Viral Video: ಅದೃಷ್ಟವಂತೆ ಬಾರ್ಬಿ; ಈಕೆಯನ್ನು ಮುದ್ದಿಸುತ್ತಿರುವ ಬೆಕ್ಕಿನ ತನ್ಮಯತೆ ಆಹಾ…

Barbie: ಅವಳ ಮುದ್ದಾದ ಕಣ್ಣುಗಳು, ನುಣುಪಾದ ಕೆನ್ನೆ, ಗುಲಾಬಿ ತುಟಿ, ನಯವಾದ ಕೂದಲು ಮತ್ತು ಆ ಮಂದಹಾಸಕ್ಕೆ ಮಾರುಹೋಗದವರು ಯಾರಿದ್ದಾರೆ? ಆಕೆಯನ್ನು ನೋಡಿದ ಯಾರಿಗೂ ಒಮ್ಮೆ ಮುದ್ದಾಡಬೇಕು ಎನ್ನಿಸುತ್ತದೆ. ಇನ್ನು ಮಕ್ಕಳನ್ನು ಕೇಳಬೇಕೆ? ಸದಾ ಬಾರ್ಬಿಯ ಜಗತ್ತಿನಲ್ಲಿಯೇ ಮುಳುಗಿರುತ್ತವೆ. ಆದರೆ ಬೆಕ್ಕಿಗೆ ಬಾರ್ಬಿ ಕಂಡರೆ ಮುದ್ದು ಉಕ್ಕುವುದೆ? ನೋಡಿ ಈ ವಿಡಿಯೋ.

Viral Video: ಅದೃಷ್ಟವಂತೆ ಬಾರ್ಬಿ; ಈಕೆಯನ್ನು ಮುದ್ದಿಸುತ್ತಿರುವ ಬೆಕ್ಕಿನ ತನ್ಮಯತೆ ಆಹಾ...
ಬಾರ್ಬಿಯನ್ನು ಮುದ್ದಿಸುತ್ತಿರುವ ಬೆಕ್ಕು

Updated on: Oct 13, 2023 | 2:53 PM

Cat: ಬೆಕ್ಕಿಗೆ ತುಂಡು ಕಾಗದ ಸಿಕ್ಕರೂ ಒಂದೇ. ಎಳೆ ದಾರ ಸಿಕ್ಕರೂ ಒಂದೇ. ಒಣಗಿದ ಎಲೆ ಸಿಕ್ಕರೂ ಒಂದೇ. ಬೆಲೆ ಬಾಳುವ ಏನು ಸಿಕ್ಕರೂ ಒಂದೇ; ಕ್ಷಣಾರ್ಧದಲ್ಲಿ ಎಲ್ಲವೂ ಚೂರುಚೂರು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ಬೆಕ್ಕು ಮಾತ್ರ ವಿಭಿನ್ನವಾಗಿದೆ. ಏಕೆಂದರೆ ಸತತವಾಗಿ ಅದು ಬಾರ್ಬಿಯನ್ನು ಮುದ್ದಿಸಿದೆ. ಮಕ್ಕಳು ಕೂಡ ಇಷ್ಟೊಂದು ಪ್ರೀತಿಯಿಂದ  ಬಾರ್ಬಿಯನ್ನು (Barbie) ಮುದ್ದಿಸಲಾರರು. ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಈ ಬೆಕ್ಕು ನನಗೆ ಬೇಕು ಎನ್ನುತ್ತಿದ್ದಾರೆ. ಪ್ರತಿಕ್ರಿಯೆಗಳ ಮೂಲಕ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ.

ಇದನ್ನೂ ಓದಿ: Viral Video: ‘ನನಗೇ ಗಾಡಿ ತೆಗಿ ಅಂತೀಯಾ?’ ಟ್ರಾಫಿಕ್ ಪೊಲೀಸನಿಗೆ ಚಪ್ಪಲಿಯಿಂದ ಬಾರಿಸಿದ ‘ದಬಂಗ್’ ಮಹಿಳೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 25ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ 2 ಮಿಲಿಯನ್​ಗಿಂತಲೂ  ಹೆಚ್ಚು ಜನರು ನೋಡಿದ್ದಾರೆ. ಸುಮಾರು 75,000 ಜನರು ಲೈಕ್ ಮಾಡಿದ್ದಾರೆ. ಇಲ್ಲಿ ಒಂದೇ ಬಾರ್ಬಿ ಇಲ್ಲ ಎರಡು ಮುದ್ದಾದ ಬಾರ್ಬಿಗಳಿವೆ. ಇವೆರಡೂ ನಮಗೆ ಬೇಕು ಎಂದಿದ್ದಾರೆ ಅನೇಕರು.

ಬಾರ್ಬಿಯನ್ನು ಮುದ್ದಿಸುತ್ತಿರುವ ಬೆಕ್ಕು

ಆಹಾ ಲಕ್ಕಿ ಬಾರ್ಬಿ ಎಂದಿದ್ದಾರೆ ಒಬ್ಬರು. ಎಷ್ಟು ಚೆಂದ ಮುತ್ತು ಕೊಡುತ್ತಿದೆ ಇದು ಎಂದಿದ್ದಾರೆ ಇನ್ನೊಬ್ಬರು. ಇಂದು ನಾನು ನೋಡಿದ ವಿಡಿಯೋಗಳಲ್ಲಿ ಇದು ಅತ್ಯಂತ ಅದ್ಭುತವಾದದ್ದು ಎಂದಿದ್ದಾರೆ ಮತ್ತೊಬ್ಬರು. ಬೆಕ್ಕು ಕೂಡ ಮನುಷ್ಯರಂತೆಯೇ ಇದೆಯಲ್ಲ, ಇದು ನಿಜಕ್ಕೂ ಅಚ್ಚರಿ ತರುವಂತಿದೆ ಎಂದಿದ್ದಾರೆ ಮಗದೊಬ್ಬರು. ನನಗೆ ಎಮೊಟಿಕಾನ್​ಗಳೇ ಸಾಕಾಗುತ್ತಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನೂ ಓದಿ : Viral Video: ನಡುರಸ್ತೆಯಲ್ಲಿ ಯುವತಿಯ ಡ್ಯಾನ್ಸ್​; ಮೈಚಳಿ ಬಿಟ್ಟು ಕುಣಿಯಲು ಧೈರ್ಯ ಬೇಕು ಎಂದ ನೆಟ್ಟಿಗರು

ಬಾರ್ಬಿಯ ಕೂದಲು, ಕೈ, ಕಾಲು, ಬಟ್ಟೆ ಎಲ್ಲವೂ ಬೆಕ್ಕಿನ ಬಾಯಿಗೆ ಆರಾಮಾಗಿ ಸಿಗುತ್ತವೆ, ಯಾಕೆ ಇದು ಆಕೆಯನ್ನು ಕಚ್ಚಿಕಚ್ಚಿ ತುಂಡಾಗಿಸುತ್ತಿಲ್ಲ? ಎಂದು ಕೇಳಿದ್ದಾರೆ ಒಬ್ಬರು. ಬಾರ್ಬಿ ಎಂದರೆ ಮನುಷ್ಯರಿಗಷ್ಟೇ ಅಲ್ಲ ಬೆಕ್ಕಿಗೂ ಇಷ್ಟ ಎನ್ನುವುದು ಈಗ ಗೊತ್ತಾಯಿತೆ? ಎಂದು ಪ್ರತ್ಯುತ್ತರವಾಗಿ ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us