4ನೇ ಹಂತದ ಕ್ಯಾನ್ಸರ್​​ ವಿರುದ್ಧ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆ; ಕೆಲಸಕ್ಕೆ ಬರುವಂತೆ ಬಾಸ್​​ ಆರ್ಡರ್

|

Updated on: Apr 16, 2024 | 10:40 AM

ಇಲ್ಲೊಂದು ಕಂಪೆನಿ 4ನೇ ಹಂತದ ಕ್ಯಾನ್ಸರ್​​ ವಿರುದ್ಧ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆಯನ್ನು ಕೆಲಸಕ್ಕೆ ಆಫೀಸಿಗೆ ಬರುವಂತೆ ಇಮೇಲ್​ ಮೂಲಕ ಸಂದೇಶ ಕಳುಹಿಸಲಾಗಿದೆ. ಸದ್ಯ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

4ನೇ ಹಂತದ ಕ್ಯಾನ್ಸರ್​​ ವಿರುದ್ಧ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆ; ಕೆಲಸಕ್ಕೆ ಬರುವಂತೆ ಬಾಸ್​​ ಆರ್ಡರ್
Follow us on

ಕ್ಯಾನ್ಸರ್ ಎಂದಾಕ್ಷಣ ಒಂದು ಕ್ಷಣ ಜೀವವೇ ಹೋದಂತೆ ಭಯ ಹುಟ್ಟಿಕೊಳ್ಳುತ್ತದೆ. ಯಾಕೆಂದ್ರೆ ಈ ಕಾಯಿಲೆ ಕಾಣಿಸಿಕೊಂಡ ಮೇಲೆ, ಸಾವು ಖಚಿತ ಎನ್ನುವ ಆಲೋಚನೆ ನಮ್ಮದು. ಕ್ಯಾನ್ಸರ್​​ ವಿರುದ್ಧ ಹೋರಾಟ ನಡೆಸುವ ರೋಗಿಗಳಿಗೆ ಸಾಕಷ್ಟು ಆರೈಕೆ ಹಾಗೂ ಧೈರ್ಯ, ಬೆಂಬಲ ನೀಡುವವರ ಅಗತ್ಯವಿರುತ್ತದೆ. ಆದರೆ ಇಲ್ಲೊಂದು ಕಂಪೆನಿ 4ನೇ ಹಂತದ ಕ್ಯಾನ್ಸರ್​​ ವಿರುದ್ಧ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆಯನ್ನು ಕೆಲಸಕ್ಕೆ ಆಫೀಸಿಗೆ ಬರುವಂತೆ ಇಮೇಲ್​ ಮೂಲಕ ಸಂದೇಶ ಕಳುಹಿಸಲಾಗಿದೆ. ಈಕೆ ಐರ್ಲೆಂಡ್‌ನ ಅಂಗಡಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ತಿಂಗಳುಗಳಿಂದ ಆನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕ್ಯಾನ್ಸರ್​​ನಿಂದ ಬಳಲುತ್ತಿರುವ ಮಹಿಳೆಯನ್ನು ಕೆಲಸಕ್ಕೆ ಬರುವಂತೆ ಆರ್ಡರ್​​​ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಅನಾರೋಗ್ಯದ ತಾಯಿಯನ್ನು ಕೆಲಸಕ್ಕೆ ಮರಳುವಂತೆ ಹೇಗೆ ಒತ್ತಡ ಹೇರುತ್ತಿದ್ದಾರೆ ಎಂಬುದನ್ನು ಮಹಿಳೆಯ ಮಗಳು ಸೋಶಿಯಲ್​ ಮೀಡಿಯಾದಲ್ಲಿ ಈ ಕಹಿ ಘಟನೆಯನ್ನು ಹಂಚಿಕೊಂಡಿದ್ದಾಳೆ. ID @disneydoll96 ಮೂಲಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ 50 ವರ್ಷದ ತಾಯಿ ಕಳೆದ 18 ತಿಂಗಳುಗಳಿಂದ 4ನೇ ಹಂತದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ತಾಯಿ ಕೆಲಸ ಮಾಡುವ ಕಂಪನಿಯ ಬಾಸ್ ಗೂ ಅಮ್ಮನ ಸ್ಥಿತಿ ಗೊತ್ತಿದೆ. ಆದರೆ ಬಾಸ್ ತನ್ನ ತಾಯಿಯನ್ನು ಆಫೀಸಿಗೆ ಬರುವಂತೆ ಆರ್ಡರ್​ ಮಾಡಿದ್ದಾನೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?

ನನ್ನ ತಾಯಿ ಐರ್ಲೆಂಡ್‌ನ ಅಂಗಡಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ತಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ, ತನ್ನ ತಾಯಿ ಕ್ಯಾನ್ಸರ್‌ನಿಂದ ಬೇಗ ಗುಣಮುಖರಾಗಲು ಎಂದು ನಾನು ಬಯಸುತ್ತೇನೆ ಎಂದು ಯುವತಿ ಪೋಸ್ಟ್​​ ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: