Viral Video : ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಕಾರೊಂದು ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಅಲ್ಲಿದ್ದ ಟ್ರಾಫಿಕ್ ಪೊಲೀಸ್ ಮತ್ತು ಕಾರಿನ ಚಾಲಕ ಸದ್ಯ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅನ್ನು ನೆಟ್ಟಿಗರು ಗಾಬರಿಯಿಂದ ನೋಡುತ್ತಿದ್ದಾರೆ.
ವರ್ಜೀನಿಯಾದ ಫೇರ್‌ಫ್ಯಾಕ್ಸ್ ಕೌಂಟಿಯ ಪೊಲೀಸ್ ಡ್ಯಾಶ್‌ಕ್ಯಾಮ್‌ನಲ್ಲಿ ಈ ವಿಡಿಯೋ ಚಿತ್ರೀಕರಣಗೊಂಡಿದೆ. ಈ ವಿಡಿಯೋ ಅನ್ನು ಪೊಲೀಸ್ ಇಲಾಖೆಯು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ; ಮೇ 1 ರಂದು, ಸುಮಾರು 11:38 ಗಂಟೆಗೆ, ಬಿಎಂಡಬ್ಲ್ಯೂ 750 ಕಾರಿನ ಬಳಿ ಪೊಲೀಸ್ ಸಮಾಲೋಚನೆ ನಡೆಸುತ್ತಿರುವ ಹೊತ್ತಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಬ್ರಾಡ್ಡಾಕ್ ರಸ್ತೆಯ ಸೌತ್ ಫೇರ್‌ಫ್ಯಾಕ್ಸ್ ಕೌಂಟಿ ಪಾರ್ಕ್ ದಾರಿಯಲ್ಲಿ ಕಪ್ಪುಬಣ್ಣದ ಬಿಎಂಡಬ್ಲ್ಯೂ ಎಂ 3 ಕಾರಿನಲ್ಲಿದ್ದ 17 ವರ್ಷದ ಚಾಲಕನು ಅತೀವೇಗದಲ್ಲಿ ಚಲಿಸುತ್ತಿದ್ದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡಿದೆ.’ ಎಂದು ಫೇರ್‌ಫ್ಯಾಕ್ಸ್ ಕೌಂಟಿ ಪೊಲೀಸ್ ಇಲಾಖೆ ತಿಳಿಸಿದೆ.
ಇದನ್ನ ಓದಿ : ಹಾವು ಆಕಳಿಸಿದಾಗ;ಬೆಳಗ್ಗೆ ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ; ಎಂದ ನೆಟ್ಟಿಗ
‘ಭೀಕರ ದುರಂತಕ್ಕೆ ಕಾರಣವಾಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಆದರೆ ಅಪ್ರಾಪ್ತ ವಯಸ್ಸಿನ ಚಾಲಕನ ಪೋಷಕರು ಈ ಸಂದರ್ಭವನ್ನು ಗಂಭೀರವಾಗಿ ಪರಿಗಣಿಸಬೇಕು. ಅಜಾಗರೂಕತೆಯಿಂದ ಚಲಿಸಿದರೆ ಇತರರಿಗೆ ಹೇಗೆ ತೊಂದರೆಯಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು’ ಎಂದಿದ್ದಾರೆ ಪೊಲೀಸರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:27 pm, Wed, 3 May 23