Viral Video: ಯುವತಿ ಜತೆ ಸಕತ್ ಸ್ಟೆಪ್ ಹಾಕಿದ ಮುದ್ದಾದ ಬೆಕ್ಕು; ವಿಡಿಯೋ ನೋಡಿ

ಯುವತಿ ಹಾಡು ಹೇಳುತ್ತಾ ನೃತ್ಯ ಮಾಡುತ್ತಿದ್ದಂತೆಯೇ ಬೆಕ್ಕು ಕೂಡಾ ನೃತ್ಯ ಮಾಡುತ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

Viral Video: ಯುವತಿ ಜತೆ ಸಕತ್ ಸ್ಟೆಪ್ ಹಾಕಿದ ಮುದ್ದಾದ ಬೆಕ್ಕು; ವಿಡಿಯೋ ನೋಡಿ
ಯುವತಿ ಜತೆ ಸಕತ್ ಸ್ಟೆಪ್ ಹಾಕಿದ ಮುದ್ದಾದ ಬೆಕ್ಕು
Edited By:

Updated on: Oct 17, 2021 | 1:55 PM

ಸಾಮಾನ್ಯವಾಗಿ ಸಾಕು ಪ್ರಾಣಿಗಳ ತುಂಟಾಟದ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ. ಅದರಲ್ಲಿಯೂ ಮುದ್ದಾದ ಬೆಕ್ಕಿನ ಕೀಟಲೆಗಳು, ಆಟಗಳು ಮನಸ್ಸಿಗೆ ಹೆಚ್ಚು ಖುಷಿ ಕೊಡುತ್ತವೆ. ಇಲ್ಲೊಂದು ಮುದ್ದಾದ ಬೆಕ್ಕಿದೆ. ಯುವತಿ ನೃತ್ಯ ಮಾಡುತ್ತಿದ್ದಂತೆಯೇ ಅವಳಂತೆಯೇ ನಟಿಸುತ್ತಿದೆ. ಚುಕುರಾದ ಬೆಕ್ಕಿನ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಗಮನಿಸುವಂತೆ ಯುವತಿ ಹಾಡು ಹೇಳುತ್ತಾ ನೃತ್ಯ ಮಾಡಲು ಮುಂದಾಗಿದ್ದಾಳೆ. ಪಂಜರದೊಳಗಿದ್ದ ಬೆಕ್ಕು ಕೂಡಾ ಅವಳಂತೆಯೇ ನಕಲಿಸಿದೆ. ಯುವತಿ ನೃತ್ಯ ಮಾಡುವಂತೆಯೇ ಬೆಕ್ಕು ಸಹ ಸ್ಟೆಪ್ ಹಾಕಿದೆ. ಬೆಕ್ಕಿನ ಬುದ್ಧಿವಂತಿಕೆಗೆ ಇದೀಗ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಬೆಕ್ಕು ನೃತ್ಯ ಮಾಡುತ್ತಿರುವುದನ್ನು ನೋಡಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ ಎಂದು ಓರ್ವರು ಹೇಳಿದ್ದಾರೆ. ಬೆಕ್ಕು ತುಂಬಾ ಮುದ್ದಾಗಿದೆ ಎಂದು ಮತ್ತೋರ್ವರು ಹೇಳಿದ್ದಾರೆ. ತುಂಟತನದ ಬೆಕ್ಕು ಯುವತಿಯಂತೆಯೇ ನರ್ತಿಸುತ್ತಿದೆ, ವಿಡಿಯೋ ಮಜವಾಗಿದೆ ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ.

ಇದನ್ನೂ ಓದಿ:

Viral Video: ತಲೆಯ ಮೇಲೆ 750 ಮೊಟ್ಟೆಗಳನ್ನು ಬ್ಯಾಲೆನ್ಸ್​ ಮಾಡಿದ ವ್ಯಕ್ತಿ; ಗಿನ್ನೆಸ್ ದಾಖಲೆ

Viral Video: ಬರೋಬ್ಬರಿ 550 ಕೇಕ್​ಗಳನ್ನು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ