10 ವರ್ಷದಲ್ಲಿ 800 ಮಕ್ಕಳ ತಂದೆಯಾದ ಹಾಲು ಮಾರಾಟಗಾರ : ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಯ್ತು ನಿಜಾಂಶ

ಪ್ಯಾಕ್​ ಮಾಡಿದ ಹಾಲಿನ ಪೆಟ್ಟಿಗೆಗಳು ಇಲ್ಲದ ಕಾರಣ ರಾಂಡಾಲ್​ ಸಾನ್​ ಡಿಗಿಯೋ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಹಾಲು ಮಾರಾಟ ಮಾಡುತ್ತಿದ್ದನು. ಈ ವೇಳೆ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು ಎಂದು ವರದಿಯಾಗಿದೆ.

10 ವರ್ಷದಲ್ಲಿ 800 ಮಕ್ಕಳ ತಂದೆಯಾದ ಹಾಲು ಮಾರಾಟಗಾರ : ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಯ್ತು ನಿಜಾಂಶ
ರಾಂಡಾಲ್​
Follow us
TV9 Web
| Updated By: Pavitra Bhat Jigalemane

Updated on:Jan 13, 2022 | 11:25 AM

ಕ್ಯಾಲಿಪೋರ್ನಿಯಾ: ವಿಜ್ಞಾನ ಎಂತಹ ಸತ್ಯವನ್ನೂ ಹೊರತೆಗೆಯುತ್ತದೆ. ಇದೀಗ ದಕ್ಷಿಣ ಕ್ಯಾಲಿಪೋರ್ನಿಯಾದ ಹಾಲು ಮಾರಾಟಗಾರನೊಬ್ಬ 800 ಮಕ್ಕಳ ತಂದೆ ಎನ್ನುವ ಸತ್ಯವೊಂದು ಡಿಎನ್​ಎ ಟೆಸ್ಟ್​ನಲ್ಲಿ ಬಯಲಾಗಿದೆ. ಈ ಕುರಿತು ಡೈಲಿ ಮೇಲ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. 1950 ರಿಂದ 1960ರ ಅವಧಿಯಲ್ಲಿ ರಾಂಡಾಲ್​ ಎನ್ನುವ ವ್ಯಕ್ತಿ ಮನೆಮನೆಗೆ ಹಾಲು ಮಾರಾಟ ಮಾಡುತ್ತಿದ್ದನು. ಆಗಿನ ಸಂದರ್ಭದಲ್ಲಿ ಪ್ಯಾಕ್​ ಮಾಡಿದ ಹಾಲಿನ ಪೆಟ್ಟಿಗೆಗಳು ಇಲ್ಲದ ಕಾರಣ ರಾಂಡಾಲ್​ ಸಾನ್​ ಡಿಗಿಯೋ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಹಾಲು ಮಾರಾಟ ಮಾಡುತ್ತಿದ್ದನು. ಈ ವೇಳೆ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು ಎಂದು ವರದಿಯಾಗಿದೆ.

ಹಾಲು ಮಾರಾಟ ಮಾಡಲು ಹೋದ ವೇಳೆ ರಾಂಡಾಲ್​ ಗೃಹಿಣಿಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದನು. ನೋಡಲು ಆಕರ್ಷಕವಾಗಿದ್ದ ರಾಂಡಾಲ್​ನಲ್ಲಿ ಮಹಿಳೆಯರು ಒಲಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಮಹಿಳೆಯರು ಸಿಹಿ ತಿಂಡಿಗಳನ್ನು ಆತನಿಗೆ ನೀಡುತ್ತಿದ್ದರು ಎನ್ನಲಾಗಿದ್ದು, ಹಲವು ಸೈನಿಕರ ಪತ್ನಿಯರ ಜೀವನದಲ್ಲಿ ರಾಂಡಾಲ್​ ಸ್ಥಿರ ವ್ಯಕ್ತಿಯಾಗಿದ್ದ ಎನ್ನಲಾಗಿದೆ.  ಆ ಕಾಲದಲ್ಲಿ ಯಾವುದೇ ರೀತಿಯ ತಂತ್ರಜ್ಞಾನದ ಬಳಕೆ ಇಲ್ಲದ ಕಾರಣ ಅಕ್ರಮ ಸಂಬಂಧಗಳು ಹೊರಜಗತ್ತಿಗೆ ತಿಳಿಯುತ್ತಿರಲಿಲ್ಲ.

ಆದರೆ ಇದು ಹೊಸದೊಂದು ಸಮಸ್ಯೆಯನ್ನು ಹುಟ್ಟುಹಾಕಿತ್ತು. ಮಹಿಳೆಯರಿಗೆ ಜನಿಸಿದ ಮಕ್ಕಳು ಬೇರೆ ಬೇರೆ ರೀತಿಯ ಮೈಬಣ್ಣ, ವಿಭಿನ್ನ ರೀತಿಯ ಕೂದಲಿನ ಹೋಲಿಕೆಯನ್ನು ಹೊಂದಿದ್ದರು. ಇದರಿಂದ ಸ್ಯಾನ್​ ಡಿಗಿಯೋ ಪ್ರದೇಶದಲ್ಲಿ ಡಿಎನ್​ಎ ಟೆಸ್ಟ್​ ವಿವಾದವನ್ನೇ ಸೃಷ್ಟಿಸಿತ್ತು. ಟೆಸ್ಟ್​ನಲ್ಲಿ ಎಲ್ಲಾ ಮಕ್ಕಳು ಅವರ ತಂದೆಯ ರಕ್ತ ಸಂಬಂಧವನ್ನು ಹೊಂದಿಲ್ಲ ಎನ್ನುವುದು ದೃಢಪಟ್ಟಿತ್ತು. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಈ ವೇಳೆ  ವಿಜ್ಞಾನಿಗಳು ರಾಂಡಾಲ್​ ಅವರ ಡಿಎನ್​ಎ ಪರೀಕ್ಷೆ ಮಾಡಿದಾಗ ನಂಬಲಾಗದ ಸತ್ಯ ಹೊರಬಿದ್ದಿತ್ತು. ನೂರಾರು ಪರೀಕ್ಷೆಗಳ ನಂತರ 800ಕ್ಕೂ ಹೆಚ್ಚು ಮಕ್ಕಳ ಡಿಎನ್​ಎ ರಾಂಡಾಲ್​ ಡಿಎನ್​ಎಗೆ ಮ್ಯಾಚ್​ ಆಗುತ್ತಿತ್ತು. ಇದನ್ನು ನೋಡಿ ವಿಜ್ಞಾನಿಗಳೇ ಶಾಕ್​ ಆಗಿದ್ದಾರೆ.

ಈ ಬಗ್ಗೆ 97ರ ಹರೆಯದ ರಾಂಡಾಲ್​ ನನಗೆ ಹೆಂಡತಿ ಮಕ್ಕಳಿಲ್ಲದ ಒಂಟಿ ಜೀವ ಎಂದುಕೊಂಡಿದ್ದೆ. ಎಂಮತಹ ಆಶೀರ್ವಾದ ಸಿಕ್ಕಿದೆ. ನನಗೆ ತೃಪ್ತಿಯಾಗಿದೆ. ಎಲ್ಲ ಮಕ್ಕಳನ್ನು ಭೇಟಿಯಾಗಲು ಕಾಯುತ್ತಿದ್ದೇನೆ ಎಂದಿದ್ದಾರೆ ಎಂದು ಡೈಲಿ ಮೇಲ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:

ನೆಲಬಾಂಬ್​ಗಳನ್ನು ಪತ್ತೆ ಮಾಡುತ್ತಿದ್ದ ಗೋಲ್ಡ್​ ಮೆಡಲಿಸ್ಟ್​ ಇಲಿ ‘ಮಾಗ್ವಾ’ ಇನ್ನು ನೆನಪು ಮಾತ್ರ

Published On - 11:22 am, Thu, 13 January 22