ಕೆಲಸ ಬೋರಿಂಗ್​ ಇದೆ ಎಂದು ಕಂಪನಿ ವಿರುದ್ದ ಮೊಕದ್ದಮೆ ಹೂಡಿ 33 ಲಕ್ಷ ರೂ ಪರಿಹಾರ ಪಡೆದ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ಕಂಪನಿ ನೀಡಿರುವ ಜಾಬ್​ ಬೋರಿಂಗ್​ ಆಗಿದೆ ಎಂದು ಕಂಪನಿಯ ವಿರುದ್ಧವೇ ದೂರು ನೀಡಿ 33 ಲಕ್ಷ ರೂ ಪರಿಹಾರ ಪಡೆದಿದ್ದಾನೆ. 

ಕೆಲಸ ಬೋರಿಂಗ್​ ಇದೆ ಎಂದು ಕಂಪನಿ ವಿರುದ್ದ ಮೊಕದ್ದಮೆ ಹೂಡಿ 33 ಲಕ್ಷ ರೂ ಪರಿಹಾರ ಪಡೆದ ವ್ಯಕ್ತಿ
ಸಾಂಕೇತಿಕ ಚಿತ್ರ

ಉದ್ಯೋಗ ಎಲ್ಲರಿಗೂ ಬೇಕು. ಆದರೆ ಎಷ್ಟು ಜನ ತಾವು ಮಾಡುವ ಉದ್ಯೋಗದಲ್ಲಿ ತೃಪ್ತಿಯಿಂದ  ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮುಖ್ಯ. ಕೆಲವರು ಅನಿವಾರ್ಯವಾಗಿ ಕೆಲಸಕ್ಕೆ ಸೇರಿಕೊಂಡಿರಬಹುದು. ಅದು ಹಣದ ಅವಶ್ಯಕೆಯಿರಬಹುದು ಅಥವಾ ಇನ್ನಿತರ ಕಾರಣಗಳಿರಬಹುದು. ಇಷ್ಟವಿಲ್ಲದ ಕೆಲಸವನ್ನು ಕಷ್ಟವಾದರೂ ಮಾಡುತ್ತಾ ದಿನದೂಡುವವವರು ಸಾಕಷ್ಟು ಜನ ಸಿಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಂಪನಿ ನೀಡಿರುವ ಜಾಬ್​ ಬೋರಿಂಗ್​ ಆಗಿದೆ ಎಂದು ಕಂಪನಿಯ ವಿರುದ್ಧವೇ ದೂರು ನೀಡಿ 33 ಲಕ್ಷ ರೂ ಪರಿಹಾರ ಪಡೆದಿದ್ದಾನೆ. 

ಪ್ರೆಡ್ರಿಕ್​ ಡೆಸ್ನಾರ್ಡ್​ ಎನ್ನುವ ವ್ಯಕ್ತಿಯನ್ನು  ಇಂಟರ್ ಪರ್​ಫ್ಯೂಮ್​ ಎನ್ನುವ ಕಾಸ್ಮೆಟಿಕ್ಸ್​ ಮತ್ತು ಸುಗಂಧ ದ್ರವ್ಯ ತಯಾರಿಕೆ ಕಂಪನಿಯಲ್ಲಿ ಮಾನ್ಯೇಜರ್​ ಆಗಿ ನೇಮಕ ಮಾಡಲಾಗಿತ್ತು. ಪ್ಯಾರಿಸ್​ ಮೂಲದ ಫ್ರೆಡ್ರಿಕ್​ ಕಳೆದ ನಾಲ್ಕು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದರು. ಕಂಪನಿಯಲ್ಲಿ ಮ್ಯಾನೇಜರ್​ ಆಗಿದ್ದ ವ್ಯಕ್ತಿ ಕೆಲಸ ಬಿಟ್ಟ ಕಾರಣ ಇವರನ್ನು ಆ ಜಾಗಕ್ಕೆ ನೇಮಕ ಮಾಡಲಾಗಿತ್ತು. ಕೆಲಸದ ಒತ್ತಡದಿಂದ ಕಂಗೆಟ್ಟಿದ್ದ ಪ್ರೆಡ್ರಿಕ್​ ​ ಕೆಲಸ ಬೋರ್​ ಆಗಿದೆ. ನನ್ನ ಮಾನಸಿಕ ಆರೋಗ್ಯವೂ ಹಾಳಾಗಿದೆ. ಕೆಲಸ ನನಗೆ ಕಿರುಕುಳ ಎನಿಸುತ್ತದೆ ಎಂದು 4 ವರ್ಷಗಳ ಹಿಂದೆ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿ,  33 ಲಕ್ಷ ರೂ ಪರಿಹಾರ ನೀಡುವಂತೆ ಕೇಳಿದ್ದರು.

ನಾಲ್ಕು ವರ್ಷಗಳ ಹಿಂದೇಯೇ ಅವರು ಕೇಸ್​ ಅನ್ನು ಗೆದ್ದಿದ್ದರು. ಈ ನಡುವೆ ಫ್ರೆಡ್ರಿಕ್​ ಅಪಘಾತದಿಂದ ಗಾಯಗೊಂಡ ಕಾರಣ ಸಂಸ್ಥೆಯೂ ಕೆಲಸದಿಂದ ವಜಾ ಮಾಡಿತ್ತು.  ನ್ಯಾಯಾಲಯದಲ್ಲಿ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಸಂಸ್ಥೆ ನಡೆದುಕೊಳ್ಳುವುದು ಒಂದು ರೀತಿಯ ಕಿರುಕುಳ ನೀಡಿದಂತೆ ಎಂದು ಪರಿಗಣಿಸಿ ಪ್ರೆಡ್ರಿಕ್​ ಕೇಳಿದ 33 ಲಕ್ಷ ರೂ. ಪರಿಹಾರ ಅವರಿಗೆ ದೊರಕುವಂತೆ ಮಾಡಿದೆ. ಈ ಕುರಿತು ಟೆಲಿಗ್ರಾಫ್​ ಸುದ್ದಿ ಸಂಸ್ಥೆ ವರದಿ  ಮಾಡಿದೆ.

ಇದನ್ನೂ ಓದಿ:

10 ವರ್ಷದಲ್ಲಿ 800 ಮಕ್ಕಳ ತಂದೆಯಾದ ಹಾಲು ಮಾರಾಟಗಾರ : ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಯ್ತು ನಿಜಾಂಶ

Click on your DTH Provider to Add TV9 Kannada