74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು: ವಿಡಿಯೋ ವೈರಲ್​

| Updated By: Pavitra Bhat Jigalemane

Updated on: Jan 13, 2022 | 10:37 AM

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ 1947ರಲ್ಲಿ ಪಾಕಿಸ್ತಾನ ಮತ್ತು ಮತ್ತು ಭಾರತ ವಿಭಜನೆಯಾಗಿತ್ತು ಈ ವೇಳೆ ಬೇರೆಯಾದ ಸಹೋದರರಿಬ್ಬರು ಇದೀಗ ಮತ್ತೆ ಒಂದಾಗಿದ್ದಾರೆ.

74  ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು: ವಿಡಿಯೋ ವೈರಲ್​
ಮೊಹಮದ್​​ ಸಿದ್ದಿಕಿ ಮತ್ತು ಹಬೀಬ್​
Follow us on

74 ವರ್ಷಗಳ ಬಳಿಕ ಸಹೋದರರಿಬ್ಬರು ಭೇಟಿಯಾದ ಅಪರೂಪದ ಘಟನೆ ನಡೆದಿದೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಹೃದಯಸ್ಪರ್ಶಿ ಕ್ಷಣ ನೋಡಿ ನೆಟ್ಟಿಗರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ 1947ರಲ್ಲಿ ಪಾಕಿಸ್ತಾನ ಮತ್ತು ಮತ್ತು ಭಾರತ ವಿಭಜನೆಯಾಗಿತ್ತು ಈ ವೇಳೆ ಬೇರೆಯಾದ ಸಹೋದರರಿಬ್ಬರು ಇದೀಗ ಮತ್ತೆ ಒಂದಾಗಿದ್ದಾರೆ. ಮೊಹಮದ್​​ ಸಿದ್ದಿಕಿ ಮತ್ತು ಹಬೀಬ್​ ಎನ್ನುವ ಸಹೋದರರು ಬೇರೆ ಬೇರೆಯಾಗಿ ಒಬ್ಬರು ಪಾಕಿಸ್ತಾನದಲ್ಲಿ ಇನ್ನೊಬ್ಬರು ಭಾರತದಲ್ಲಿ ವಾಸಿಸುತ್ತಿದ್ದರು. ಇದೀಗ ಇಬ್ಬರೂ ಒಂದಾಗಿದ್ದಾರೆ.

ವಿಡಿಯೋದಲ್ಲಿ 74 ವರ್ಷಗಳ ಬಳಿಕ ಮೊಹಮ್ಮದ್​ ಮತ್ತು ಹಬೀಬ್​  ಭೇಟಿಯಾದ ಸಂದರ್ಭದಲ್ಲಿ ಪರಸ್ಪರ ಅಪ್ಪಿಕೊಂಡು, ಖುಷಿಯಲ್ಲಿ ಕಣ್ಣಾಲಿಗಳು ಒದ್ದೆಯಾದ ದೃಶ್ಯವನ್ನು ಕಾಣಬಹುದು. 1947ರಲ್ಲಿ ಭಾರತ ವಿಭಜನೆಯಾದಾಗ ಚಿಕ್ಕ ಮಗುವಾಗಿದ್ದ ಮೊಮ್ಮದ್​ ಸಿದ್ದಿಕಿ ಭಾರತದಿಂದ ದೂರವಾಗಿ ಪಾಕಿಸ್ತಾನದ ಫೈಸ್ಲಾಬಾದ್​ನಲ್ಲಿ ವಾಸಿಸುತ್ತಿದ್ದರು. ಹಬೀಬ್ ಅಲಿಯಾಸ್​ ಶೇಲಾ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತದ ಭೂಮಿಯಲ್ಲಿ ವಾಸಿಸುತ್ತಿದ್ದರು. ಇದೀಗ ಕರ್ತಾರ್‌ಪುರ ಕಾರಿಡಾರ್​ನಲ್ಲಿ ಇಬ್ಬರೂ ಒಂದಾಗಿದ್ದಾರೆ. ಕರ್ತಾರ್‌ಪುರ ಕಾರಿಡಾರ್ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಅನ್ನು ಭಾರತಕ್ಕೆ ಸಂಪರ್ಕಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ನೆಟ್ಟಿಗರ ಮನಗೆದ್ದದೆ. ವಿಡಿಯೋ ಟ್ವಿಟರ್​ನಲ್ಲಿ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಬಳಕೆದಾರರು ತಮ್ಮವರಿಂದ ದೂರವಾಗಿ ಮತ್ತೆ ಒಂದಾದ ಸಂದರ್ಭಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

325 ಗ್ರಾಂ ತೂಕವಿರುವ ಶಿಶುವಿಗೆ ಜನ್ಮ ನೀಡಿದ 17ರ ಬಾಲಕಿ