Viral Video: ಹಾವು ಹಿಡಿಯುವುದು ಎಷ್ಟು ಸುಲಭ, ಆದರೆ ನೀವು ಹೀಗೆ ಮಾಡಬೇಡಿ
ಮನೆ ಬಳಿ ಅಥವಾ ಮನೆಯ ಒಳಗೆ ಬರುವಂತಹ ಹಾವುಗಳನ್ನು ಸಾಯಿಸದೆ ಉರಗ ತಜ್ಞರು ಅವುಗಳನ್ನು ಸುರಕ್ಷಿತವಾಗಿ ಹಿಡಿದು ಅವುಗಳನ್ನು ಕಾಡಿಗೆ ಬಿಟ್ಟುಬರುತ್ತಾರೆ. ಸಾಮಾನ್ಯವಾಗಿ ಉರಗ ತಜ್ಞರು ಹಾವುಗಳನ್ನು ಬರಿಗೈಯಲ್ಲಿ ಹಿಡಿಯುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಸುರಕ್ಷಿತ ವಿಧಾನದ ಮೂಲಕ ಪ್ಲಾಸ್ಟಿಕ್ ಡಬ್ಬದಲ್ಲಿ ಸಲೀಸಾಗಿ ಹಾವನ್ನು ಹಿಡಿದಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಮನೆಗಳ ಬಳಿ ಆಗಾಗ್ಗೆ ಹಾವು ಕಾಣಿಸಿಕೊಳ್ಳುವುದು ಹೊಸದಲ್ಲ. ಹಾವುಗಳು ಮನೆಯೊಳಗೆ ಬಂದಾಗ ಜನ ಭೀತಿಗೊಳ್ಳುತ್ತಾರೆ. ಹೀಗೆ ಮನೆಯೊಳಗೆ ಅಥವಾ ಮನೆ ಬಳಿ ಬಂದ ಹಾವುಗಳನ್ನು ಹೊಡೆದು ಸಾಯಿಸದೆ ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುತ್ತಾರೆ. ಸಾಮಾನ್ಯವಾಗಿ ಉರಗ ತಜ್ಞರು ಹಾವುಗಳನ್ನು ಕೈಯಲ್ಲಿ ಹಿಡಿಯುತ್ತಾರೆ. ಹೀಗೆ ಹಾವುಗಳನ್ನು ಬರಿಗೈಯಲ್ಲಿ ಹಿಡಿಯುವಂತಹ ಸಂದರ್ಭದಲ್ಲಿ ಕೆಲವೊಮ್ಮೆ ಹಾವುಗಳು ಕೈಗೆ ಕಚ್ಚುಂತಹ ಸಾಧ್ಯತೆ ಇರುತ್ತದೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ಢಿಫರೆಂಟ್ ಆಗಿ ಪ್ಲಾಸ್ಟಿಕ್ ಡಬ್ಬದಲ್ಲಿ ಸಲೀಸಾಗಿ ಹಾವನ್ನು ಹಿಡಿದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು @InternetH0f ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪ್ಲಾಸ್ಟಿಕ್ ಜಾರ್ ಅಲ್ಲಿ ಹಾವನ್ನು ಹಿಡಿದ ವ್ಯಕ್ತಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
man catches snake in plastic jar pic.twitter.com/meekqHQIAF
— internet hall of fame (@InternetH0F) April 15, 2024
ವೈರಲ್ ವಿಡಿಯೋದಲ್ಲಿ ಯಾರದ್ದೋ ಮನೆ ಪಕ್ಕ ಬಂದಂತಹ ಸಣ್ಣ ಗಾತ್ರದ ಹಾವೊಂದನ್ನು ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿಯುವ ಬದಲು ಸುರಕ್ಷತೆಯ ದೃಷ್ಟಿಯಿಂದ ಪ್ಲಾಸ್ಟಿಕ್ ಡಬ್ಬದ ಸಹಾಯದಿಂದ ಬಹಳ ಬುದ್ಧಿವಂತಿಕೆಯಿಂದ ಹಿಡಿಯುವಂತಹ ದೃಶ್ಯವನ್ನು ಕಾಣಬಹುದು. ಪ್ಲಾಸ್ಟಿಕ್ ಡಬ್ಬದಲ್ಲಿ ಹಾವನ್ನು ಸೆರೆ ಹಿಡಿದ ಬಳಿಕ, ಆ ಡಬ್ಬವನ್ನು ಮುಚ್ಚಳದಿಂದ ಮುಚ್ಚಿ ನಂತರ ಹಾವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟ ಬಂದಿದ್ದಾರೆ.
ಇದನ್ನೂ ಓದಿ: ಮಗನ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ ತಂದೆ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 17.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಾವನ್ನು ಬಹಳ ಸೇಫ್ ಆಗಿ ಹಿಡಿಯುವಂತಹ ಈ ತಂತ್ರ ತುಂಬಾನೆ ಚೆನ್ನಾಗಿದೆ ಎಂದು ಆ ವ್ಯಕ್ತಿಯ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: