಿ ಮೊಕದ್ದಮೆ ಹೂಡಿದ್ದಾರೆ.

ಸೆಕ್ಸ್ ವರ್ಕರ್ಸ್​ಗೆ ಕಳುಹಿಸಿ ಡಿಲೀಟ್ ಆಗಿದ್ದ ಗಂಡನ ಮೆಸೇಜ್ ನೋಡಿದ ಪತ್ನಿ; ಈಗ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ
ಡಿವೋರ್ಸ್ ಕೇಸ್
Follow us on

ಲಂಡನ್, ಜೂನ್ 17: ಆ್ಯಪಲ್​ನ ಐಫೋನ್​ಗಳು ಗೌಪ್ಯತೆಗೆ ಹೆಸರುವಾಸಿ. ಐಫೋನ್​ನಿಂದ ಡಿಲೀಟ್ ಮಾಡಲಾದ ಮೆಸೇಜ್ ಅಥವಾ ಫೋಟೋ, ವಿಡಿಯೋಗಳನ್ನು ಹಿಂಪಡೆಯಲು (retrieving messages) ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಈ ಕಾರಣಕ್ಕೆ ಬಹಳ ಜನರು ಐಫೋನ್ ಅನ್ನು ಇಚ್ಛಿಸುತ್ತಾರೆ. ಅದರ ಈ ಫೀಚರ್ ಕೈಕೊಟ್ಟರೆ..? ಗಂಭೀರ ಸ್ವರೂಪದ ತೊಂದರೆಗಳೇ ಆಗಬಹುದು. ಬ್ರಿಟನ್​ನ ವ್ಯಕ್ತಿಯೊಬ್ಬರಿಗೆ ಇಂಥದ್ದೊಂದು ಅನುಭವವಾಗಿದ್ದು, ಪತ್ನಿಯೇ ವಿಚ್ಛೇದನ (divorce) ಕೊಡುವ ಮಟ್ಟಕ್ಕೆ ಅನುಭವವಾಗಿದೆ. ಈಗ ಆ್ಯಪಲ್ ಸಂಸ್ಥೆ ವಿರುದ್ಧ ಮುನಿಸಿಕೊಂಡಿರುವ ಆ ಬ್ರಿಟನ್ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ನ್ಯಾಯದ ಮೊರೆ ಹೋಗಿದ್ದಾರೆ. ತಾನು ಡಿಲೀಟ್ ಮಾಡಿದ ಮೆಸೇಜ್ ಅನ್ನು ಹೆಂಡತಿ ನೋಡಿದ ಪರಿಣಾಮ ಡಿವೋರ್ಸ್ ಆಗುವಂತಾಗಿದೆ. ಇದಕ್ಕೆ ಆ್ಯಪಲ್ ಸಂಸ್ಥೆಯೇ ಕಾರಣ ಎಂದು ಆ ವ್ಯಕ್ತಿ ತನ್ನ ಮೊಕದ್ದಮೆಯಲ್ಲಿ (lawsuit against Apple) ದೂರಿದ್ದಾರೆ.

ಸೆಕ್ಸ್ ಕಾರ್ಯಕರ್ತೆಯರಿಗೆ ಕಳುಹಿಸಿದ್ದ ಟೆಕ್ಸ್ಟ್ ಮೆಸೇಜ್​ಗಳು…

ಆ್ಯಪಲ್ ವಿರುದ್ಧ ಮೊಕದ್ದಮೆ ಹಾಕಿರುವ ಬ್ರಿಟನ್​ನ ಈ ವ್ಯಕ್ತಿ ತನ್ನ ಐಫೋನ್​ನಲ್ಲಿನ ಐಮೆಸೇಜ್ ಆ್ಯಪ್​ನಲ್ಲಿ ವಿವಿಧ ವೈಶ್ಯೆಯರೊಂದಿಗೆ ಮೆಸೇಜ್ ವಿನಿಮಯ ಮಾಡಿಕೊಂಡಿರುತ್ತಾನೆ. ಬಳಿಕ ಆ ಮೆಸೇಜ್​ಗಳನ್ನು ಡಿಲೀಟ್ ಮಾಡಿರುತ್ತಾನೆ.

ಈ ಮೆಸೇಜ್​ಗಳನ್ನು ಆತನ ಹೆಂಡತಿ ಬೇರೊಂದು ಡಿವೈಸ್​ನಲ್ಲಿ ನೋಡಿಬಿಡುತ್ತಾಳೆ. ಈ ಘಟನೆಯಿಂದ ನೊಂದ ಆ ಮಹಿಳೆ ಗಂಡನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾಳೆ. ಆಕೆಗೆ ಐದು ಮಿಲಿಯನ್ ಪೌಂಡ್​ಗಳಷ್ಟು ಹಣವನ್ನು ಆ ವ್ಯಕ್ತಿ ಪರಿಹಾರವಾಗಿ ಕೊಡಬೇಕಾಗುತ್ತದೆ. ಐಮೆಸೇಜಿಂಗ್ ಆ್ಯಪ್​ನಿಂದ ಡಿಲೀಟ್ ಆಗಿದ್ದ ಮೆಸೇಜ್​ಗಳು ಪತ್ನಿಗೆ ಕಣ್ಣಿಗೆ ಬೀಳದೇ ಹೋಗಿದ್ದರೆ ತಾನು ಡಿವೋರ್ಸ್ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಹೋಗುತ್ತಿರಲಿಲ್ಲ ಎಂಬುದು ಇವರ ವಾದ.

ಇದನ್ನೂ ಓದಿ: 80ರ ವೃದ್ಧನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ, ಅಪರೂಪದ ಲವ್ ಸ್ಟೋರಿ 

ಡಿಲೀಟ್ ಆದ ಮೆಸೇಜ್ ಅನ್ನು ಪತ್ನಿ ನೋಡಿದ್ದು ಹೇಗೆ?

ಇವತ್ತು ವಿವಿಧ ಸಾಧನಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಸ್ಪರ ಕನೆಕ್ಟ್ ಮಾಡಬಹುದು. ಐಫೋನ್ ಅನ್ನು ಆ್ಯಪಲ್​ನ ಬೇರೆ ಬೇರೆ ಸಾಧನಗಳಿಗೆ ಸಿಂಕ್ರೊನೈಸ್ ಮಾಡಬಹುದು. ಬ್ರಿಟನ್​ನ ಈ ವ್ಯಕ್ತಿಯ ಐಫೋನ್ ಅನ್ನು ಆತನ ಕುಟುಂಬದ ಐಮ್ಯಾಕ್ ಸಿಸ್ಟಂಗೆ ಸಿಂಕ್ರೊನೈಸ್ ಮಾಡಲಾಗಿತ್ತು.

ಇಲ್ಲಿ ಆ ವ್ಯಕ್ತಿ ತನ್ನ ಮೊಬೈಲ್​ನಲ್ಲಿದ್ದ ಮೆಸೇಜ್ ಅನ್ನು ಡಿಲೀಟ್ ಮಾಡಿದಾಗ ಈತನ ಸಾಧನದಲ್ಲಿ ಮಾತ್ರವೇ ಅದು ಡಿಲೀಟ್ ಆಗಿತ್ತು. ಈತನ ಫೋನ್ ಜತೆ ಸಿಂಕ್ರೊನೈಸ್ ಆಗಿದ್ದ ಐಮ್ಯಾಕ್​ನಲ್ಲಿ ಆ ಮೆಸೇಜ್ ಡಿಲೀಟ್ ಆಗಿರಲಿಲ್ಲ. ಹೀಗಾಗಿ, ಐಮ್ಯಾಕ್​ನಲ್ಲಿ ಈತನ ಮೆಸೇಜ್​ಗಳನ್ನು ಪತ್ನಿಗೆ ಓದಲು ಸಾಧ್ಯವಾಯಿತು.

ಇದನ್ನೂ ಓದಿ: ಸಪ್ತಪದಿಗೂ ಮುನ್ನ ವಧುವಿನ ಮುಖ ನೋಡಿ ಮದುವೆ ಬೇಡ ಎಂದ ವರ

‘ಇಲ್ಲಿ ಮಾತ್ರವೇ ಡಿಲೀಟ್ ಆಗಿದೆ ಎಂದಿದ್ದರೆ ಎಚ್ಚೆತ್ತುಕೊಳ್ಳುತ್ತಿದ್ದೆ’

ಆ್ಯಪಲ್ ವಿರುದ್ಧ ದೂರು ಕೊಟ್ಟಿರುವ ವ್ಯಕ್ತಿ ವಾದ ಏನೆಂದರೆ, ತಾನು ಮೆಸೇಜ್ ಡಿಲೀಟ್ ಮಾಡಿದಾಗ, ಈ ಮೆಸೇಜ್ ಈ ಸಾಧನದಲ್ಲಿ ಮಾತ್ರವೇ ಡಿಲೀಟ್ ಆಗುತ್ತದೆ ಎಂದು ಎಚ್ಚರಿಸುವ ವಾರ್ನಿಂಗ್ ಬಂದಿದ್ದರೆ ಸಾಕಾಗುತ್ತಿತ್ತು, ಎಚ್ಚೆತ್ತುಕೊಳ್ಳುತ್ತಿದ್ದೆ. ಅಥವಾ, ಈ ಸಾಧನ ಸಿಂಕ್ ಆಗಿರುವ ಬೇರೆ ಡಿವೈಸ್​ಗಳಲ್ಲಿ ಮೆಸೇಜ್ ಲಭ್ಯ ಇರುತ್ತದೆ ಎಂದೂ ಎಚ್ಚರಿಸಬಹುದಿತ್ತು. ಆ್ಯಪಲ್ ಸಂಸ್ಥೆಯಿಂದ ತನಗೆ ಬಹಳ ಹಾನಿಯಾಗಿದೆ ಎಂದು ಆ ವ್ಯಕ್ತಿ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದೀಗ ಅದು ಕ್ಲ್ಯಾಸ್ ಆ್ಯಕ್ಷನ್ ಮೊಕದ್ದಮೆಯಾಗಿ ತಿರುಗಿದ್ದು, ಆ್ಯಪಲ್ ವಿರುದ್ಧ ಇಂಥ ಅಸಮಾಧಾನ ಇರುವವರು ಕೈಜೋಡಿಸಬಹುದಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ