ವಿಶೇಷವಾಗಿ ತಂದೆಯನ್ನು ಕಳೆದುಕೊಂಡ ಮಕ್ಕಳು ಕುಟುಂಬದ ಜವಬ್ದಾರಿಯನ್ನು ತಾವೇ ಹೊರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗೆ ಅದೆಷ್ಟೋ ಜನರು ಜವಬ್ದಾರಿಯ ಕಾರಣದಿಂದಾಗಿ ತಮ್ಮ ಓದನ್ನು ಕೂಡಾ ಅರ್ಧಕ್ಕೆ ಬಿಟ್ಟು ಕಷ್ಟಪಟ್ಟು ಕೆಲಸ ಮಾಡಿ ತಮ್ಮ ಕುಟುಂಬವನ್ನು ಸಂತೋಷದಿಂದ ನೋಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ತಂದೆಯನ್ನು ಕಳೆದುಕೊಂಡಂತಹ 10 ವರ್ಷ ವಯಸ್ಸಿನ ಬಾಲಕನೂ ಕೂಡಾ ಓದಿನ ಜೊತೆ ಜೊತೆಗೆ ಸಂಜೆ ಹೊತ್ತಿನಲ್ಲಿ ದೆಹಲಿಯ ಬೀದಿ ಬದಿಯಲ್ಲಿ ಎಗ್ ರೋಲ್ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾನೆ. ಇತನ ಕಷ್ಟದ ಹಾದಿ, ನೋವಿನ ಕಥೆಯನ್ನು ಕೇಳಿ ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಆತನ ಸಹಾಯಕ್ಕೆ ಧಾವಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ದೆಹಲಿ ಬೀದಿ ಬದಿಯಲ್ಲಿ ಎಗ್ ರೋಲ್ ಮಾರಾಟ ಮಾಡುವ ಈ ಹುಡುಗನ ಹೆಸರು ಜಸ್ಪ್ರೀತ್. 10 ವರ್ಷ ವಯಸ್ಸಿನ ಈ ಹುಡುಗ ಎಲ್ಲಾ ಮಕ್ಕಳಂತೆ ಶಾಲೆಯಿಂದ ಬಂದು ಆಟವಾಡುತ್ತಾ ತನ್ನ ಬಾಲ್ಯವನ್ನು ಎಂಜಾಯ್ ಮಾಡದೆ, ಶಾಲೆಯಿಂದ ಬಂದ ತಕ್ಷಣ ಬೀದಿ ಬದಿಯಲ್ಲಿ ಎಗ್ ರೋಲ್ ಮತ್ತು ಚಿಕನ್ ರೋಲ್ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾನೆ. ಈ ಬಾಲಕ ಮನಕಲುಕುವ ಸ್ಟೋರಿಯನ್ನು ಫುಡ್ ವ್ಲೋಗರ್ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಂದೆಯ ನಿಧನದ ಬಳಿಕ ತಾಯಿ ಕೂಡಾ ಜಸ್ಪ್ರೀತ್ ಮತ್ತು ಈತನ ಸಹೋದರಿಯನ್ನು ಬಿಟ್ಟು ಪಂಜಾಬ್ ಗೆ ಹೋಗಿದ್ದು, ಇದೀಗ ಬೀದಿ ಬದಿಯಲ್ಲಿ ಎಗ್ ರೋಲ್ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದೇವೆ ಎಂದು ಬಾಲಕ ತನ್ನ ಕಷ್ಟವನ್ನು ಹೇಳಿಕೊಂಡಿದ್ದ. ಇದೀಗ ನೋವಿನ ಕಥೆಯನ್ನು ಆಲಿಸಿದ ಉದ್ಯಮಿ ಆನಂದ್ ಮಹೀಂದ್ರಾ ಅವರು ಈ ಬಾಲಕ ಸಹಾಯಕ್ಕೆ ಮುಂದಾಗಿದ್ದಾರೆ.
Courage, thy name is Jaspreet.
But his education shouldn’t suffer.
I believe, he’s in Tilak Nagar, Delhi. If anyone has access to his contact number please do share it.
The Mahindra foundation team will explore how we can support his education.
— anand mahindra (@anandmahindra) May 6, 2024
ಈ ಕುರಿತ ವಿಡಿಯೋವೊಂದನ್ನು ಆನಂದ್ ಮಹೀಂದ್ರಾ ಅವರು ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಧೈರ್ಯವಂತ ಬಾಲಕನ ಶಿಕ್ಷಣಕ್ಕಾಗಿ ನಾವು ಸಹಾಯ ಮಾಡುತ್ತೇವೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಬೀದಿ ಬದಿಯಲ್ಲಿ ಎಗ್ ರೋಲ್ ಮಾರಾಟ ಮಾಡುತ್ತಿರುವ ಬಾಲಕ ಫುಡ್ ಬ್ಲಾಗರ್ ಒಬ್ಬರ ಬಳಿ ತನ್ನ ನೋವಿನ ಕಥೆಯನ್ನು ಹಂಚಿಕೊಳ್ಳುತ್ತಿರುವಂತಹ ಮನಕಲಕುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ವಿಧವೆಯರ ಗ್ರಾಮ;ಮದುವೆಯಾದ ಕೆಲವೇ ದಿನಗಳಲ್ಲಿ ಇಲ್ಲಿ ಪುರುಷರು ಸಾಯುತ್ತಾರೆ!
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆನಂದ್ ಮಹೀಂದ್ರಾ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ