ಮುಂಬೈನಲ್ಲಿ ಬಾಂಬೆ ಸ್ಯಾಂಡ್​​​ವಿಜ್​, ಚಿಲ್ಲಿ ಐಸ್​ಕ್ರಿಮ್​​ ಸವಿದ ಬ್ರಿಟಿಷ್​​ ಹೈ ಕಮಿಷನರ್​​: ಫೋಟೋ ವೈರಲ್​

| Updated By: ವಿವೇಕ ಬಿರಾದಾರ

Updated on: Jan 14, 2023 | 10:31 AM

ಬ್ರಿಟೀಷ್​​ ಹೈ ಕಮಿಷನರ್ ಅಲೇಕ್ಸ್​​ ಎಲ್ಲೀಸ್​​ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್​​ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್​​ ಅನ್ನು ಸೇವಿಸಿದ್ದಾರೆ.

ಮುಂಬೈನಲ್ಲಿ ಬಾಂಬೆ ಸ್ಯಾಂಡ್​​​ವಿಜ್​, ಚಿಲ್ಲಿ ಐಸ್​ಕ್ರಿಮ್​​ ಸವಿದ ಬ್ರಿಟಿಷ್​​ ಹೈ ಕಮಿಷನರ್​​: ಫೋಟೋ ವೈರಲ್​
Follow us on

ವಿದೇಶಿಗರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿ ಇಲ್ಲಿನ ವಸ್ತುಗಳು ಮತ್ತು ಬೀದಿ ಬದಿಯ ತಿಂಡಿ-ತಿನಿಸುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಂತೆ ಬ್ರಿಟೀಷ್​​ ಹೈ ಕಮಿಷನರ್​​  (British high commissioner)​​ ಅಲೇಕ್ಸ್​​ ಎಲ್ಲೀಸ್ ಅವರು​​ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್​​ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್​​ ಅನ್ನು ಸೇವಿಸಿದ್ದಾರೆ. ಈ ಕುರಿತು ಬ್ರಿಟೀಷ್​​ ಹೈ ಕಮಿಷನರ್​​ ಅಲೇಕ್ಸ್​​ ಎಲ್ಲೀಸ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಫೋಟೋ ಶೇರ್​​ ಮಾಡಿ, “ಬ್ಯಾಚುಲರ್ಸ್​​ ಅಂಗಡಿಯಲ್ಲಿ ಮುಂಬೈನವನಾಗಿಯೇ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್ ಸವಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮರಾಠಿಯಲ್ಲಿ “ಬಂದು ಸೇವಿಸಿ” ಎಂದು ಬರೆದುಕೊಂಡಿದ್ದಾರೆ.

ಇವರ ಟ್ವಿಟ್​ಗೆ, ಟ್ವಿಟರ್​​ ಬಳಕೆದಾರರೊಬ್ಬರು ಕಾಮೆಂಟ್​ ಮಾಡಿ ಈಸ್ಟ್​ ಆರ್​ ವೆಸ್ಟ್​​ ಇಂಡಿಯಾ ಇಸ್​ ದಿ ಬೆಸ್ಟ್​​.. ಭಾರತೀಯ ಸ್ವಾದವೇ ಹಾಗೆ ಬ್ರಿಟೀಷರಿಗೂ ಹಿಂದಿಯಲ್ಲಿ ಬರೆಯುವಂತೆ ಮಾಡುತ್ತದೆ ಎಂದಿದ್ದಾರೆ. ಇನ್ನೊಬ್ಬರು ಚಿಲ್ಲಿ ಐಸ್​ ಕ್ರೀಂ ಇಸ್​ ಬೆಸ್ಟ್​​ ಎಂದು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Sat, 14 January 23